ಭಾರಿ ಮಳೆಗೆ ಶಾಲಾ ಮೇಲ್ಚಾವಣೆ ಬೀಳುವ ಸಂಭವ: ಆತಂಕದಲ್ಲಿ ವಿದ್ಯಾರ್ಥಿಗಳು

ಮಧುಗಿರಿ: ಕೆಲ ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಶಾಲಾ ಕೊಠಡಿ ಗಳಲ್ಲಿ ನೀರು ಸೋರುತ್ತಿದ್ದು ಮೇಲ್ಚಾವಣೆ ಬೀಳುವ ಹಂತ ತಲುಪಿರುವ ಘಟನೆ ಪಟ್ಟಣದ ಡಿಡಿಪಿಐ ಕಚೇರಿ ಸಮೀಪ ವಿರುವ ಸರ್ಕಾರಿ ಮಾದರಿ ಹಿರಿಯ ಬಾಲಕಿಯರ ಪಾಠಶಾಲೆಗೆ ಎದುರಾಗಿದೆ.

ಶಾಲೆಯ ಎರಡು ಕೊಠಡಿಗಳಲ್ಲಿ ಮಳೆಯ ನೀರು ನಿಂತು ಸೋರುತ್ತಿರುವುದರ ಜತೆಗೆ ನೆಲವು ಸಹ ನೀರಿನಲ್ಲಿ ಮುಳುಗಿದ್ದು ಮೇಲ್ಛಾವಣೆ ಕುಸಿದು ಯಾವುದೇ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಬೀಳುವ ಸಂಭವವಿದೆ.

ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ರಕ್ಷಣೆಗಾಗಿ ತಮ್ಮ ಶಾಲಾ ಮುಖ್ಯ ಶಿಕ್ಷಕರ ಕೊಠಡಿ ಮತ್ತು ಇತರೆ ಕೊಠಡಿಯಲ್ಲಿನ ಎಲ್ಲವನ್ನೂ ತೆರವು ಮಾಡಿಕೊಂಡು ಸುಸ್ಥಿತಿಯಲ್ಲಿರುವ 2 ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳನ್ನು ಹಾಗೂ ಕಾರಿಡಾರ್ ಗಳಲ್ಲಿಯೇ ಪಾಠ ಮಾಡುವ ಮೂಲಕ ದಿನ ಕಳೆದಿದ್ದಾರೆ ‌.

ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಹ ನೀಡ ಬೇಕಾಗಿರುವ ಕೋಣೆಯು ಸಹ ಸೋರುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಅತಿ ಜಾಗರೂಕತೆಯಿಂದ ನೋಡಿಕೊಳ್ಳ ಬೇಕಾದ ಪರಿಸ್ಥಿತಿ ಶಿಕ್ಷಕರಿಗೆ ಎದುರಾಗಿದೆ.

ಪಟ್ಟಣದಲ್ಲಿರುವ ಶಾಲೆಯ ಸ್ಥಿತಿ ಹೀಗಾದರೆ ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಯಾವ ಹಂತ ತಲುಪಿದೆ ಎಂದು ಊಹಿಸಲು ಕಷ್ಟಕರವಾಗುತ್ತಿದೆ ಸ್ಥಳೀಯ ಶಾಸಕರ ಗಮನಕ್ಕೆ ತರೋಣ ಎಂದರೆ ಅವರು ಕೈಗೆ ಸಿಗುವುದಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿಯವರು ಹೇಳುತ್ತಿದ್ದಾರೆ.

ಸಮೀಪದಲ್ಲಿಯೇ ಡಿಡಿಪಿಐ ಕಚೇರಿ ಮತ್ತು ಬಿಇಒ ಕಚೇರಿ ಇದ್ದರೂ ಕೂಡ ಇಂತಹ ದುಸ್ಥಿತಿಯಲ್ಲಿರುವ ಕೊಠಡಿಗಳನ್ನು ನೋಡಲು ಸಹ ಬಾರದೇ ಇರುವ ಅಧಿಕಾರಿಗಳ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!