ಪಾವಗಡ: ತಾಲ್ಲೂಕು ತಹಶೀಲ್ದಾರ್ ಆಡಳಿತ ಕೇಂದ್ರಕ್ಕೆ ಮಂಗಳವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಭೇಟಿ ನೀಡಿ ಪ್ರಗತಿ ಕಾರ್ಯದ ಕುರಿತು ಪರಿಶೀಲಿಸಿದರು.
ವಿಶೇಷವಾಗಿ ಪ್ರತಿವಾರದ ಮಂಗಳವಾರದಂದು ಜಿಲ್ಲೆಯ ಪ್ರತಿ ತಾಲ್ಲೂಕಿನ ಆಡಳಿತ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮ ಇದಾಗಿದೆ.
ಈ ವೇಳೆ ತಾಲ್ಲೂಕು ಆಡಳಿತ ಕಚೇರಿಗೆ ಭೇಟಿ ಕೊಟ್ಟು ಸಿಬ್ಬಂದಿ ವರ್ಗದವರ ಕಾರ್ಯ ವೈಖರಿಯ ದಾಖಲೆಗಳನ್ನು ಪರಿಶೀಲಿಸಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಹಕರಿಸಬೇಕು ಎಂದು ಅಧಿಕಾರಿ ವರ್ಗದವರಿಗೆ ಸೂಚಿಸಿದರು.
ನಂತರ ಮಾಧ್ಯಮದವರಿಗೆ ಮಾತನಾಡಿದ ಅವರು ನಮ್ಮ ರಾಜ್ಯದೆಲ್ಲೆಡೆ ಸ್ಮಶಾಣ ನಿರ್ಮಾಣಕ್ಕೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಲಾಗಿದೆ.ಹಾಗಾಗಿ ಜಿಲ್ಲೆಯಾದ್ಯಂತ ಸ್ಮಶಾಣ ಅಭಿಯಾನ ಶುರು ಮಾಡುತ್ತಿದ್ದೇವೆ.ತಾಲ್ಲೂಕಿನ ಮಾಚರಾಜನಹಳ್ಳಿಯಲ್ಲಿ ಉಚಿತವಾಗಿ ಸ್ಮಶಾಣಕ್ಕೆ ಜಾಗ ದಾನ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 2400 ಹೆಚ್ಚು ಹಳ್ಳಿಗಳಿವೆ ಅವುಗಳಿಗೆ ಸ್ಮಶಾಣ ಕಲ್ಪಿಸುವ ವ್ಯವಸ್ಥೆ ನಡೆಯುತ್ತಿದೆ. ಇನ್ನು ಆಗಿಲ್ಲದ ಗ್ರಾಮದ ಖಾಸಗಿ ಭೂಮಿಗೆ ಸೂಕ್ತ ಮೌಲ್ಯ ದೊರಕಿಸುವಲ್ಲಿ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಆಡಳಿತದ ಉಪತಹಶೀಲ್ದಾರ್, ಆರ್.ಐ.ವಿಎಗಳ ಕಾರ್ಯ ದಾಖಲೆ ಪರಿಶೀಲನೆ ನಡೆಸಿದ್ದೇನೆ, ಹಾಗೂ ಸರ್ಕಾರದ ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು.
ಶಿಥಿಲಗೊಳ್ಳುತ್ತಿರುವ ಆಡಳಿತ ಕಚೇರಿಯ ನೂತನ ಕಟ್ಟಡಕ್ಕೆ ಪ್ರಸ್ಥಾವನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಎಡಿಸಿ ಚೆನ್ನಬಸಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ,ತಹಶೀಲ್ದಾರ್ ವರದರಾಜು, ಗ್ರೇಡ್ -2 ಸುಮತಿ,ಶಿರಸ್ತೇದಾರ್ ನರಸಿಂಹಮೂರ್ತಿ, ಚಂದ್ರಶೇಖರ್, ಡಿ.ಡಿ.ಎಲ್.ಆರ್ ಸುಜಯ್ ಕುಮಾರ್, ಆರ್.ಐಗಳಾದ ರಾಜ್ ಗೋಪಾಲ್, ಎಚ್.ಪಿ ಕಿರಣ್ ಕುಮಾರ್,ಶ್ರೀನಿವಾಸ, ಸುದರ್ಶನ್, ಸರ್ವೆ ಪರಿವೀಕ್ಷಕರಾದ ಜಿ.ಸಿ.ಕೃಷ್ಣಪ್ಪ, ರವಿಪ್ರಕಾಶ್ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.