ಅಪಘಾತ ಅಪ್ಪು ಅಭಿಮಾನಿ ಸಾವು: ಕಣ್ಣುಗಳ ದಾನ ಮಾಡಿ ಮಾನವೀಯತೆ ಮರೆದ ಕುಟುಂಬ

ಕುಣಿಗಲ್ : ರಸ್ತೆ ಅಪಘಾತದಲ್ಲಿ ಚಲನಚಿತ್ರ ನಟ ಪುನೀತ್‌ರಾಜಕುಮಾರ್ ಅಭಿಮಾನಿ ಮೃತಪಟ್ಟಿದ್ದು, ಕಣ್ಣು ದಾನ ಮಾಡಿ ಸಾವಿನಲ್ಲೂ ಮಾನವೀಯಕತೆ ಮರೆದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬಿ.ಎಂ ರಸ್ತೆ ಹನುಮಾಪುರ ಗ್ರಾಮದ ಸಮೀಪ ಸೋಮವಾರ ಬೆಳಗ್ಗೆ ನಡೆದಿದೆ.

ಮೂಲತಃ ತುಮಕೂರು ತಾಲೂಕು, ಹೆಬ್ಬೂರು ಹೋಬಳಿ ಶ್ರೀ ಕಂಠನಪಾಳ್ಯ ಗ್ರಾಮ, ಹಾಲಿ ಬೆಂಗಳೂರು ಸುಂಕದಕಟ್ಟೆ ವಾಸಿ ಕಾಂತರಾಜು (37) ಮೃತ ದುರದೈವಿಯಾಗಿದ್ದಾನೆ,

ಮೃತ ಕಾಂತರಾಜು, ಹೆಂಡತಿ ಪಂಕಜ ಹಾಗೂ ಇಬ್ಬರು ಮಕ್ಕಳೊಂದಿಗೆ ಕುಣಿಗಲ್ ತಾಲೂಕಿನ ಯಾಚಘಟ್ಟ ಗ್ರಾಮದ ತಮ್ಮ ಸಂಬಂಧಿಕರ ಮಧುವೆಗೆ ಭಾನುವಾರ ಬಂದು, ಮಧುವೆ ಮುಗಿಸಿಕೊಂಡು ಸೋಮವಾರ ಆಟೋ ರಿಕ್ಷದಲ್ಲಿ ಬೆಂಗಳೂರಿನ ಸುಂಕದಕಟ್ಟೆಗೆ ಹಿಂದಿರುಗುತ್ತಿರ ಬೇಕಾದರೆ ಹಾಸನ ಕಡೆಯಿಂದ ಬಂದ ಮಾರುತಿ ಜಿಪ್ಸಿ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷ ಪಲ್ಟಿಯಾಗಿ, ಕಾಂತರಾಜು ತೀವ್ರವಾಗಿ ಗಾಯಗೊಂಡಿರು, ಗಾಯಾಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ ಮೃತಪಟ್ಟಿದ್ದಾನೆ, 

ಸಾವಿನಲ್ಲೂ ಸಾರ್ಥಕತೆ : ಗಾಯಾಳು ಕಾಂತರಾಜುನನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ, ಸಾವು ಬಧುಕಿನೊಂದಿಗೆ ಹೋರಾಟ ನಡೆಸುತ್ತಿದ್ದರೂ ಈ ವೇಳೆ ನಾನು ಅಪ್ಪು ಅಭಿಮಾನಿಯಾಗಿದ್ದು ಆಕಸ್ಮಾತ್ ನಾನು ಮೃತಪಟ್ಟರೇ ನನ್ನ ಎರಡು ಕಣ್ಣುಗಳನ್ನು ದಾನ ಮಾಡುವಂತೆ ಪಕ್ಕದಲ್ಲೇ ಇದ್ದ ತನ್ನ ಹೆಂಡತಿ ಪಂಕಜಗೇ ತಿಳಿಸಿ ಮೃತರಾದರೂ ತನ್ನ ಪತಿಯ ಆಸೆಯಂತೆ ಕುಣಿಗಲ್ ಪಟ್ಟಣದ ಎಂ.ಎಂ ಆಸ್ಪತ್ರೆಯ ನೇತ್ರ ತಜ್ಞ ಡಾ.ಎಂ.ಆರ್.ರವಿಕುಮಾರ್ ಕಣ್ಣುಗಳನ್ನು ಕಸಿ ಮಾಡುವ ಮೂಲಕ ಕಣ್ಣುಗಳನ್ನು ದಾನವಾಗಿ ಸ್ವೀಕರಿಸಿದರು, ಸಾವಿನಲ್ಲೂ ಕಾಂತರಾಜು ಮಾನವೀಯತೆ ಮರೆದಿದ್ದು ತಾಲೂಕಿನ ನಾಗರೀಕರ ಪ್ರಶಂಸೆಗೆ ಪಾತ್ರವಾಗಿದಲ್ಲದೇ ಇತರರಿಗೆ ಪ್ರೇರಣೆಯಾಗಿದ್ದಾರೆ,

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!