ಪಾವಗಡದ ಶನಿದೇವನ ದರ್ಶನಕ್ಕೆ ಬಂದ ಭಕ್ತ ಸಾಗರ ಕಟ್ಟೇಚ್ಚರದಲ್ಲಿ ತೊಡಗಿದ ಖಾಕಿ ಪಡೆ

ಪಾವಗಡ: ಶ್ರಾವಣ ಶುದ್ಧ ತದಿಗೆ ಪ್ರಥಮ ಶನಿವಾರ ಪಟ್ಟಣದ ಶೀತಲಾಂಬ ತಾಯಿ, ಶ್ರೀ ಜ್ಯೇಷ್ಠ ದೇವಿ ಸಮೇತ ಶನಿಮಹಾತ್ಮ ಸ್ವಾಮಿಗೆ ವಿಶೇಷ ಪೂಜೆ ಕಾರ್ಯಗಳು ನಡೆದವು.ಇಂದು ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ತೈಲಾಧಿ ಅಭಿಷೇಕ, ನವಗ್ರಹ ಪೂಜೆಗಳು ಆರಂಭವಾದವು.
ಪ್ರತಿ ಶ್ರಾವಣ ಮಾಸದಲ್ಲಿ ಶನಿದೇವನ ದರ್ಶನ ಭಾಗ್ಯಕ್ಕಾಗಿ ರಾಜ್ಯ ಅಂತರಾಜ್ಯಗಳಿಂದ ಬರುವ ಭಕ್ತರಲ್ಲಿ ಶನಿದೇವ ನಿಗೆ ನವಗ್ರಹ ಪೂಜೆ ಮಾಡಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಹಾಗೂ ಶೀತಲಯಂತ್ರಕ್ಕೆ ತಾಳಿ ಕಟ್ಟಿಸಿದರೆ ವಿವಾಹ ಭಾಗ್ಯ ಕೂಡಿ ಬರುತ್ತದೆ ನಂಬಿಕೆ ಭಕ್ತರದ್ದಾಗಿದೆ.ಹಾಗಾಗಿ ದೂರದೂರುಗಳಾದ ಆಂಧ್ರ ಪ್ರದೇಶದ ಕಲ್ಯಾಣದುರ್ಗ, ಅನಂತಪುರ, ಹಿಂದೂಪುರ ತಮಿಳುನಾಡು,ತುಮಕೂರು, ಬೆಂಗಳೂರು, ಶಿರಾ, ಬಳ್ಳಾರಿ ಚಿತ್ರದುರ್ಗ, ದಾವಣಗೆರೆ ಹೀಗೆ ನಾನಾ ಭಾಗಗಳಿಂದ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕೆ ಸಾಗುತ್ತಿದ್ದು ಗಮನಸೆಳೆಯಿತು.
ಸಂಕಲ್ಪ ಮಾಡಿಕೊಂಡ ಭಕ್ತರು ಮುಡಿಯನ್ನ ಭಗವಂತನ ಹೆಸರಿಗೆ ಅರ್ಪಿಸುತ್ತಿದ್ದರು.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ರಸ್ತೆ ಬದಿಯಲ್ಲಿ ವ್ಯಾಪಾರದ ಅಂಗಡಿಗಳಿಗೆ ಅನುಕೂಲ ಕಲ್ಪಿಸಲಾಗಿತ್ತು. ಜನರು ಕೂಡ ವಸ್ತುಗಳು ಪುರಿ ಕಾರ ಸಿಹಿ ಬತ್ತಾಸ್ ಕೊಂಡು ಅಬ್ಬಾ ಪೂಜೆ ಆಯ್ತು ಎಂದು ಬೀಗುತ್ತ ಸಾಗುತ್ತಿದ್ದರು.
ಮತ್ತೊಂದು ವಿಶೇಷ ಅಂದರೆ ಯಾವ ವರ್ಷವೂ ಇಷ್ಟು ಸಂಖ್ಯೆಯಲ್ಲಿ ಪೊಲೀಸ್ ನವರು ಕಂಡು ಬಂದಿರಲಿಲ್ಲ ಆದರೆ ಈ ಭಾರಿ ಶುಕ್ರವಾರದಿಂದಲೇ ಪಾವಗಡ ಪೊಲೀಸರು ಮತ್ತು ಮಧುಗಿರಿ ಉಪವಿಭಾಗದ ಪೊಲೀಸ್ ಸಿಬಂದಿಗಳು ತುಂಬಾನೇ ಕಟ್ಟೇಚ್ಚರದಿಂದ ಭದ್ರತೆಯನ್ನ ಕಲ್ಪಿಸಿದ್ದರು.ನಾಗರಕಟ್ಟೆ, ಹಳೆ ಎಲ್ ಐ ಸಿ ಕಚೇರಿ , ಎಸ್.ಎಸ್.ಕೆ ಸಮುದಾಯ ಭವನ ಭಾಗದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ ಖಾಕಿ ಪಡೆ ಭಕ್ತರನ್ನ ನಿಯಂತ್ರಣ ಮಾಡುತ್ತಿದ್ದದ್ದು ಕಾರ್ಯದಲ್ಲಿ ಖಾಕಿ ಪಡೆಯ ಶ್ರಮ ಕಂಡು ಬಂತು ಇದಕ್ಕೆ ಎಸ್ ಎಸ್ ಕೆ ಸಂಘದವರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಕ್ತರಿಗೆ ಪ್ರಯಾಣಿಕರಿಗೆ, ಜನರಿಗೆ ತೊಂದರೆಯಾಗದಂತೆ ಭದ್ರತೆ ಒದಗಿಸಲಾಗಿದೆ. ಸುಮಾರು ನೂರು ಮಂದಿ ಪೊಲೀಸರನ್ನ ಭದ್ರತೆಗೆ ನಿಯೋಜಿಸಿದೆ.ಅದರಲ್ಲಿ ಇಬ್ಬರು ಸರ್ಕಲ್ ಇನ್ಸ್ ಪೆಕ್ಟರ್ ಗಳು,ಮೂವರು ಸಬ್ ಇನ್ಸ್ ಪೆಕ್ಟರ್, ಎಎಸ್ ಐ ಹತ್ತು ಮಂದಿ ಮಧುಗಿರಿ ಉಪವಿಭಾಗದ 15 ಮಂದಿ ಮಹಿಳಾ ಪೊಲೀಸ್ ಸಿಬ್ಬಂಧಿಗಳು ಜೊತೆಗೆ 75 ಮಂದಿ ಪೊಲೀಸ್ ಸಿಬ್ಬಂದಿಗಳು ಡಿವೈ.ಎಸ್ಪಿ ವೆಂಕಟೇಶ್ ನಾಯ್ಡ್ ಅವರ ಮಾರ್ಗದರ್ಶನದ ಮೇರೆಗೆ ಸುರಕ್ಷಕತೆಯಲ್ಲಿ ತೊಡಗಿದ್ದಾರೆ ಎಂದು ವೃತ್ತ ಆರಕ್ಷಕ ನಿರೀಕ್ಷಕ ಕಾಂತರೆಡ್ಡಿ ಯವರು ತಿಳಿಸಿದರು.
ತೆಂಗಿನ ಕಾಯಿ ಹೊಡೆಯುವಂತಿಲ್ಲ ಎಂಬ ಸಂಘದವರ ಮನವಿಯನ್ನ ಗಾಳಿಗೆ ತೂರಿದ ಕೆಲ ಭಕ್ತರು ಅಂಗಡಿಗಳ ಮುಂದೆ ಎಣ್ಣೆ ಬತ್ತಿ ಕಾಯಿ ಸುಡುವ ಕಾರ್ಯ ಮಾಡಿ ಒಂದಷ್ಟು ಗೊಂದಲ ಏರ್ಪಡಿಸಿದ್ದರು ಅದನ್ನ ಮನಗಂಡ ಪೊಲೀಸ್ ಇಲಾಖೆಯವರು ನಿಯಂತ್ರಣದ ಕಾರ್ಯ ನಡೆಸಿದರು. ಈ ವಿಚಾರಕ್ಕೆ ಮುಂದಿನ ವಾರದಲ್ಲಿ ವ್ಯಾಪಾರಸ್ಥರು ಹಾಗೂ ಭಕ್ತರಿಗೆ ನೋವಾಗದಂತೆ ಅನುಕೂಲ ಕಲ್ಪಿಸಲಾಗುವುದು ಎಂದು ಪುರಸಭಾ ಅಧ್ಯಕ್ಷ ವೇಲುರಾಜು ಅವರು ತಿಳಿಸಿದರು.
ಇನ್ನು ಎಸ್.ಎಸ್.ಕೆ ಸಂಘದವರು ಬಂದ ಭಕ್ತರಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಕಲ್ಪಿಸಿದ್ದರು.ಇನ್ನು 6 ನೇ ತಾರೀಕು ಮತ್ತು,13,20,27 ನೇ ಕೊನೆ ಶ್ರಾವಣ ಶನಿವಾರದವರೆಗೂ ವಿಶೇಷ ಪೂಜೆಗಳು ನಡೆಯುತ್ತವೆ.ಪ್ರಥಮ ಶನಿವಾರದ ಪೂಜೆಗೆ ಸುಮಾರು 13 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಬಂದಿದ್ದರು. ಮುಂದಿನ ವಾರಗಳಲ್ಲಿ ಇನ್ನಷ್ಟು ಭಕ್ತರು ಹೆಚ್ಚಾಗುವ ಸಾಧ್ಯತೆಯಿದೆ ಹಾಗಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ವಾದ ನೀಡದಂತೆ ಭಕ್ತರಲ್ಲಿ ಎಸ್.ಎಸ್.ಕೆ ಸಂಘದ ಅಧ್ಯಕ್ಷ ಶ್ರೀನಿವಾಸ್ ಅವರು ಮನವಿ ಮಾಡಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!