ಚೆಕ್ ಡ್ಯಾಂ ನಿರ್ಮಣದಿಂದ ಕೃಷಿಗೆ ಅನುಕೂಲ: ಕೆ.ಎನ್ ರಾಜಣ್ಣ

ಮಧುಗಿರಿ: ಗಡಿಭಾಗದ ರೈತರು ಬಹಳಷ್ಟು ಶ್ರಮ ಜೀವಿಗಳಾಗಿದ್ದು ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ ಅವರಿಗೆ ನೀರು ಕೊಡಲೆ ಬೇಕು ಎಂಬ ಉದ್ದೇಶದಿಂದ ನನ್ನ ಅವಧಿಯಲ್ಲಿ ಅಂದಾಜು 20 ಕೋಟಿ ರೂ ಗಳ ವೆಚ್ಚದಲ್ಲಿ ಚೆಕ್ ನಿರ್ಮಿಸಿರುವುದು ಸಾರ್ಥಕ ವಾಗಿದೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.

ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ವೀರನಾಗೇನಹಳ್ಳಿ ಹಾಗೂ ಇಮ್ಮಡಗೊಂಡನಹಳ್ಳಿ ಗ್ರಾಮಗಳ ನಡುವೆ ಜಯಮಂಗಲಿ ನದಿಗೆ ಅಡ್ಡಲಾಗಿ ಕಟ್ಟಿರುವ 6ಕೋಟಿ.75 ಲಕ್ಷರೂ ಗಳ ವೆಚ್ಚದಲ್ಲಿ 2014 ರಲ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂ ತುಂಬಿ ಹರಿಯುತ್ತಿದ್ದರ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು.
ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆ ಜನರ ವಿಶ್ವಾಸ ಹೆಚ್ಚಿಸಿದ್ದು ಮುಂದಿನ ಕೃಷಿ ಚಟುವಟಿಕೆಗಳು ಗರಿಗೆದಲಿವೆ. ನನ್ನ ಅವಧಿಯಲ್ಲಿ ತಾಲ್ಲೂಕಿನ ಜಯಮಂಗಲಿ ನದಿ ನೀರಿಗೆ ಅಡ್ಡಲಾಗಿ 3 ಚೆಕ್ ಡ್ಯಾಂ ಹಾಗೂ ಬೃಹತ್ ಸೇತುವೆ ನಿರ್ಮಿಸಿದ ಫಲವಾಗಿ ಇಂದೂ ಚೆಕ್ ಡ್ಯಾಂಗಳು ಭರ್ತಿಯಾಗಿ ತುಂಬಿ ಹರಿಯುತ್ತಿದೆ .

1932 ರಲ್ಲಿಯೇ ಮೈಸೂರು ಹಾಗೂ ನೆರೆಯ ಆಂಧ್ರಪ್ರದೇಶದ ಸರಕಾರಗಳೊಂದಿಗೆ ಆಂಧ್ರಪ್ರದೇಶ ಹಾಗೂ ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಅಕ್ಕಿರಾಂಪುರದ ವರೆಗೆ18 ಕಿ.ಮೀ. ವರೆಗೆ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಒಡಂಬಡಿಕೆಯಾಗಿತ್ತು ಹಾಗೂ ಜಯಮಂಗಲಿಯ ನೀರಿಗೆ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತಿರಲಿಲ್ಲ ಆದರೆ ರೀಪೇರಿಗಳಿಗೆ ಆದ್ಯತೆ ಇರುವುದನ್ನು ಮನಗೊಂಡು ತಾಲ್ಲೂಕಿನ ಎರಡು ರಾಜ್ಯಗಳ ಜನರ ಹಿತಾದೃಷ್ಟಿಯಿಂದ ಅಂದಿನ ಅಧಿಕಾರಿಗಳ ಪರಿಶ್ರಮದ ಮೂಲಕ ಜಯಮಂಗಲಿಗೆ ವೀರನಾಗೇನಹಳ್ಳಿ ಮತ್ತು ಕಾಳೇನಹಳ್ಳಿಯ ಸಮೀಪ 1 ಕೋಟಿ 41 ಲಕ್ಷ ರೂ ಗಳವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಯಿತು.

ಜೊತೆಗೆ ಈ ಭಾಗದಲ್ಲಿನ ಹಳ್ಳದ ಸಮೀಪದ ಗ್ರಾಮಸ್ಥರು ನೀರಿಗಾಗಿ ಆಗಾಗ ಜಗಳವಾಡುವುದನ್ನು ಮನಗಂಡ ಜಯಮಂಗಲಿ ನದಿಗೆ ಸಬ್ ಚೆಕ್ ಡ್ಯಾಂ ಗಳನ್ನು ಸಹ ನಿರ್ಮಿಸಲಾಗಿದೆ ಎಂದರು.

ನಮ್ಮ ಮನೆಯ ಯಜಮಾನರು ದೂರದಲ್ಲಿರುವ ಡ್ಯಾಂ ಗಳನ್ನು ನೋಡಲಂತು ಕರೆದುಕೊಂಡು ಹೋಗುವುದಿಲ್ಲ ನಮ್ಮ ಸಾಹೇಬರು ಇಲ್ಲಿಯೇ ನಿರ್ಮಿಸಿರುವ ಡ್ಯಾಂ ನಲ್ಲಿ ಹರಿಯುತ್ತಿರುವ ನೀರನ್ನು ನೋಡಿ ಖುಷಿ ಪಡುತ್ತೇನೆ. ಲಕ್ಷಮ್ಮ ಗ್ರಾಮಸ್ಥೆ

ಬಾಕ್ಸ್ : ತಮ್ಮ ಅವಧಿಯಲ್ಲಿ ನಿರ್ಮಿಸಿದ ಚೆಕ್ ಡ್ಯಾಂ ನಲ್ಲಿ ನೀರು ಹರಿಯುತ್ತಿದ್ದನ್ನು ಕಂಡು ಜಯಮಂಗಲಿ ನದಿಯ ನೀರನ್ನು ಕಣ್ಣಿಗೆ ಸ್ಮರ್ಶಿಸಿ ನಮಸ್ಕರಿಸಿ ಪ್ರೋಕ್ಷಣೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಸುಗುಮವಾಗಿ ನಡೆಯಲಿ ಎಂದು ಜನತೆಗೆ ಶುಭಹಾರೈಸಿದರು.

ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಪುರಸಭೆಯ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ , ಎನ್ ಗಂಗಣ್ಣ ಮುಖಂಡರುಗಳಾದ ಆದಿನಾರಾಯಣರೆಡ್ಡಿ, ಪಿ.ಸಿ.ಕೃಷ್ಣರೆಡ್ಡಿ, ತಿಮ್ಮಾರೆಡ್ಡಿ, ವಿ.ಆರ್.ಭಾಸ್ಕರ್. ಜೆಡಿ.ವೆಂಕಟೇಶ್, ಎಸ್ ಡಿ ಕೆ ವೆಂಕಟೇಶ್ ಡಿ ಸಿ ಸಿ ಬ್ಯಾಂಕ್ ಮೇಲ್ವಿಚಾರಕರಾದ ರಾಮಕೃಷ್ಣ, ನರಸಿಂಹಮೂರ್ತಿ, ಸೀತರಾಂ, ಸಂತೋಷ್, ಗ್ರಾಪಂ ಅಧ್ಯಕ್ಷ ಸೀನಪ್ಪ, ಪಂಚಾಕ್ಷರಯ್ಯ, ಪ್ರಸಾದ್ ರೆಡ್ಡಿ, ಕಾಂತರಾಜು, ನಾಗರಾಜು , ಪುನೀತ್, ಹಾಗೂ ಗ್ರಾಮಸ್ಥರು ಇದ್ದರು.

You May Also Like

error: Content is protected !!