ನಿನ್ನ ಅದೆಷ್ಟು ಕನಸುಗಳನ್ನು
ಹೂತಿಟ್ಟಿದ್ದೆ ನನ್ನೆದೆಯೊಳಗೆ
ಮನದ ಕನಸು ಒಂದೊಂದೇ
ಹೆಕ್ಕಿ ಹೊರಗಿಡುತ್ತೇನೆ………..
ಇಲ್ಲೆಲ್ಲೋ ಕಳಕೊಂಡ ನಿನ್ನನ್ನು
ನೆನಪಿನ ಅಲೆಯಲ್ಲಿ ಹುಡುಕುತ್ತೇನೆ
ನನ್ನ ಮನದ ಕಣ್ಣಂಚಲಿ
ಮೂಡುತ್ತೀಯ ಹನಿಯಾಗಿ…….
ನನ್ನ ನೊಂದ ಕಣ್ಣಿನಲ್ಲಿ ಹರಿದ
ಒಂದಿಷ್ಟು ಹನಿಗಳು ಮಾತ್ರ
ನಿನ್ನ ನೆನಪುಗಳು ಉಳಿಯುತ್ತೇ
ನಾ ಅದನ್ನು ಆರಿಸಿ ಕವಿತೆ ಕಟ್ಟುವೆ………..
ಟಿ.ಎಸ್.ಕೃಷ್ಣಮೂರ್ತಿ
ತುಮಕೂರು