ಭೂ ಹಗರಣ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕು : ಅಮ್ ಆದ್ಮಿ ಪಾರ್ಟಿ ಮುಖಂಡ ಪ್ರಭುಸ್ವಾಮಿ ಆಗ್ರಹ.

ಗುಬ್ಬಿ: ಬಗರ್ ಹುಕುಂ ಸಮಿತಿ ಮೂಲಕ ಅತೀ ಹೆಚ್ಚು ಭೂಮಿ ಮಂಜೂರಾತಿ ಮಾಡಿರುವ ಗುಬ್ಬಿ ತಾಲ್ಲೂಕು ರಾಜ್ಯದಲ್ಲೇ ಎರಡನೇ ಸ್ಥಾನ ಗಳಿಸಿದೆ.
ಈಗ ಭೂ ಕಬಳಿಕೆ ಮೂಲಕ ಪ್ರಚಲಿತವಾಗಿದ್ದು ಕಾಣದ ದೊಡ್ಡ ಕೈಗಳ ಶಾಮೀಲು ಇರುವ ಈ ಹಗರಣವನ್ನು ಸಿಓಡಿ ತನಿಖೆಗೆ ಒಳಪಡಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಪ್ರಭುಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸುಮಾರು 450 ಎಕರೆ ಗೋಮಾಳ ಜಮೀನು ಅಕ್ರಮವಾಗಿ ದಾಖಲೆ ಸೃಷ್ಟಿಸಿ ಮಾಫಿಯಾ ನಡೆದಿದೆ. ಈ ಬಗ್ಗೆ ಪೊಲೀಸ್ ತನಿಖೆ ವೇಳೆ ಅಧಿಕಾರಿಗಳು, ಮಧ್ಯವರ್ತಿಗಳನ್ನು ಬಂಧಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಪ್ರಭಾವಿಗಳ ಪ್ರಭಾವ ಇರುವ ಕಾರಣ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಕಚೇರಿಯಲ್ಲಿ ಹಲವು ವರ್ಷದಿಂದ ಬೇರು ಬಿಟ್ಟ ಅಧಿಕಾರಿಗಳು ಇಂತಹ ದುಸ್ಸಾಹಸ ಮಾಡುತ್ತಾರೆ. ಕಂದಾಯ ಇಲಾಖೆ ಸಿಬ್ಬಂದಿಗಳ ಸಹಕಾರ ಪಡೆದ ಬ್ರೋಕರ್ ಗಳು ಮೂವತ್ತು ವರ್ಷಗಳಿಂದ ಅನುಭವದಲ್ಲಿರುವ ರೈತರ ಜಮೀನುಗಳನ್ನು ಸಿರಿವಂತರಿಗೆ ಮಾರಾಟ ಮಾಡಿರುವ ಬಗ್ಗೆ ಈಗಾಗಲೇ ಇಡೀ ಜಿಲ್ಲೆಯ ಗಮನಿಸಿದೆ. ಈ ಎಲ್ಲಾ ಬೆಳವಣಿಗೆ ಹಿಂದೆ ರಾಜಕಾರಣದ ನೆರಳು ಕಾಣುತ್ತಿದೆ. ಉನ್ನತ ತನಿಖೆಯಿಂದ ಮಾತ್ರ ತೆರೆ ಮರೆಯ ಆರೋಪಿಗಳು ಬೆಳಕಿಗೆ ಬರುತ್ತಾರೆ ಎಂದು ಹೇಳಿದರು.

ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ್ ಮಾತನಾಡಿ ಪಿಎಸೈ ಹಗರಣ ಉನ್ನತ ತನಿಖೆಯಲ್ಲಿ ದೊಡ್ಡವರು ಹೊರ ಬರುತ್ತಿದ್ದಾರೆ. ಅದೇ ಮಾದರಿ ಈ ಹಗರಣ ಸಹ ರಾಜ್ಯ ಮಟ್ಟದಲ್ಲಿ ತನಿಖೆ ಆಗಬೇಕು. ಸಿಓಡಿ ತನಿಖೆ ಅಥವಾ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಈ ಮಟ್ಟದ ದೊಡ್ಡ ಹಗರಣ ದೊಡ್ಡವರ ನೆರಳಲ್ಲೇ ನಡೆಯಲು ಸಾಧ್ಯ. ಶಾಸಕರ ಹಿಂಬಾಲಕರು ಈ ಹಗರಣದಲ್ಲಿ ಸಿಲುಕಿರುವ ಕಾರಣ ಉನ್ನತ ತನಿಖಾ ಸಂಸ್ಥೆಯ ಮೂಲಕ ನ್ಯಾಯ ದೊರೆಯಬೇಕಿದೆ ಎಂದರು.

ಎಎಪಿ ಜಿಲ್ಲಾ ಮಾಧ್ಯಮ ಸಂಯೋಜಕ ಗೋಮರ್ಧನಹಳ್ಳಿ ಮಂಜುನಾಥ್ ಮಾತನಾಡಿ ನಾಲ್ಕು ಬಾರಿ ಗೆಲುವು ಸಾಧಿಸಿದ ಶಾಸಕರು ಇಂತಹ ಹಗರಣದ ಹೊಣೆ ಹೊರಬೇಕಿದೆ. ಸರ್ಕಾರಿ ಜಮೀನು ಉಳಿಸುವ ಜವಾಬ್ದಾರಿ ಚುನಾಯಿತ ಪ್ರತಿನಿಧಿಗಳ ಮೇಲಿದೆ. ಅಂತಹವರು ಹಗರಣಕ್ಕೆ ಕಾರಣವಾಗುವ ಅನುಮಾನ ಇರುವ ಕಾರಣ ಉನ್ನತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಆಮ್ ಆದ್ಮಿ ಪಾರ್ಟಿ ತಾಲ್ಲೂಕು ಅಧ್ಯಕ್ಷ ಮಂಜುನಾಥಸ್ವಾಮಿ ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!