ಶ್ರೀನಗರ, ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‍ಪಿಎಫ್ ಯೋಧರ ಮೇಲಿನ ಭೀಕರ ದಾಳಿಯ ಮಾಸ್ಟರ್ ಮೈಂಡ್‍ನು ರಕ್ಷಣಾ ಪಡೆಗಳು ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಿವೆ. ಗುರುವಾರ ಕಾಶ್ಮೀರದ ದಕ್ಷಿಣ ಭಾಗದ ಕುಗ್ಲಮ್ ಜಿಲ್ಲೆಯ ಚಲ್ವಾಗಂ ಪ್ರದೇಶವನ್ನು ಸುತ್ತುವರೆದು, ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಶುಕ್ರವಾರ ಬೆಳಗ್ಗೆ ಎನ್‍ಕೌಂಟರ್ ನಡೆದ ಜಾಗವನ್ನು ಪರಿಶೀಲಿಸಲಾಗಿದ್ದು, ಒಬ್ಬ ಭಯೋತ್ಪಾದಕ ಶವ ಪತ್ತೆಯಾಗಿದೆ
. ಶವದ ಜೊತೆ ಆಕ್ಷೇಪಾರ್ಹ ಸಾಹಿತ್ಯ ಮತ್ತು ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ಪಡೆಗಳ ವಕ್ತಾರರು ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಅಮೀರ್ ರಿಯಾಜ್ ಎಂದು ಗುರುತಿಸಲಾಗಿದೆ.
ಈತ ಮುಜಾಯಿದೀನ್ ಗಜ್ವಾತಲ್ ಹಿಂದ್ ಸಂಘಟನೆ, ಮುಜಾಯಿದ್ದೀನ್‍ನೊಂದಿಗೆ ಕೆಲಸ ಮಾಡುತ್ತಿದ್ದ. ಪುಲ್ವಾಮ ದಾಳಿಯಲ್ಲಿ ಪ್ರಮುಖವಾಗಿ ಭಾಗವಹಿಸಿದ್ದ ಆರೋಪಿಯನ್ನು ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ನಿನ್ನೆ ಯೋಧರ ಗುಂಡಿಗೆ ಬಲಿಯಾದ ರಿಯಾಜ್ ಆತನ ಸಂಬಂಯಾಗಿದ್ದು, ಪುಲ್ವಾಮ ದಾಳಿಯ ಸಂಚಿನಲ್ಲಿ ಭಾಗವಹಿಸಿದ್ದ ಎಂದು ಹೇಳಲಾಗಿದೆ.