ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಮುಳುಗುತ್ತಿದೆ, ಇದರ ಲಾಭ ಪಡೆದುಕೊಳ್ಳಿ : ಜೆ.ಸಿ ಮಾಧುಸ್ವಾಮಿ ಕರೆ

ಕುಣಿಗಲ್ : ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ, ಬಿಜೆಪಿ ಕಾಂಗ್ರೆಸ್ ನಡುವೆ ಮಾತ್ರ ನೇರ ಸ್ಪರ್ಧೆ ಇದ್ದು, ಹೀಗಾಗಿ ವಿಧಾನ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು, ಕ್ಷೀಣಿಸುತ್ತಿರುವ ಜೆಡಿಎಸ್‌ನ ಲಾಭ ಪಡೆದು, ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಪಟ್ಟಣದ ಎಸ್.ಎಸ್.ಪಾರ್ಟಿ ಹಾಲ್‌ನಲ್ಲಿ ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆಯ ಪೂರ್ವ ಭಾವಿ ಸಭೆಯಲ್ಲಿ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಜೆಡಿಎಸ್ ಮುಳುಗುತ್ತಿದೆ: ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್‌ನಲ್ಲಿ ಏರುಪೇರಾಗುತ್ತಿದೆ ಇದರ ಲಾಭವನ್ನು ಬೇರೆವರಿಗೆ ಬಿಟ್ಟುಕೊಡದೇ ಬಿಜೆಪಿ ಪಾಲಾಗುವಂತೆ ಮಾಡಿಕೊಳ್ಳಬೇಕು. ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕಾಂತರಾಜು ಜೆಡಿಎಸ್ ತೊರೆಯುವ ಯೋಚನೆಯಲ್ಲಿದ್ದಾರೆ. ಅದ್ದರಿಂದ ಬಿಜೆಪಿ ಇದರ ಲಾಭ ಪಡೆದುಕೊಳ್ಳವ ನಿಟ್ಟಿನಲ್ಲಿ ಕಾರ್ಯೋನ್ಮೂಕರಾಗಬೇಕೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಇನ್ನೂ ಎರಡುವರೆ ವರ್ಷ ಬಿಜೆಪಿ ಸರಕಾರ ಅಡಳಿತದಲ್ಲಿ ಇರುತ್ತದೆ. ರಾಜ್ಯದಲ್ಲಿಯೂ ಇನ್ನೂ ಒಂದು ವರೆವರ್ಷ ಬಿಜೆಪಿ ಸರಕಾರ ಅಡಳಿತದಲ್ಲಿ ಇರುತ್ತದೆ. ಈ ಸಂಬಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿರುವ ಅಭಿವೃದ್ದಿ ಯೋಜನೆಗಳನ್ನು ಗ್ರಾ.ಪಂ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟು ಸೋಲುವ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕದಂತೆ ಗೆಲುವು ಸಾಧಿಸುವ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸುವ ಕೆಲಸವನ್ನು ಮಾಡಬೆಕಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠ : ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬಹಳಷ್ಟು ಬಲಿಷ್ಠಚಾಗಿದೆ. ಲೋಕಸಭಾ ಚುನಾವಣೆ, ಶಿರಾ ಉಪ ಚುನಾವಣೆ ಹಾಗೂ ಪದವಿಧರ ಕ್ಷೆತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದೆ ಸಾಕ್ಷಿಯಾಗಿದೆ. ಆದರೂ ನಾವು ಉದಾಸೀನ ಮಾಡದೇ ವಿಧಾನ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಗ್ರಾ.ಪಂ ಸದಸ್ಯರು ಶ್ರವಹಿಸಬೇಕಾಗಿದೆ ಎಂದು ತಿಳಿಸಿದರು.

ಬಾಕ್ಸ್ ಮಾಡಿ

ಮಾರ್ಕೋನಹಳ್ಳಿ ಮಂಗಳಾ ಲಿಂಕ್ ಕೆನಾಲ್ ಮಂಜೂರು.:-

ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳಾ ಜಲಾಶಯಕ್ಕೆ ಲಿಂಕ್ ಕೆನಾಲ್ ಯೋಜನೆಗೆ ಸರಕಾರ ಬದ್ದವಾಗಿದೆ. ಕ್ರೀಯಾಯೋಜನೆ ಸಲ್ಲಿಸಲಾಗಿದೆ ವಿಧಾನ ಪರಿಷತ್ ಚುನಾವಣೆ ಇಲ್ಲದಿದ್ದರೇ ಈ ವೇಳೆಗೆ ಟೆಂಡರ್ ಪ್ರಕ್ರಿಯೇ ಪ್ರಾರಂಭವಾಗುತ್ತಿತ್ತು. ಚುನಾವಣೆ ನಂತರ ಲಿಂಕ್ ಕೆನಾಲ್ ಮಂಜೂರಾತಿ ಮಾಡಿ ಗುದ್ದಲಿ ಪೂಜೆ ನೇರವೇರಿಸಲಾಗುವುದೆಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಭಿಕ್ಷೆ ಬೇಡುವವರು ನಾನಲ್ಲ : ನೀರಾವರಿ ಸೇರಿದಂತೆ ಇತರೆ ಸೌಲಭ್ಯಗಳು ನಾವು ಕೊಡುತ್ತಿದ್ದೇವೆ ಎಂದು ಈ ಕ್ಷೇತ್ರದ ಶಾಸಕರು ಹೇಳುತ್ತಿದ್ದಾರೆ ಎಂದು ಸಭೆಯಲ್ಲಿ ಕಾರ್ಯಕರ್ತರೊಬ್ಬರು ಸಚಿವರ ಗಮನಕ್ಕೆ ತಂದರು, ಅನುದಾನ ಕೊಡುವವರು ನಾವು ನಮ್ಮ ಬಳಿ ಬಂದು ಶಾಸಕರು ಭಿಕ್ಷೆ ಕೇಳಬೇಕಾಗಿದೆ ಹಾಗಾಗಿ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಬೇಕಾದಲ್ಲಿ ನನ್ನ ಬಳಿ ಬಂದು ಕೇಳಿ ಎಂದು ತಿಳಿಸಿದರು.

ಡಿ.ಕೃಷ್ಣಕುಮಾರ ಅವರೇ ನಮ್ಮ ಅಭ್ಯರ್ಥಿ:-

ಕಳೆದ ಮೂರು ವಿಧಾನ ಸಭೆ ಚುನಾವಣೆಯಲ್ಲಿಯೂ ಡಿ.ಕೃಷ್ಣಕುಮಾರ್ ಸೋತ್ತಿದ್ದರೂ ಪಕ್ಷ ಸಂಘಟನೆಯಲ್ಲಿಯೇ ಮುಂದುವರಿದುಕೊಂಡು ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಖಂಡಿತಾ ಗೆದ್ದು ಶಾಸಕರಾಗಲಿದ್ದಾರೆ. ಯಾರಿಗೂ ಅನುಮಾನವೇ ಬೇಡ ಎಂದು ಸಚಿವ ಕಾರ್ಯಕರ್ತರಿಗೆ ತಿಳಿಸಿದರು.

ಮಾಜಿ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ ಕುಣಿಗಲ್ ತಾಲೂಕು ರಾಜಕೀಯವಾಗಿ ಬಹಳ ಬಳಿಷ್ಠವಾದ ತಾಲೂಕು. ವಿಧಾನ ಪರಿಷತ್ ಚುನಾವಣೆಗೆ ಅತೀ ಹೆಚ್ಚು ಮತಗಳನ್ನು ಕೊಡಿಸುವ ಮೂಲಕ ಮುಂದಿನ ವಿಧಾನ ಸಭೆ ಚುನಾವಣೆಗೆ ಸಂದೇಶ ರವಾನಿಸುವ ಕೆಲಸವನ್ನು ಇಲ್ಲಿನ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ತಿಳಿಸಿದರು.

ರಾಜ್ಯ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾದ ಡಿ.ಕೃಷ್ಣಕುಮಾರ್, ಜಿಲ್ಲಾ ಎಸ್‌ಸಿ ಬಿಜೆಪಿ ಮೋರ್ಚಾದ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್.ಬಲರಾಮು, ವಿಧಾನ ಪರಿಷತ್ ಬೊಜೆಪಿ ಅಭ್ಯರ್ಥಿ ಹುಲಿನಾಯಕ್, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸುಜಾತ ಚಂದ್ರಶೇಖರ್ ಮುಂತಾದವರು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!