ರಸ್ತೆಯ ಬದಿ ಜಾರಿ ಬಿದ್ದಿದ್ದ ಬಂಡೆ ಸ್ಥಳಕ್ಕೆ ಕೆ ಎನ್ ರಾಜಣ್ಣ ಭೇಟಿ

ಮಧುಗಿರಿ : ಕ್ಷೇತ್ರದಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂ ಹಳ್ಳ ಕೊಳ್ಳ ಕೆರೆ-ಕಟ್ಟೆಗಳಲ್ಲಿ ನೀರು ಶೇಖರಣೆಯಾಗಿದ್ದು, ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕೆಂದು ಮಾಜಿ ಶಾಸಕರಾದ ಕೆ ಎನ್ ರಾಜಣ್ಣ ತಿಳಿಸಿದರು.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಪಟ್ಟಣದ ಕೆ ಎಸ್‌ ಆರ್ ಟಿ ಸಿ ಬಸ್ಟಾಂಡ್ ಸಮೀಪವಿರುವ ಆನಂದರಾಯನ ಗುಡ್ಡದ ಬುಡದಲ್ಲಿ ಬೃಹತ್ ಬಂಡೆಯೊಂದು ರಸ್ತೆಯ ಬದಿ ಜಾರಿ ಬಿದ್ದಿದ್ದ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಸುಮಾರು 7 ವರ್ಷಗಳ ಹಿಂದೆ ಜಯಮಂಗಲಿ ನದಿಯ ನೀರಿನಲ್ಲಿ ಚಿಕ್ಕಮಾಲೂರು ಗ್ರಾಮದ ಇಬ್ಬರು ಶಾಲಾ ಬಾಲಕರು ಈಜಾಡಲೂ ಹೋಗಿ ಮೃತಪಟ್ಟಿದ್ದರು. ಇಂತಹ ಘಟನೆಗಳು ಮರುಕಳಿಸದಂತೆ ಪೋಷಕರು ಎಚ್ಚರ ವಹಿಸಬೇಕಾಗಿದೆ.

ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಕೆರೆ-ಕಟ್ಟೆ ಹಾಗೂ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಕ್ಕಳು ನೀರಿನಲ್ಲಿ ಆಟವಾಡಲು ಖುಷಿಯಿಂದ ಹೋಗುತ್ತಿರುತ್ತಾರೆ. ಹೊಸದಾಗಿ ಬಂದ ನೀರಿನಲ್ಲಿ ಮಣ್ಣು ತುಂಬಿಕೊಂಡು ಕೆಸರಾಗಿರುತ್ತದೆ. ಈ ಕೆಸರಿನಲ್ಲಿ ಕಾಲುಗಳು ಸಿಲುಕಿಕೊಂಡು ಪ್ರಾಣಾಪಾಯ ಸಂಭವವಿರುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗೃತೆ ವಹಿಸಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿ ಎಂದರು.

ಪಟ್ಟಣದ ಬಸವಣ್ಣನ ಬೆಟ್ಟ ಬುಡದಲ್ಲಿ ಬೃಹತ್ ಬಂಡೆಯೊಂದು ಮಳೆಯ ನೀರಿನಿಂದ ಮಣ್ಣು ಸವಕಳಿಯಾಗಿ ಜಾರಿದೆ. ಅದೃಷ್ಟ ವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೂ ಈ ಗುಡ್ಡದ ಬುಡದಲ್ಲಿ ವಾಸವಿರುವ ಜನರು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಮಳೆ ನಿಲ್ಲುವವರೆಗೂ ಅವರು ತಾತ್ಕಾಲಿಕವಾಗಿ ಬೇರೆಡೆ ವಾಸವಿರುವುದು ಒಳಿತು 
       - ಮಾಜಿ ಶಾಸಕ ಕೆ.ಎನ್.ರಾಜಣ್ಣ.

ಈ ಸಂಧರ್ಭದಲ್ಲಿ ವಿ.ಎಸ್.ಎಸ್.ಎನ್ ಅಧ್ಯಕ್ಷ ರಾಮಾಂಜಿ, ಗ್ರಾ.ಪಂ ಮಾಜಿ ಅಧ್ಯಕ್ಷ ವಿ.ಆರ್.ಭಾಸ್ಕರ್, ನಿವೃತ್ತ ಅಪಾರ ಕಾರ್ಯದರ್ಶಿ ಗೋಪಾಲಯ್ಯ, ಪುರಸಭೆಯ ಮಾಜಿ ಸದಸ್ಸಾಯರಾದ ಸಾಧಿಕ್, ತಲ್ಲಿ ಮಂಜುನಾಥ್, ಮುಖಂಡರಾದ ಆನಂದ ಕೃಷ್ಣ
ರಘು, ಗುಂಡಣ್ಣ, ಮನು, ಕೆರೆಗಳ ಪಾಳ್ಯದ ಲಕ್ಷ್ಮೀ ಕುಮಾರ್, ಗಂಗರಾಜು, ಸಿದ್ದಾಪುರ ಕೋಟಪ್ಪ, ರಂಗನಾಥ್, ಯಲ್ಕೂರು ವಿಜಯಕುಮಾರ್ ಹಾಗೂ ಮುಂತಾದವರು ಇದ್ದರು.

You May Also Like

error: Content is protected !!