ಮಧುಗಿರಿ: ಬೃಹತ್ ಬಂಡೆ ಧರೆಗುರುಳಿದ್ದು, ಕ್ಷಣ ಮಾತ್ರದಲ್ಲೇ ಭಾರೀ ಅನಾಹುತವಾಗುತ್ತಿದ್ದಂತ ಘಟನೆಯೊಂದು ತಪ್ಪಿದೆ. ಮಳೆಯಿಂದಾಗಿ ಈ ಅನಾಹುತ ನಡೆದಿದೆ.
ಮಧುಗಿರಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ಧಾಣದ ಸಮಿಪದಲ್ಲಿರುವ ಅನಂದರಾಯರ ಗುಡ್ಡದ ತಪ್ಪಲಿನಲ್ಲಿ ಬೃಹತ್ ಬಂಡೆಯೊಂದು ನೆಲಕ್ಕೆ ಉರುಳಿದ್ದು, ಅಧೃಷ್ಟವಷಾತ್ ಭಾರಿ ಅನಾಹುತವೊಂದು ತಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಗೆ ಬಂಡೆ ಕುಸಿದು ಬಿದ್ದಿದ್ದು, ನೂರಾರು ಜನರು ಹಾಗೂ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಬಂಡೆಯು ರಸ್ತೆಯ ಬದಿಗೆ ಬಿದ್ದಿರುವುದರಿಂದ ಯಾವುದೇ ಅವಗಢ ಸಂಭವಿಸಿಲ್ಲ.