ಗುಬ್ಬಿ: ಯರಬಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

ಗುಬ್ಬಿ: ತಾಲೂಕಿನ ಹಾಗಲವಾಡಿ ಹೋಬಳಿ ಯರಬಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಬಿ ಆರತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಹೋಬಳಿಯ ಗಡಿಭಾಗದ ಗ್ರಾಮಗಳನ್ನು ಆಯ್ಕೆ ಮಾಡಿ ತಾಲ್ಲೂಕು ಆಡಳಿತವೇ ಆ ಗ್ರಾಮಕ್ಕೆ ತೆರಳಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಕಾರವು ಮುಂದಾಗಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದ ಅವರು ಗಡಿಭಾಗದ ಪ್ರದೇಶಗಳಿಂದ ನಗರಕ್ಕೆ ತೆರಳಲು ಸಾಧ್ಯವಾಗದೆ ಇರುವ ಕಾರಣ ಸರ್ಕಾರವೇ ತಮ್ಮ ಬಳಿ ಬಂದಿದ್ದು, ಮನೆ ಮನೆಗೆ ಗ್ರಾಮ ಲೆಕ್ಕಿಗರು ತೆರಳಿ ಪಿಂಚಣಿ ವ್ಯವಸ್ಥೆಯನ್ನು ಮಾಡಲಾಗುತಿದೆ ಎಂದು ತಿಳಿಸಿದರು.

2022ರ ಜನವರಿಯಿಂದ ಇಲ್ಲಿಯವರೆಗೆ ಹಾಗಲವಾಡಿ ಹೋಬಳಿಯ ವ್ಯಾಪ್ತಿಯಲ್ಲಿ ವಿವಿಧ ಪಿಂಚಣಿ 1632 , ಮೂರು ದಿನದೊಳಗೆ ತಮಗೆ ಪಿಂಚಣಿ ವ್ಯವಸ್ಥೆಯನ್ನು ಗ್ರಾಮ ಲೆಕ್ಕಿಗರು ತಮ್ಮ ಮನೆಗೆ ಬಂದು ಮಾಡಿಕೊಡುತ್ತಾ ಇದ್ದು ಅದನ್ನು ಬಳಸಿಕೊಳ್ಳುವಂತೆ ತಿಳಿಸಿದ ಅವರು ಪ್ರತಿಯೊಂದು ಹೆಜ್ಜೆಯಲ್ಲೂ ಸರ್ಕಾರವು ಜನರಿಗೆ ಹತ್ತಿರ ಹಾಗುವ ನಿಟ್ಟಿನಲ್ಲಿ ಮುಂದಾಗಿದ್ದು, ಲೆವೆನ್ ಈ ಅರ್ಜಿಯನ್ನು ಹಾಕಿ ಬಹಳ ವರ್ಷಗಳಾಗಿದ್ದಲ್ಲಿ ಅಂತಹ 424 ತಿದ್ದುಪಡಿ ಪ್ರಕರಣಗಳು ಸರಿಪಡಿಸಲಾಗುತ್ತಿದ್ದು, 131ಲೆವೆನ್ ಈ ಪ್ರಕರಣವನ್ನು ವಿಲೇವಾರಿ ಮಾಡಲಾಗಿದ್ದು, ತಿದ್ದುಪಡಿ ಪಾಣಿ, ನೀಡಲಾಗಿದೆ ಎಂದ ಅವರು ಸಂಧ್ಯಾ ಸುರಕ್ಷಾ ಯೋಜನೆಯಡಿ 238, ವೃದ್ಯಾಪ್ಯಾ ವೇತನವನ್ನು 1260, ವಿಧವಾ ವೇತನ 117, ಅಂಗವಿಕಲರು ಸೇರಿದಂತೆ ಒಟ್ಟು 1632 ಪಲಾನುಭವಿಗಳಿಗೆ ಅರ್ಜಿಗಳನ್ನು ನೀಡಲಾಗಿದೆ.
ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳೇ ಸ್ವಯಂ ಪ್ರೇರಿತವಾಗಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರು ಎರಡನೇ ಕೋವಿಡ್ ಡೋಸ್ ಪಡೆದು ಆರು ತಿಂಗಳ ಬಳಿಕವಷ್ಟೇ ಸೆಪ್ಟೆಂಬರ್ 30ರವರೆಗೂ 18 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಅನ್ನು ಉಚಿತವಾಗಿ ಪಡೆಯಲು ವೈದ್ಯಾಧಿಕಾರಿ ಡಾ. ಬಿಂದು ಮಾಧವ್ ಮನವಿ ಮಾಡಿ 25 ಮಂದಿಗೆ ಕನ್ನಡಕ ವಿತರಣೆ ಹಾಗೂ ಇನ್ನೂರಕ್ಕೂ ಅಧಿಕ ಮಂದಿಗೆ ಅರೋಗ್ಯ ಪರೀಕ್ಷೆಯನ್ನು ಮಾಡಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳಲ್ಲಿ ಸಿಗುವ ಸವಲತ್ತುಗಳು ತಿಳಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ಒಟ್ಟು 84 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನಕ್ಕೆ ಸಂಬಂಧಿತ ಅರ್ಜಿಗಳು ಅತಿ ಹೆಚ್ಚು ಸ್ವೀಕೃತವಾಗಿದೆ.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿದ್ದಗಂಗಮ್ಮ ಉಪಾಧ್ಯಕ್ಷ ರಾಜು ಇಒ ನರಸಿಂಹಯ್ಯ, ಅರೋಗ್ಯ ಅಧಿಕಾರಿ ಬಿಂದು ಮಾಧವ್, ಕಂದಾಯ ನೀರಿಕ್ಷಕ ಗುರುಪ್ರಸಾದ್, ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಲೆಕ್ಕಿಗರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!