ವಿದ್ಯುತ್ ಶಾರ್ಟ್ ಸರ್ಕ್ಯೂಟ್ ವ್ಯಕ್ತಿ ಸಾವು

ಪಾವಗಡ: ವಿದ್ಯುತ್ ಶಾರ್ಕ್ ಸರ್ಕ್ಯೂಟ್ ನಿಂದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲ್ಲೂಕಿನ ವೀರಮ್ಮನಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ 7.45 ಸುಮಾರಿಗೆ ನಡೆದಿದೆ.
ಈರಣ್ಣ. ವಿ.ಪಿ (61) ಮೃತಪಟ್ಟ ದುರ್ದೇವಿಯಾಗಿದ್ದಾರೆ.
ಈತ ಪಳವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿನ ವೀರಮ್ಮನಹಳ್ಳಿ ಯಲ್ಲಿ ನೀರಗಂಟಿ ಕಾರ್ಯ ನಿರ್ವಹಿಸುತ್ತಿದ್ದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಸೇವೆ ಮುಂದುವರೆಸಿದ್ದರು ಎನ್ನಲಾಗಿದೆ. ಸೋಮವಾರ ಬೆಳಿಗ್ಗೆಯೇ ನೀರನ್ನ ಬಿಡಲು ಮೋಟಾರ್ ಚಾಲು ಮಾಡಲು ಹೋಗಿದ್ದಾರೆ.ವಿದ್ಯುತ್ ವ್ಯತ್ಯವಾಗಿದ್ದರಿಂದ ತಾವೇ ಸರಿಪಡಿಸಲು ಹೋದ ಹಿನ್ನೆಲೆ ವಿದ್ಯುತ್ ಪ್ರವಹಿಸಿ ನತದೃಷ್ಟ ಈರಣ್ಣ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ಕಡುಬಡತನದ ಕುಟುಂಬ ಇದಾಗಿತ್ತು.ಆಸರೆಯಾಗಿದ್ದ ಈತನನ್ನ ಕಳೆದುಕೊಂಡ ಕುಟುಂಬದವರಿಗೆ ನೋವ ಭರಿಸುವ ಶಕ್ತಿ ಭಗವಂತ ಕರುಣಿಸಲಿ ನೀಡಲಿ..
ಸ್ಥಳಕ್ಕೆ ಪಾವಗಡ ಪೊಲೀಸ್ ನವರು ಬಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!