ಗುಬ್ಬಿ ಝಳುಪಿಸಿದ ಲಾಂಗು, ಮಚ್ಚು: ಸಿ.ಐ.ಟಿ ಕಾಲೇಜು ವಿದ್ಯಾರ್ಥಿಗೆ ಗಾಯ

ಗುಬ್ಬಿ: ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವಿನ ಕಿರಿಕ್ ಲಾಂಗ್ ತೋರಿಸಿ ಬೆದರಿಸಿದ್ದಲ್ಲದೆ ಓರ್ವ ವಿದ್ಯಾರ್ಥಿಯನ್ನು ಗಾಯಗೊಳಿಸಿದ ಘಟನೆ ಗುಬ್ಬಿ ಸಿ.ಐ.ಟಿ ಕಾಲೇಜು ಹಿಂಬದಿ ಹೆದ್ದಾರಿ ಬಳಿ ನಡೆದಿದೆ.

ಸಿ.ಐ.ಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳ ನಡುವೆ ನಡೆದ ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ನಡೆದ ಕಿರಿಕ್ ಈ ಮಟ್ಟದ ಘಟನೆಗೆ ಕಾರಣವಾಗಿದೆ.
ರವಿ ಮತ್ತು ರೋಹಿತ್ ಇಬ್ಬರ ವಿದ್ಯಾರ್ಥಿಗಳ ಮಧ್ಯೆ ಬೆಟ್ಟಿಂಗ್ ವಿಷಯದಲ್ಲಿ ನಡೆದಿದ್ದ ಚಕಮಕಿ ಹಿನ್ನಲೆ ಶನಿವಾರ ಬೆಳಿಗ್ಗೆ ಸುಮಾರು 11.30 ರಲ್ಲಿ ಎಂಟು ಜನರ ಯುವಕರ ಗುಂಪು ಕಾಲೇಜು ಹಿಂಬದಿ ಕಾದು ಕುಳಿತಿದ್ದರು.

ನಂತರ ಇದೇ ವಿಚಾರವನ್ನು ಚರ್ಚಿಸಲು ಕಾಲೇಜು ಹಿಂಬದಿ ತೆರಳಿದ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ಏಕಾಏಕಿ ಲಾಂಗ್ ಮಚ್ಚು ಹೊರ ಬಂದಿವೆ. ಈ ಮಧ್ಯೆ ವಿದ್ಯಾರ್ಥಿ ಸುರಾಗ್ ಎಂಬಾತನ ಮೇಲೆರಗಿ ಗಾಯಗೊಳಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿ ಸುರಾಗ್ ಭಯದಲ್ಲಿದ್ದು, ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳಲ್ಲಿ ಸಹ ಆತಂಕ ಸೃಷ್ಟಿಯಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!