ಗುಬ್ಬಿ: ಅಕ್ರಮವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರು ಜನರ ಬಂಧಿಸಿದ ಗುಬ್ಬಿ ಪೊಲೀಸರು 5,270 ರೂಗಳನ್ನು ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.
ಸಿಪಿಐ ನದಾಫ್ ಅವರ ಮಾರ್ಗದರ್ಶನದಲ್ಲಿ ಗುಬ್ಬಿ ಠಾಣಾ ಪಿಎಸೈ ಮುತ್ತುರಾಜ್ ಅವರ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ಮಾದಾಪುರ ಗ್ರಾಮದಲ್ಲಿ ದಾಳಿ ನಡೆಸಿದರು.
ದಾಳಿ ಮಾಡಿದ ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ನವೀನ್, ರಂಗನಾಥ್, ಶಂಕರೇಗೌಡ, ಮಧು, ದೇವರಾಜ್, ಹನುಮಂತರಾಜು ಇದ್ದರು.
ವರದಿ: ಜಿ.ಆರ್.ರಮೇಶ್ ಗೌಡ, ಗುಬ್ಬಿ.