ಎಸ್ ಆರ್ ಶ್ರೀನಿವಾಸ್ 60ನೇ ವರ್ಷದ ಹುಟ್ಟು ಹಬ್ಬ ವಿಜೃಂಭಣೆಯಿಂದ ಆಚರಣೆ

ವಾಸಣ್ಣನ ಅಭಿಮಾನಿ ಬಳಗ, ವಾಸಣ್ಣ ಬ್ರಿಗೇಡ್ ಹಾಗೂ ಶ್ರೀಮತಿ ಭಾರತಿ ಶ್ರೀನಿವಾಸ್ ಬಳಗದ ವತಿಯಿಂದ ಮಾಜಿ ಸಚಿವ ಹಾಲಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವರ 60ನೇ ವರ್ಷದ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ತಾಲೂಕಿನ ಕಳ್ಳಿಪಾಳ್ಯ ಗ್ರಾಮದಲ್ಲಿ ಶಾಸಕ ಶ್ರೀನಿವಾಸ್ ಅವರನ್ನು ತಳಿರು ತೋರಣದೊಂದಿಗೆ ಅಲಂಕರಿಸಿ ಆತ್ಮೀಯವಾಗಿ ಸ್ವಾಗತಿಸುವ ಜೊತೆಗೆ ಕೇಕ್ ಕಟ್ಟು ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನಂತರ ಬೈಕ್ ರ್ಯಾಲಿ ಮೂಲಕ ಎಂ ಎಚ್ ಪಟ್ಟಣದ ಮಣ್ಣಮ್ಮ ದೇವಿ ದೇವಾಲಯಕ್ಕೆ ತೆರಳಿ ಅಮ್ಮನವರ ದರ್ಶನ ಪಡೆದರು.

ಬಳಿಕ ಬೈಕ್ ಚಾಲನೆ ಮಾಡಿಕೊಂಡು ಅಭಿಮಾನಿಗಳೊಂದಿಗೆ ರ್ಯಾಲಿಯಲ್ಲಿ ಶಾಸಕರು ಬೈಕ್ ಮೂಲಕ ಮೆರವಣಿಗೆಯಲ್ಲಿ ಇತಿಹಾಸ ಪ್ರಸಿದ್ಧ ಗೊಸಲಾ ಚನ್ನಬಸವೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ಸ್ವಾಮಿಯವರಿಗೆ ಪೂಜೆ ಸಲ್ಲಿಸಿ ಶಾಸಕರ ಕಚೇರಿಯ ಆವರಣದಲ್ಲಿ ಅಭಿಮಾನಿಗಳು ಆಯೋಜಿಸಿದ್ದ 60ಕೆ ಜಿ ಯ ಕೇಕ್ ಕಟ್ಟು ಮಾಡಿ ತಮ್ಮ ಪತ್ನಿ ಭಾರತಿ ಅವರಿಗೆ ಕೇಕ್ ತಿನ್ನಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಿದರು.

ಶಾಸಕರು ಸ್ವತಃ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ಸೂಚಿಸಿದ್ದರೂ ಸಹ ಅಭಿಮಾನಿಗಳು ತಮ್ಮ ಅಪಾರ ಅಭಿಮಾನದಿಂದ ಹುಟ್ಟುಹಬ್ಬವನ್ನು ಆಚರಿಸಿದರು. ಅಭಿಮಾನಿಗಳು ತನ್ನ ಹುಟ್ಟುಹಬ್ಬವನ್ನು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು ನಾನು ಯಾವುದೇ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸದಂತೆ ತಿಳಿಸಿದ್ದೆ, ಕಾರಣ ಡಿಸಂಬರ್ ತಿಂಗಳಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸೇರಿಸಿ ಕಾರ್ಯಕ್ರಮ ಮಾಡುವ ಆಲೋಚನೆ ಇದ್ದು, ಆದರೆ ಅಭಿಮಾನಿಗಳೇ ಹೆಚ್ಚಿನ ಪ್ರೀತಿ ತೋರಿಸಿ ಒಂದೇ ದಿನದಲ್ಲಿ ಆಯೋಜಿಸಿ ಇಷ್ಟು ಕಾರ್ಯಕರ್ತರನ್ನು ಸೇರಿಸಿರುವುದು ನನಗೆ ಇನ್ನಷ್ಟು ಪುಷ್ಠಿ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪತ್ನಿ ಭಾರತಿ ಶ್ರೀನಿವಾಸ್ ಮಾತನಾಡಿ ಪ್ರತಿ ವರ್ಷವೂ ಅಭಿಮಾನಿಗಳು ಕಾರ್ಯಕರ್ತರು ಸೇರಿ ವಿವಿಧ ಕಾರ್ಯಕ್ರಮವನ್ನು ಜೋಡಿಸಿ ವಾಸು ಅವರ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಜೊತೆಗೆ ಅಭಿಮಾನಿಗಳು ಅವರ ಮೇಲೆ ವಿಶ್ವಾಸವಿಟ್ಟು ಬಂದಿದ್ದಾರೆ. ಹಾಗಾಗಿ ನಾಲ್ಕು ಬಾರಿಯಿಂದಲೂ ಈ ಕ್ಷೇತ್ರದಲ್ಲಿ ಆಯ್ಕೆ ಮಾಡುತ್ತಾ ಬಂದಿದ್ದಾರೆ. ಜೊತೆಗೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟಿದ್ದಾರೆ ಹಾಗಾಗಿ ನಮ್ಮ ಕುಟುಂಬ ಸದಾ ಚಿರಋಣಿ ಆಗಿರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಪುತ್ರಿ ತೇಜಸ್ವಿನಿ, ಪುತ್ರ ದುಷ್ಯಂತ, ಶಿವಾಜಿ ರಾವ್, ಪ.ಪಂ ಉಪಾಧ್ಯಕ್ಷರಾದ ಮಹಾಲಕ್ಷ್ಮಿ, ಸದಸ್ಯರಾದ ಮಮತಾ ಶ್ವೇತ ಕುಮಾರ್, ಗುರು ರೇಣುಕಾರಾಧ್ಯ, ಯೋಗಾನಂದ್, ವೆಂಕಟೇಶ್, ದೇವರಾಜ್ ಪಟೇಲ್, ಧಾಮು, ಉಪಸ್ಥಿತರಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!