ಶೈಕ್ಷಣಿಕ ಪ್ರಗತಿಗೆ ಪೂರಕ ಕೆಲಸ ಉತ್ತಮ ಸೇವೆ : ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್.

ಗುಬ್ಬಿ: ಶೈಕ್ಷಣಿಕ ಪ್ರಗತಿಗೆ ಸಹಕಾರಿ ಆಗುವ ಸಾಮಾಜಿಕ ಸೇವಾ ಕಾರ್ಯ ಸಾರ್ಥಕ ಬದುಕು. ಈ ನಿಟ್ಟಿನಲ್ಲಿ ಪ್ರತಿವರ್ಷ ನನ್ನ ಹುಟ್ಟು ಹಬ್ಬವನ್ನು ಸಾಮಾಜಿಕ ಕೆಲಸದ ಮೂಲಕ ಆಚರಿಸಿಕೊಳ್ಳುತ್ತೇನೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಅವರ 61 ನೇ ಹುಟ್ಟ ಹಬ್ಬದ ಪ್ರಯುಕ್ತ ನಡೆದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ ನೀಡಿ ಮಾತನಾಡಿ ಅವರು ಬಡ ಮಕ್ಕಳ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಬೇಕಿದೆ. ದೇಶದ ಸರ್ವತೋಮುಖ ಬೆಳವಣಿಗೆ ಶಿಕ್ಷಣವೇ ಮುಖ್ಯ. ಈ ನಿಟ್ಟಿನಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡುವ ಕಾರ್ಯ ಸಮುದಾಯ ಮಾಡಬೇಕು ಎಂದು ಕರೆ ನೀಡಿದರು.

ದುಡಿಮೆಯ ಒಂದಂಶ ಸಮಾಜ ಸೇವೆಗೆ ಮೀಸಲಿಡುವ ಗುಣ ಉಳ್ಳವರಿಗೆ ಬರಬೇಕು. ಸಾಕಷ್ಟು ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಅವಕಾಶವಿಲ್ಲ. ಇಂತಹ ಮಕ್ಕಳು ಬಾಲ ಕಾರ್ಮಿಕರಾಗಿ ನರಳುತ್ತಾರೆ. ಮುಂದೆ ದೇಶಕ್ಕೆ ಮಾರಕವಾಗುತ್ತಾರೆ. ಚಿಗುರುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಶಿಕ್ಷಣ ಕೊಡುವುದು ಮೂಲಭೂತ ಹಕ್ಕು. ಇದು ಎಲ್ಲರ ಕರ್ತವ್ಯವಾಗಿದೆ. ಪ್ರತಿ ವರ್ಷ ಈ ಸೇವಾ ಕಾರ್ಯ ನಿರಂತರ ನಡೆಸಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೇವಾಸದನ ಶಾಲೆಯ ಜಗದೀಶ್, ಪಬ್ಲಿಕ್ ಶಾಲೆಯ ಶ್ರೀರಾಮ ಶಂಕರ್, ಮುಖ್ಯ ಶಿಕ್ಷಕ ಅನಂತರಾಜು, ಮುಖಂಡರಾದ ನರಸಿಂಹಮೂರ್ತಿ, ಶಂಕರೇಗೌಡ, ಸೋಮಣ್ಣ, ಚಂದ್ರಶೇಖರ್, ಸುರೇಶ್, ಅಣ್ಣದೊರೆ, ನಾಗರಾಜು ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!