ಪಾವಗಡ: ಇಷ್ಟು ದಿನ ರಾರಾ ರಕ್ಕಮ್ಮ ಹಾಡಿನ ಮೂಲಕ ಅಭಿಮಾನಿಗಳಲ್ಲಿ ಗುಂಗು ಹಿಡಿಸಿದ್ದ ಕನ್ನಡದ ಅಭಿಮಾನಿಗಳ ಹುಚ್ಚ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ಇಂದು ಪ್ರಪಂಚದೆಲ್ಲೆಡೆ ತೆರೆಕಂಡಿದೆ.
ಸುಮಾರು 3200 ಕ್ಕೂ ಅಧಿಕ ಸ್ಕ್ರೀನ್ ಮೇಲೆ ಅಬ್ಬರಿಸುತ್ತಿರುವ ವಿಕ್ರಾಂತ್ ರೋಣ ಅಭಿಮಾನಿಗಳಲ್ಲಿ ಹಾಗೂ ಕನ್ನಡಿಗರಲ್ಲಿ ಕುತೂಹಲಾ ಕೆರಳಿಸಿತ್ತು.ಅದಕ್ಕೆಲ್ಲ ಇಂದು ಬ್ರೇಕ್ ಸಿಕ್ಕಿ ಅಭಿಮಾನಿಗಳು ಸಖತ್ ಖುಷಿ ಖುಷಿಯಾಗಿ ಸಿನಿಮಾವನ್ನ ಬರಮಾಡಿಕೊಂಡಿದ್ದಾರೆ.ಅದರಂತೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗಡಿನಾಡ ಕಿಚ್ಚ ಸುದೀಪ್ ಸೇನೆ ಹುಡುಗರು ಸಂಭ್ರಮದಿಂದ ಸಿನಿಮಾ ಬಿಡುಗಡೆಯ ಸಂಭ್ರಮವನ್ನು ಕಿಚ್ಚನ ದೊಡ್ಡ ಗಾತ್ರದ ಕಟೌಟ್ ನಿಲ್ಲಿಸಿ, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.
ಹಗಲು ರಾತ್ರಿ ತಯಾರಿ ನಡೆಸಿಕೊಂಡಿದ್ದ ಗಡಿನಾಡಿನ ಕಿಚ್ಚನ ಅಭಿಮಾನಿಗಳು ವಿಕ್ರಾಂತ್ ರೋಣ ಪೋಸ್ಟರ್ ಇರುವ ಟೀ ಶರ್ಟ್ ಧರಿಸಿ ಬೆಳಿಗ್ಗೆ ಎಂಟು ಗಂಟೆಯಿಂದಲೇ ಬಾದ್ಷಾ ಸುದೀಪ್ ಅವರಿಗೆ ಜೈ ಕಾರ ಕೂಗುತ್ತ ಗಮನಸೆಳೆದರು.
ಇನ್ನು ಪಾವಗಡ ಶನಿಮಹಾತ್ಮ ಸರ್ಕಲ್ ನಿಂದ ಟೋಲ್ ಗೇಟ್ ತಲುಪಿ ಅಲಂಕಾರ ಥಿಯೇಟರ್ ವರೆಗೂ ಕಿಚ್ಚನ ಪೋಸ್ಟರ್ ಹಿಡಿದು ಮೆರವಣಿಗೆ ನಡೆಸುತ್ತ ಕನ್ನಡ ಸಿನಿಮಾ ನೋಡಿ ಎಂದು ಜಾಗೃತಿ ಮೂಡಿಸಿದರು.
ಒಟ್ಟಾರೆ ಗಡಿನಾಡಲ್ಲಿ ಕನ್ನಡ ಸಿನಿಮಾ ಅಭಿಮಾನಿಗಳೂ ಇದ್ದಾರೆ ಎಂದು ತೋರಿಸುವಲ್ಲಿ ಕಿಚ್ಚನ ಅಭಿಮಾನಿಗಳು ಸಾಕ್ಷಿಯಾಗಿ ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ಗಡಿನಾಡ ಕಿಚ್ಚ ಸುದೀಪ್ ಸೇನೆ ಎಲ್ಲಾ ಪದಾಧಿಕಾರಿಗಳು ಹಾಗೂ ತಾಲ್ಲೂಕಿನ ಅಭಿಮಾನಿಗಳು ಇದ್ದರು.