ಯುವಕರು ಸಂಘಟನೆಯಲ್ಲಿ ಹೆಚ್ವು ಒತ್ತು ನೀಡಿ: ಆರ್.ರಾಜೇಂದ್ರ

ಪಾವಗಡ: ಯುವಕರು ಕಾಂಗ್ರೆಸ್ ಸಂಘಟನೆ ದೃಷ್ಟಿಯಿಂದ ಹೆಚ್ಚು ಹೆಚ್ಚು ಒತ್ತು ನೀಡಿ ಶ್ರಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಆರ್ .ರಾಜೇಂದ್ರ ಅವರು ತಿಳಿಸಿದರು.
ಪಟ್ಟಣದ ಸಾಯಿರಾಂ ಕಲ್ಯಾಣ ಮಂಟಪದಲ್ಲಿ ಬೂತ್ ಜೋಡೊ,ಯೂತ್ ಜೋಡೊ ಶೀರ್ಷಿಕೆಯಡಿಯಲ್ಲಿನ
ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪಕ್ಷ ಸಂಘಟನೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ತಾಲ್ಲೂಕಿನಲ್ಲಿ ಯುವಕರು ಹೆಚ್ವಿನ ಸಂಖ್ಯೆಯಲ್ಲಿ ಸಂಘಟಿತರಾಗಿ ಯುವ ನಾಯಕ ಎಚ್.ವಿ ವೆಂಕಟೇಶ್ ಅವರನ್ನು 10 ಸಾವಿರ ಮತಗಳಿಂದ ಗೆಲಿಸುವಂತಾಗಬೇಕು ಎಂದು ಸಲಹೆ ನೀಡಿದರು. 246 ಬೂತ್ ಪೈಕಿ ಮಹಿಳೆಯರು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಭಾಗದಿಂದ ಶಾಸಕರ ಕಾರ್ಯಾಭಿವೃದ್ಧಿ ಜನಮನ್ನಣೆ ಗಳಿಸುತ್ತಿವೆ ಹಾಗಾಗಿ ಬೂತ್ ಮಟ್ಟ
ದಲ್ಲಿ ಜನರನ್ನುದ್ದೆಶಿಸಿ ಸಭೆ ನಡೆಸಿ ವಿಶ್ವಾಸ ಗಳಿಸಿ ಎಂದರು.
ಸಿದ್ದರಾಮಯ್ಯರ ಆ.3 ರಂದು ಹುಟ್ಟು ಹಬ್ಬದ 75 ವರ್ಷದಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಕಾರ್ಯಕ್ರಮದಲ್ಲಿ ತಮ್ಮೆಲ್ಲರ ಸಹಕಾರ ಇರಲಿ ಎಂದರು.
ಪಕ್ಷದ ಎಲ್ಲಾ ಕಾರ್ಯಕರ್ತರು ಸಂಘಟಿತರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ 2023 ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರ ಸ್ವೀಕರಿಸಲಿದೆ ಎಂದು ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಚ್.ವಿ.ವೆಂಕಟೇಶ್ ಮಾತನಾಡಿ ಯುವಕರು ಸಂಘಟನೆಯ ಕಡೆ ಹೆಚ್ಚು ಒತ್ತು ನೀಡಬೇಕು ಎಂದರು. ಪ್ರತಿ ಬೂತ್ ನಿಂದಲೂ 25 ಜನರ ಪಟ್ಟಿ ನೀಡಿ ನಿಡಗಲ್ ಪ್ರವಾಸಿ ಮಂದಿರದಲ್ಲಿ ಎರಡು ದಿನಗಳ ಕಾರ್ಯಗಾರ ಮಾಡಲಾಗುತ್ತದೆ.
ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದೀಪಿಕ ರೆಡ್ಡಿ,
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಲಾಯಿ ಸಿಖಂದರ್ , ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ, ಮಾತನಾಡಿದರು.
ರಾಜ್ಯ ಉಸ್ತುವಾರಿ ರೆಹಮತ್ , ಪುರಸಭಾ ಅಧ್ಯಕ್ಷ ಡಿ.ವೇಲುರಾಜು, ಬ್ಲಾಕ್ ಕಾಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ತಾಲ್ಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಜಿತ್, ಉಪಾಧ್ಯಕ್ಷ ರಘುವೀರರೆಡ್ಡಿ, ನಗರಾಧ್ಯಕ್ಷ ಮಹೇಶ್, ಮಹಿಳಾ ಘಟಕ ಅಧ್ಯಕ್ಷೆ ವೀಣಾ ಅಂಜನ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷೆ ಸುಮಾ ಅನಿಲ್, ಪುರಸಭಾ ಸದಸ್ಯ ಮಹಮ್ಮದ್ ಇಮ್ರಾನ್,ಓಂಕಾರ್ ನಾಯಕ, ಪಾಪಣ್ಣ ವಿ.ಎಚ್ .ಪಾಳ್ಯ, ಸುಮನ್, ಇನ್ನು ಹಲವರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!