ವರುಣನ ಆರ್ಭಟಕ್ಕೆ ಧರೆಗುರುಳಿದ ಪತ್ರಕರ್ತ ದೀಕ್ಷಿತ್ ಮನೆ ಗೋಡೆ.

ಗುಬ್ಬಿ: ಕಳೆದ ನಾಲ್ಕು ದಿನಗಳಿಂದ ಬಂದ ಮಳೆಗೆ ಕನ್ನಡಪ್ರಭ ಗುಬ್ಬಿ ತಾಲ್ಲೂಕು ವರದಿಗಾರ ಆನಂದ್ ದೀಕ್ಷಿತ್ ಅವರ ಮನೆಯ ಗೋಡೆ ಧರಾಶಾಹಿಯಾಗಿದೆ.

ಪಟ್ಟಣದ ಬೆಲ್ಲದಪೇಟೆಯಲ್ಲಿನ ಶ್ರೀ ರಾಮಲಿಂಗೇಶ್ವರ ದೇವಾಲಯದ ಅರ್ಚಕರಾದ ಆನಂದ್ ದೀಕ್ಷಿತ್ ಅವರ ಹಳೆ ಮನೆಯ ಒಂದು ಭಾಗದ ಗೋಡೆ ಕಸಿದು ಬಿದ್ದಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಮನೆಯಲ್ಲಿ ಹಲವಾರು ವರ್ಷದಿಂದ ವಾಸವಿದ್ದ ದೀಕ್ಷಿತ್ ಅವರ ಕುಟುಂಬಕ್ಕೆ ಆಧಾರವಾಗಿದ್ದ ಈ ಮನೆ ಮಳೆಗೆ ಸಿಲುಕಿ ಧರೆಗುರುಳಿದೆ.

ರಾಮ ಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಆನಂದ್ ದೀಕ್ಷಿತ್ ಅವರ ಹಿರಿಯರು ಬಾಳಿ ಬದುಕಿದ ಮನೆ ಉಳಿಸಿಕೊಳ್ಳಲು ಹರಸಾಹಸ ನಡೆಸಿದ್ದ ವರದಿಗಾರ ಈ ಹಿಂದೆ ಮನೆಯ ದುರಸ್ಥಿ ಮಾಡಿಕೊಂಡಿದ್ದರು. ಆದರೆ ನಿರಂತರ ಮಳೆಯ ಆರ್ಭಟಕ್ಕೆ ದೀಕ್ಷಿತ್ ಕುಟುಂಬ ಕಂಗಾಲಾಗಿದೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!