ಪಾವಗಡ : ತಾಲ್ಲೂಕಿನ ನಿಡಗಲ್ ಹೋಬಳಿಯ ಕೋಡಿಗೆ ಹಳ್ಳಿ ಗ್ರಾಮದಲ್ಲಿ ಬುಧುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಇವರ ಆರ್ಥಿಕ ನೆರವಿನಿಂದ ‘ನಮ್ಮೂರು ನಮ್ಮ ಕೆರೆ’ ಎಂಬ ಯೋಜನೆ ಅಡಿಯಲ್ಲಿ ದೊಡ್ಡ ಕಟ್ಟೆ ಕೆರೆಯನ್ನು ಪುನಶ್ಚೇತನ ಗೊಳಿಸಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡುತ್ತಾ ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ನಮ್ಮ ತಾಲೂಕಿನಲ್ಲಿ 5 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ತಿಂಗಳ ಹಿಂದೆ ನಾನೆ ಈ ಕೆರೆಯ ಅಭಿವೃದ್ಧಿಗಾಗಿ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದೆ . 12 ಎಕರೆ ವಿಸ್ತೀರ್ಣದ ದೊಡ್ಡಕಟ್ಟೆ ಕೆರೆಯನ್ನು 11.92 ಲಕ್ಷದಲ್ಲಿ ಇಷ್ಟು ಬೇಗ ಅಭಿವೃದ್ಧಿಪಡಿಸಿ ಹಸ್ತಾಂತರಿಸುವುದು ಶ್ಲಾಘನೀಯ. ಹೈನುಗಾರಿಕೆ ಹಾಗೂ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ಕೃಷಿ ಚಟುವಟಿಕೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವವರನ್ನು ಗುರುತಿಸಿ ಹಲವಾರು ಯೋಜನೆಗಳ ಅಡಿಯಲ್ಲಿ ಅನುದಾನವನ್ನು ನೀಡಲಾಗುತ್ತಿದೆ ಕೃಷಿ ಅಭಿವೃದ್ಧಿ ಹಸು ಖರೀದಿ ಕುರಿ ಮೇಕೆ ಸಾಕಾಣಿಕೆ ಯಂತ್ರೋಪಕರಣ ಖರೀದಿ ಸ್ವ ಉದ್ಯೋಗ ಶಿಕ್ಷಣ ದಾಳಿಂಬೆ ಮಾವು ನುಗ್ಗೆ ಹುಣಸಿ ಸಸಿಗಳ ವಿತರಣೆ ಹಾಗೂ ಇನ್ನು ಮುಂತಾದ ಯೋಜನೆ ಅಡಿಯಲ್ಲಿ 13,675 ಫಲಾನುಭವಿಗಳಿಗೆ 6,415 ಲಕ್ಷ ಅನುದಾನ ನೀಡಿ ತಾಲೂಕಿನ ರೈತರ ನೆರವಿಗೆ ಧಾವಿಸಿದ್ದಾರೆ ಎಂದು ತಿಳಿಸಿದ್ದರು.
ತಾಲ್ಲೂಕಿನ ಯೋಜನಾಧಿಕಾರಿಯದ ನಂಜುಂಡಿ ಅವರು ಮಾತನಾಡುತ್ತಾ , ತಾಲ್ಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯು 2011ನೇ ಇಸ್ವಿಯಲ್ಲಿ ಪ್ರಾರಂಭವಾಗಿದ್ದು ಒಟ್ಟು 8 ವಲಯಗಳನ್ನಾಗಿ ವಿಂಗಡನೆ ಮಾಡಿ ಯೋಜನೆಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಮಹಿಳಾ ಸಬಲೀಕರಣ , ಸ್ವಸಹಾಯ ಸಂಘಗಳ ರಚನೆ , ರೈತ ಪ್ರಗತಿ ಬಂದು ತಂಡ ರಚನೆ , ಶ್ರಮ ವಿನಿಮಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ನೆರವು , ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ 2941 ಸ್ವಸಹಾಯ ತಂಡಗಳ ರಚನೆ ಗುರಿ ಹೊಂದಿದ್ದು ಇದುವರೆಗೂ 28 25 ಸ್ವಾಸಹಾಯ ಸಂಘಗಳನ್ನು ರಚನೆ ಮಾಡಲಾಗಿದೆ. ಇದರಲ್ಲಿ 22325 ಸದಸ್ಯರು ಸದಸ್ಯತ್ವವನ್ನು ಪಡೆದು ಅನುಕೂಲಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಪ್ರಾದೇಶಿಕ ನಿರ್ದೇಶಕ ಶ್ರೀನಿವಾಸ್, ಕ್ಷೇತ್ರ ನಿರ್ದೇಶಕ ದಿನೇಶ್, ಪ್ರಾದೇಶಿಕ ಅಭಿಯಂತರ ಅರುಣ್, ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಮ್ಮ, ಕೆರೆ ಸಮಿತಿ ಅಧ್ಯಕ್ಷ ಆನಂದ ಗೌಡ, ನಾಗರಾಜು, ಮುಕುಂದ, ಕರಿಯಪ್ಪ, ರೇವಣ್ಣ, ವೀರಭದ್ರಪ್ಪ ಸೇರಿದಂತೆ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.