ಚಿಕ್ಕೋನಹಳ್ಳಿಯ ಅವೈಜ್ಞಾನಿಕ ಜನತಾ ಕಾಲೋನಿಗೆ ನುಗ್ಗಿದ ಮಳೆ ನೀರು : ಬೇಸತ್ತ ಸ್ಥಳೀಯರು

ಗುಬ್ಬಿ: ಅವೈಜ್ಞಾನಿಕವಾಗಿ ನಿರ್ಮಾಣವಾದ ಜನತಾ ಕಾಲೋನಿ ಮನೆಗಳು ಕೆಲ ದಿನದಿಂದ ಬಿದ್ದ ಮಳೆಗೆ ಸಂಪೂರ್ಣ ಜಖಂ ಗೊಂಡಿವೆ. ಕೆಲ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಳೆದ ಬಾರಿ ಕೂಡಾ ಹೀಗೆ ನಡೆದು ಪರಿಹಾರ ಕೊಡುವ ಭರವಸೆ ನೀಡಿದ ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ. ಈ ಬಗ್ಗೆ ಸ್ಥಳ ಮಹಜರು ಮಾಡಲು ಬಂದ ಕಂದಾಯ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ನಿವಾಸಿಗಳ ಪರ ನಿಂತ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಕೂಡಲೇ ಅಗತ್ಯ ಕ್ರಮಕ್ಕೆ ಆಗ್ರಹಿಸಿದರು.

ಈ ಹಿಂದೆ ಬೇಕಾಬಿಟ್ಟಿ ನಿರ್ಮಾಣವಾದ ಜನತಾ ಮನೆಗಳು ಅವೈಜ್ಞಾನಿಕವಾಗಿದೆ. ಈ ಜೊತೆಗೆ ಅಗತ್ಯ ಸಿಸಿ ರಸ್ತೆ, ಬಾಕ್ಸ್ ಚರಂಡಿ ಇಲ್ಲದ ಕಾರಣ ಮಳೆ ನೀರು ನೇರ ಮನೆಗೆ ನುಗ್ಗುತ್ತಿದೆ. ಒಂದು ವಾರದಿಂದ ಆಗಿರುವ ಅನಾಹುತ ತಿಳಿದೂ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಸರಿಯಲ್ಲ. ಕೂಡಲೇ ಇಂತಹ ಸ್ಥಳಗಳಿಗೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಬೇಕು. ಸರ್ಕಾರದ ಗಮನಕ್ಕೆ ತಂದು ನೆರೆ ಪರಿಹಾರ ನೀಡಬೇಕು. ಕೂಲಿ ಮಾಡುವ ಈ ಕಾಲೋನಿ ಮನೆಗಳ ದುರಸ್ತಿಗೆ ಅನುಕೂಲ ಮಾಡಿಕೊಟ್ಟು ಕೂಡಲೇ ಪರಿಹಾರ ಧನ ನೀಡಿ ಸಹಕಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಸಿಸಿ ರಸ್ತೆ ಚರಂಡಿ ನಿರ್ಮಾಣ ಕಾರ್ಯಕ್ಕೆ ಗ್ರಾಮ ಪಂಚಾಯತಿಗೆ ಮನವಿ ನೀಡಬೇಕು. ಮನೆಗಳ ದುರಸ್ತಿಗೆ ಪರಿಹಾರ ಒದಗಿಸುವ ಕೆಲಸ ಮಾಡುವ ಭರವಸೆ ಕಂದಾಯ ನಿರೀಕ್ಷಕ ರಮೇಶ್ ತಿಳಿಸಿದರು. ಸ್ಥಳದಲ್ಲಿ ಗ್ರಾಮ ಲೆಕ್ಕಿಗ ಮಾದೇವಿ ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!