ಪ್ರತಿಷ್ಠಿತ ವಿದ್ಯಾಸಂಸ್ಥೆಯಿಂದ ಭೂ ಕಬಳಿಕೆ: ಆರೋಪ

ತುಮಕೂರು: ನಗರದ ಉಪ್ಪಾರಹಳ್ಳಿಯ ವಿಜಯನಗರದಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರ ಕಾರ್ಯದರ್ಶಿಗಳು ಉಪ್ಪಾರಹಳ್ಳಿ ಸರ್ವೆ ನಂ 22/2ಸಿ2ಎ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ,ಬೇರೊಬ್ಬರಿಗೆ ಸೇರಿದ ಜಮೀನು ಕಬಳಿಸುವ ಕುತಂತ್ರ ಮಾಡಿದ್ದಾರೆ ಎಂದು ಸದರಿ ಸರ್ವೆ ನಂನ ಮೂಲ ವಾರಸುದಾರರಾದ ಟಿ.ಜಿ.ರಮೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಉಪ್ಪಾರಹಳ್ಳಿ ಸರ್ವೆ ನಂಬರ್ 22/2ಸಿ2ಎ ನಲ್ಲಿನ ಸುಮಾರು 2.35 ಎಕರೆ ಜಮೀನನ್ನು 14-೦6-1946ರಲ್ಲಿ ಹಕ್ಕೀಂ ಅಬ್ದುಲ್‌ಸಮದ್ ಎಂಬುವವರಿಂದ ದೊಡ್ಡಹನುಮಯ್ಯ ಅವರು ಖರೀದಿ ಮಾಡಿ, 1947ರಲ್ಲಿ ಹದ್ದುಬಸ್ತು ಮಾಡಿಸಿದ್ದಾರೆ.ಅವರ ಸಾವಿನ ನಂತರ ಅವರ ಪತ್ನಿಯವರಾದ ಕೆಂಪಮ್ಮ ಅವರಿಗೆ 1981-82ರಲ್ಲಿ ಪವತಿ ಖಾತೆಯಾಗಿದ್ದು,ಅಂದಿನಿಂದ ಇಂದಿನವರೆಗೆ ಅನುಭವ ಮತ್ತು ಸ್ವಾಧೀನ ಎರಡರಲ್ಲಿಯೂ ಇವರೇ ಇದ್ದು,ಇವರ ಹೆಸರಿಗೆ ಪಹಣಿ,ಇಸಿ ಇದೆ.ಆದರೆ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿಗಳು ಸದರಿ ಸರ್ವೆನಂಬರ್‌ಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ,ನಮ್ಮ ತಾತನವರ ಆಸ್ತಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.ಈ ಸಂಬಂಧ ತಹಶೀಲ್ದಾರ್,ಎ.ಸಿ.ಮತ್ತು ಡಿಸಿ ಕೋರ್ಟುಗಳಲ್ಲಿ ಶಿಕ್ಷಣ ಸಂಸ್ಥೆಯವರು ಸಲ್ಲಿಸಿದ್ದ ಆರ್.ಆರ್.ಟಿ 135/81/82,ಆರ್.ಆರ್.ಟಿ 11/93/94,,ಆರ್.ಆರ್.ಟಿ 83/89 ಮೇಲ್ಮನವಿಗಳು ವಜಾ ಆಗಿವೆ ಎಂದರು.

ಶಿಕ್ಷಣ ಸಂಸ್ಥೆಯವರು ಸಲ್ಲಿಸಿದ್ದ ಮೇಲ್ಮನವಿಗಳು ತಹಶೀಲ್ದಾರ್,ಎಸಿ,ಡೀಸಿ ಕೋರ್ಟುಗಳಲ್ಲಿ ವಜಾ ಆಗಿದ್ದರೂ ಸಹ, ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಮೀನಿನ ಮಾಲೀಕತ್ವ ಕುರಿತು ತೀರ್ಪು ಶಿಕ್ಷಣ ಸಂಸ್ಥೆಯ ಪರವಾಗಿ ಬಂದಿದೆ. ಇದನ್ನೇ ಮುಂದಿಟ್ಟುಕೊಂಡು ತಮ್ಮದಲ್ಲದೆ ಜಮೀನಿನ ಭೂ ಪರಿಹಾರ ಪಡೆಯಲು ಮುಂದಾಗಿರುವುದಲ್ಲದೆ,ರೈಲ್ವೆ ಮೇಲ್ಸೇತುವೆಗೆ ವಶಪಡಿಸಿಕೊಳ್ಳಲಾದ ಭೂಮಿಗೆ ಕೆಂಪಮ್ಮ ಅವರಿಗೆ ಮಂಜೂರಾದ ಪರಿಹಾರದ ಹಣ ಪಡೆಯಲು ತಕರಾರು ಸಲ್ಲಿಸಿ, ಕಿರುಕುಳ ನೀಡುತ್ತಿದ್ದಾರೆ.ನಮ್ಮ ಅಜ್ಜಿಯ ಹೆಸರಿಗೆ ಮಂಜೂರು ಆಗಿರುವ ಪರಿಹಾರದ ಹಣ ಪಡೆಯಲು ಅವಕಾಶ ನೀಡಬೇಕು ಹಾಗೂ ಜಮೀನಿನ ದಾಖಲೆಗಳಲ್ಲಿ ಆಗಿರುವ ಪೋರ್ಜರಿ ಪಹಣಿಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಸದರಿ ಭೂಮಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯ ಆಬಿಲೇಖಾಲಯದಲ್ಲಿರುವ ಪಹಣಿಗಳಿಗೂ,ಶಿಕ್ಷಣ ಸಂಸ್ಥೆಯವರು ಜೆಎಂಎಫ್‌ಸಿ ಕೋರ್ಟಿಗೆ ಸಲ್ಲಿಸಿರುವ ಪಹಣಿಗಳಲ್ಲಿ ಸಾಕಷ್ಟು ವೆತ್ಯಾಸವಿರುವುದನ್ನು ಒಪ್ಪಿಕೊಂಡು16/09/2021ರಂದು ಉಪವಿಭಾಗಾಧಿಕಾರಿಗಳು ಆರ್.ಟಿ.ಐ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಹಿಂಬರಹ ನೀಡಿದ್ದಾರೆ.ಅಲ್ಲದೆ ಇದೇ ಅಧಿಕಾರಿಗಳು 22/09/2021ರಲ್ಲಿ ಮತ್ತೊಂದು ಆರ್.ಟಿ.ಐ ಅರ್ಜಿಗೆ ನೀಡಿರುವ ಹಿಂಬರಹದಲ್ಲಿ ಉಪ್ಪಾರಹಳ್ಳಿ ಸರ್ವೆ ನಂ 22/2ಸಿ2ಎಯಿಂದ ಉಪ್ಪಾರಹಳ್ಳಿ ರೈಲ್ವೆ ಮೇಲ್ಸೇತುವೆಗೆ ವಶಪಡಿಸಿಕೊಳ್ಳಲಾದ ೦.24 ಗುಂಟೆ ಜಮೀನಿನ ಪರಿಹಾರವನ್ನು ಭೂಮಿಯ ಹಾಲಿ ಮಾಲೀಕರಾದ ಕೆಂಪಮ್ಮ ಕೋಂ ದೊಡ್ಡ ಹನುಮಯ್ಯ ಅವರಿಗೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ಸದರಿ ಪರಿಹಾರದ ಹಣ ಪಡೆಯಲು ಜಿಲ್ಲಾಡಳಿತ ಅನುವು ಮಾಡಿಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಟಿ.ಜಿ.ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್.ಟಿ.ಐ ಕಾರ್ಯಕರ್ತರಾದ ರಂಜನ್ ಮತ್ತಿತರರು ಉಪಸ್ಥಿತರಿದ್ದರು.

You May Also Like

error: Content is protected !!