ಹುಷಾರ್, ಚಳಿ-ಮಳೆಯಿಂದ ಹೆಚ್ಚುತ್ತಿದೆ ಡೆಂಘೀ, ಚಿಕೂನ್ ಗುನ್ಯಾ

ಬೆಂಗಳೂರು: ನಗರದಲ್ಲಿ ನಿರಂತರವಾಗಿ ಚಳಿ ಹಾಗೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೀ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ.

ಕಳೆದ ಒಂದು ವಾರದಿಂದ ಬೆಂಗಳೂರು ನಗರದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಚಳಿಯ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಡೆಂಘೀ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳು ಕೂಡ ಹೆಚ್ಚಾಗುತ್ತಲೇ ಇವೆ. ರಾಜ್ಯದಲ್ಲಿ ಒಟ್ಟು 5185 ಡೆಂಘೀ ಪ್ರಕರಣಗಳು ಕಂಡುಬಂದಿದ್ದು, 1621 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.

ಮಳೆ ಅಥವಾ ಇತರೆ ನೀರು ತಗ್ಗಿನಲ್ಲಿ ನಿಲ್ಲುವಂತೆ ಮಾಡಬೇಡಿ. ಮನೆಯ ಸುತ್ತಮುತ್ತ ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ. ಇದು ಲಾರ್ವಾ ಬ್ರೀಡ್ ಆಗುವ ಸಮಯ. ಹೀಗಾಗಿ ಸೊಳ್ಳೆಗಳ ಹುಟ್ಟಿಗೆ ದಾರಿ ಮಾಡಬೇಡಿ. ಈಗಾಗಲೇ ಬಿಬಿಎಂಪಿ ಆಂಟಿ ಲಾರ್ವಾ ಸಿಂಪಡಿಕೆ ಮಾಡುವ ಕೆಲಸ ಶುರು ಮಾಡಿದೆ. ಆದರೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಲ್ ಚಂದ್ರ ತಿಳಿಸಿದ್ದಾರೆ.

ಪ್ರಜಾಮನ ನ್ಯೂಸ್ ಡೆಸ್ಕ್.

prajamana.com 9448797745

You May Also Like

error: Content is protected !!