ಮದಲೂರು ಕೆರೆ ಕೋಡಿ ಹರಿಯುವುದು ಶತಸಿದ್ಧ: ಡಾ.ಸಿ.ಎಂ.ರಾಜೇಶ್ ಗೌಡ

ಶಿರಾ :ಮದಲೂರು ಕೆರೆ ೪೦ ವರ್ಷಗಳ ನಂತರ ತುಂಬಲು ಇನ್ನು ಕೆಲವೇ ಅಡಿಗಳು ಬಾಕಿ ಇದ್ದು, ಇದು ನನ್ನ ರಾಜಕೀಯ ಜೀವನದಲ್ಲಿ ಮರೆಯಲಾಗದ ಕ್ಷಣ. ಇನ್ನು ಒಂದುವರೆ ತಿಂಗಳು ಹೇಮಾವತಿ ನೀರು ಹರಿಯುವುದರಿಂದ ಈ ಬಾರಿ ಕೋಡಿ ಹರಿಯುವುದು ಶತಸಿದ್ಧ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ಅವರು ಮಂಗಳವಾರ ತಾಲ್ಲೂಕಿನ ಮದಲೂರು ಗ್ರಾಮದ ಮದಲೂರು ಕೆರೆಯನ್ನು ವೀಕ್ಷಣೆ ಮಾಡಿ ಮಾತನಾಡಿದರು. ವರುಣನ ಕೃಪೆಯಿಂದ ಹೇಮಾವತಿ ಜಲಾಶಯಕ್ಕೆ ಉತ್ತಮ ನೀರು ಹರಿದು ಬರುತ್ತಿದ್ದು, ಜಲಾಶಯ ತುಂಬುವ ಹಂತಕ್ಕೆ ಬಂದಿದೆ. ಆದ್ದರಿಂದ ಶಿರಾ ತಾಲ್ಲೂಕಿಗೆ ಇನ್ನೂ ಸುಮಾರು ಒಂದುವರೆ ತಿಂಗಳುಗಳ ಕಾಲ ನೀರು ಹರಿಯುತ್ತದೆ. ಈಗಾಗಲೇ ೬ ಅಡಿ ನೀರು ತಲುಪಿದ್ದು, ಇನ್ನು ೪ ಅಡಿ ನೀರು ಬಂದರೆ ಮದಲೂರು ಕೆರೆ ತುಂಬಿ ಕೋಡಿ ಹರಿಯುತ್ತದೆ. ಇದು ನನ್ನ ಜೀವನದ ಮರೆಯಲಾಗದ ದಿನವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಮಾಲಿ ಮರಿಯಪ್ಪ, ಯಲಿಯೂರು ಬಸವರಾಜು, ಮುದಿಮಡು ಮಂಜುನಾಥ್, ಮಾಲಿ ಸಿ.ಎಲ್.ಗೌಡ, ಮಾಗೋಡು ಪ್ರತಾಪ್, ಗೋವಿಂದರಾಜು, ಎಸ್.ಬಿ.ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.

You May Also Like

error: Content is protected !!