ಕಾಂಗ್ರೇಸ್ ಪಕ್ಷದಿಂದ ದೇಶ ಒಡೆಯುವ ಕೆಲಸ: ಮಾಜಿ ಸಿಎಂಹೆಚ್.ಡಿ.ಕುಮಾರ ಸ್ವಾಮಿ ಆರೋಪ

ಕೊರಟಗೆರೆ: ವಿಧಾನ ಪರಿಷತ್ ಹಾಗೂ ವಿಧಾನಸಭೆ ಚುನಾವಣೆ ಗೆಲ್ಲುವ ಉದ್ದೇಶದಿಂದ ಕಾಂಗ್ರೇಸ್ ಪಕ್ಷದ ರಾಷ್ಟ್ರ-ರಾಜ್ಯ ನಾಯಕರು ಜಾತಿ ರಾಜಕಾರಣ ವೈಭವಿಕರಿಸಿ ಭಾರತ ದೇಶವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.

ಕೊರಟಗೆರೆ ಪಟ್ಟಣದ ಹಿಂದುಸಾದರ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತನ ಮಗಳ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೇಸ್ ಪಕ್ಷದ ಜೊತೆಯಲ್ಲಿ ಜೆಡಿಎಸ್ ಪಕ್ಷ ಲೋಕಸಭೆ ಚುನಾವಣೆಗೆ ಮೈತ್ರಿಯಾಗಿ ಸ್ಪರ್ಧೆ ಮಾಡಿದ್ದು ಮುಗಿದ ಅಧ್ಯಾಯ. ಕಾಂಗ್ರೇಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ನಾನು ಸರಕಾರ ರಚನೆ ಮಾಡಿದ್ದೇ ಜೆಡಿಎಸ್ ಪಕ್ಷದ ಸಂಘಟನೆಗೆ ಸಮಸ್ಯೆಯಾಗಿದೆ. ಜೆಡಿಎಸ್ ಪಕ್ಷದ ಅಂತರಿಕ ಸಭೆಯಲ್ಲಿ ಸರಿಪಡಿಸಿಕೊಳ್ಳಲು ಈಗಾಗಲೇ ತಿರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಬೀಟ್ ಕಾಯಿನ್ ಈಗ ಪ್ರಾರಂಭವಾಗಿಲ್ಲ ೨೦೧೬ರಿಂದಲೇ ಇದು ಆರಂಭವಾಗಿದೆ. ಕಾಂಗ್ರೇಸ್ ಸರಕಾರ ಇದ್ದಾಗಲೇ ಶ್ರೀಕಿ ಇರೋದು ತಿಳಿದಿದೆ. ಅಂದಿನ ಸರಕಾರ ಮಾಹಿತಿ ತೆಗೆದುಕೊಂಡು ಕ್ರಮ ವಹಿಸಿದ್ದರೇ ಇಂದು ಇಂತಹ ಪರಿಸ್ಥಿತಿ ಉದ್ಭವ ಆಗುತ್ತೀರಲಿಲ್ಲ. ಬೀಟ್ ಕಾಯಿನ್ ವಿಚಾರದಲ್ಲಿ ಕಾನೂನು ಹೋರಾಟ ಮಾಡಿದರೇ ಉಪಯೋಗ ಆಗೋಲ್ಲ ಎಂದು ಹೇಳಿದರು.

ಅಲ್ಪಸಂಖ್ಯಾತರು ಮತ್ತು ದಲಿತರು ಒಂದಾಗಬೇಕು ಎಂದು ಕಾಂಗ್ರೇಸ್ ನಾಯಕರು ಜಾತಿಯ ಹೆಸರಿನಲ್ಲಿ ಸಭೆ ಮಾಡಿದ್ದಾರೆ. ಸಭೆಯ ಕೊನೆಯಲ್ಲಿ ಜೈಹಿಂದ್ ಅಂತಾ ಘೋಷಣೆ ಕೂಗಿದ್ದಾರೆ. ನಾವು ಪಕ್ಷದ ಸಭೆಯಲ್ಲಿ ಜೈಹಿಂದ್ ಅಂತಾ ಕೂಗುತ್ತೇವೆ. ಅದನ್ನು ಕಾಂಗ್ರೇಸ್ ನಾಯಕರು ಅಹಿಂದ್ ಅಂತಾ ಹೇಳಲು ಹೊರಟಿದ್ದಾರೆ. ದೇಶ ಒಡೆಯುವ ಕೆಲಸವನ್ನು ಕಾಂಗ್ರೇಸ್ ನಾಯಕರು ಮಾಡುತ್ತೀದ್ದಾರೆ ಎಂದು ಆರೋಪ ಮಾಡಿದರು.

ತುಮಕೂರು ಜಿಲ್ಲೆಯ ವಿಧಾನ ಪರಿಷತ್ ಅಭ್ಯರ್ಥಿಯನ್ನು ನಾಡಿದ್ದು ಪ್ರಕಟ ಮಾಡ್ತೀವಿ. ಜೆಡಿಎಸ್ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಅನೀಲ್ ರಾಜಿನಾಮೆಗೂ ಪಕ್ಷದ ಅಭ್ಯರ್ಥಿಗೆ ಸಂಬಂಧವೇನು. ಸ್ಥಳೀಯ ನಾಯಕರ ಅಂತಿಮ ತಿರ್ಮಾನದ ಬಳಿಕ ಅಭ್ಯರ್ಥಿ ಘೋಷಣೆ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೊರಟಗೆರೆ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಗೌರವಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ಲಕ್ಷ್ಮೀಶ್, ಮಾಜಿ ಜಿಪಂ ಸದಸ್ಯ ಶಿವರಾಮಯ್ಯ, ಪ್ರೇಮಾ, ಗ್ರಾಪಂ ಅಧ್ಯಕ್ಷ ರಮೇಶ್, ಮಾವತ್ತೂರು ಮಂಜುನಾಥ, ಪಪಂ ಅಧ್ಯಕ್ಷ ಮಂಜುಳ ಸತ್ಯನಾರಾಯಣ್, ಉಪಾದ್ಯಕ್ಷ ಭಾರತಿಸಿದ್ದಮಲ್ಲಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜ್, ಸದಸ್ಯರಾದ, ಲಕ್ಷ್ಮೀನಾರಾಯಣ್, ಪುಟ್ಟನರಸಪ್ಪ, ರಮೇಶ್, ಕಲೀಂವುಲ್ಲಾ ಸೇರಿದಂತೆ ಇತರರು ಇದ್ದರು.

You May Also Like

error: Content is protected !!