ಪಾವಗಡ ಪೊಲೀಸ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್ ಅಮಾನತ್ತು

ಪಾವಗಡ. ಪಾವಗಡ ಪೊಲೀಸ್ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್ ಅವರನ್ನು ಕರ್ತವ್ಯ ಲೋಕದ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರ್‌ಕೆ ಶಹಾಪುರವಾಡ ಅಮಾನತುಗೊಳಿಸಿ ಆದೇಶಿಸಿದ್ದಾರೆ

ಪಾವಗಡ ತಾಲೂಕಿನ ಅನೇಕ ಗಡಿ ಗ್ರಾಮದ ಗ್ರಾಮಗಳಲ್ಲಿ ಮಟ್ಕಾ ಇಸ್ಪೀಟು ಜೂಜಾಟ ದಂಧೆಯನ್ನು ನಿಯಂತ್ರಿಸುವಲ್ಲಿ ಲಕ್ಷ್ಮಿಕಾಂತ್ ವಿಫಲರಾಗಿದ್ದು ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ನೀಡಿದ್ದ ಸೂಚನೆಯನ್ನು ಪಾಲಿಸಿರಲಿಲ್ಲ ಹಾಗೂ ಲಕ್ಷ್ಮಿಕಾಂತ್ ಅವರ ಮೇಲೆ ಸಾರ್ವಜನಿಕರಿಂದ ಸಾಕಷ್ಟು ದೂರಗಳು ಬಂದಿದ್ದು ಲಕ್ಷ್ಮಿಕಾಂತ್ ಅವರು ಕೆಲವು ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಇಲಾಖೆಗೆ ಅನುಮಾನ ಮೂಡಿ ಬಂದಿತ್ತು.
ಇಲಾಖೆಯ ಅನುಮಾನದ ಭಾಗವಾಗಿ ಇಬ್ಬರು
ಕಾನ್ ಸ್ಟೇಬಲ್ ಗಳು ಮಟ್ಕಾ ಸಂಬಂಧಪಟ್ಟಂತೆ ಮಾತನಾಡಿರುವ ಬಗ್ಗೆ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದ್ದರಿಂದ ಗಡಿ ತಾಲೂಕಿನಲ್ಲಿ ಮಟ್ಕಾ ಜುಜಾಟ ನಿಯಂತ್ರಿಸುವಲ್ಲಿ ವಿಫಲರಾಗಿರುವ ಲಕ್ಷ್ಮಿಕಾಂತ್ ಅವರನ್ನು ಮೇಲಾಧಿಕಾರಿಗಳು ಅನಾಮತು ಮಾಡಿದ್ದಾರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!