ಸ್ವಾಮಿ ಜಪಾನಂದಜೀ ರವರಿಗೆ ರಮಣಶ್ರೀ ಪ್ರಶಸ್ತಿ ಪ್ರಧಾನ


ಬೆಂಗಳೂರು: ಪ್ರತಿಷ್ಠಿತ ಹೋಟೆಲ್ ಆದ ರಮಣಶ್ರೀ ರಿಚ್ಮಂಡ್‍ನ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು “ರಮಣಶ್ರೀ ಶರಣ ಪ್ರಶಸ್ತಿಯನ್ನು” ಪಾವಗಡ ರಾಮಕೃಷ್ಣ ಸೇವಾಶ್ರಮದ ಜಪಾನಂದಜೀ ರವರಿಗೆ ಪ್ರದಾನ ಮಾಡಿದ್ದಾರೆ

ಅಖಿಲ ಭಾರತ ಶರಣ ಸಾಹಿತ್ಯ ಹಾಗೂ ಶ್ರೀ ರಮಣಶ್ರೀ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯೊಂದಿಗೆ ಶಿವಶರಣರ ಹಾಗೂ ವಚನ ಸಾಹಿತ್ಯದ ವಿಚಾರಧಾರೆಗಳ ಅನುಷ್ಠಾನರೂಪಕ್ಕೆ ಹಾಗೂ ವಚನ ಸಾಹಿತ್ಯದ ವಿಚಾರದ ಪ್ರಚಾರಕ್ಕಾಗಿ ನೀಡುವಂತಹ ಪ್ರಶಸ್ತಿ ಇದಾಗಿದ್ದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕಳೆದ ಮೂರು ದಶಕಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಜನಪರ ಸೇವಾ ಯೋಜನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ ಎಂದು ಸಂಸ್ಥೆ ಹಾಗು ರಾಮಕೃಷ್ಣಾ ಸೇವಾಶ್ರಮದ ಮೂಲಗಳು ತಿಳಿಸಿವೆ

ಈ ಪ್ರಶಸ್ತಿಗೆ ಯಾವುದೇ ರೀತಿಯ ಅರ್ಜಿಗಳನ್ನು, ಶಿಫಾರಸ್ಸುಗಳನ್ನು ಆಹ್ವಾನಿಸದೆ ಕೇವಲ ಹಿರಿಯ ಚೇತನಾಶಕ್ತಿಗಳಿಂದ ಒಡಗೂಡಿರುವ ಸಮಿತಿಯು ಹಿರಿಯ ವಚನಕಾರರು, ಸಂಶೋಧನಾಕಾರರಾದ ಶ್ರೀ ಗೊ.ರು.ಚನ್ನಬಸಪ್ಪ, ಹಿರಿಯ ಪತ್ರಿಕೋದ್ಯಮಿಗಳಾದ ಶ್ರೀ ರವಿ ಹೆಗ್ಗಡೆ ರವರು, ಶ್ರೀ ವಿಶ್ವೇಶ್ವರ ಹೆಗ್ಗಡೆ ರವರು, ಶ್ರೀ ಮನು ಬಳಿಗಾರ್ ರವರನ್ನೊಳಗೊಂಡ ಸಮಿತಿಯು ಪೂಜ್ಯ ಸ್ವಾಮೀಜಿಯವರ ಸೇವಾ ಕಾರ್ಯಗಳನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿರುವುದು ತಾಲೂಕಿನ ಜನರು ಅಭಿನಂದಿಸಿದ್ದಾರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!