ಕೊರಟಗೆರೆ: ಪಟ್ಟಣದಲ್ಲಿ ಸತತವಾಗಿ ೫ ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ.
ಕೆರೆಗಳು ತುಂಬಿ ಹರಿಯುತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕುಸಿಯಲು ಆರಂಭ ಮಾಡಿವೆ.
ಮಳೆಯಿಂದಾಗಿ ಹಾನಿಯಾಗಿರುವ ಮನೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸುವಲ್ಲಿ ಮುಂದಾಗಿರುವ ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಜನರ ಸಹಕಾರದೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಿಗ್ಗೆ ಬಿಸಿಲ ಧಗೆ, ರಾತ್ರಿ ವರುಣನ ಆರ್ಭಟ. ವರ್ಷದಲ್ಲಿ ಎರಡನೇ ಬಾರಿ ತುಂಬಿ ಹರಿಯುತ್ತಿರುವ ತೀತಾ ಜಲಾಶಯ ನೋಡುಗರ ಕಣ್ಣು ಸೆಳೆಯುತ್ತಿದೆ.
ಮಹಾಲಕ್ಷಿ÷್ಮ ದರ್ಶನಕ್ಕೆ ಬರುತ್ತಿರುವ ಭಕ್ತರ ಸೆಳೆಯುತ್ತಿರುವ ಜಲಾಶಯ ಎಲ್ಲರೂ ಸೆಲ್ಫಿ ತೆಗೆದುಕೊಂಡು ಹರುಷ ವ್ಯಕ್ತಪಡಿಸುತ್ತಿದ್ದಾರೆ.
ವರಮಹಾಲಕ್ಷಿ÷್ಮ ಹಬ್ಬಕ್ಕೆ ಗೊರವನಹಳ್ಳಿಯ ಮಹಾಲಕ್ಷಿ÷್ಮ ತಾಯಿಯ ದರ್ಶನಕ್ಕೆ ಬರುವ ಭಕ್ತರಿಗೆ ಮತ್ತೊಂದು ಖುಷಿ ಸಂಗತಿಯಾಗಿದೆ.
೫ ದಿನಗಳಿಂದ ರಾಜ್ಯದ ತುಂಬೆಲ್ಲ ಬಿಡದಂತೆ ಸುರಿಯುತ್ತಿರುವ ಭಾರಿ ಮಳೆಯಿಂದ ಕೆಲವು ಕಡೆ ಅನಾವೃಷ್ಟಿ ಸೃಷ್ಟಿಯಾದರೆ ಕೆಲವು ಭಾಗದಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ತೀತಾ ಜಲಾಶಯ ಈಗಾಗಲೇ ತುಂಬಿರುವುದು ಒಂದು ಕಡೆಯಾದರೆ, ಸರ್ ಎಂ ವಿಶ್ವೇಶ್ವರಯ್ಯನವರ ನೀಲಿನಕ್ಷೆಯಲ್ಲಿ ೧೨೦ ವರ್ಷಗಳ ಹಿಂದೆಯೇ ಸಿದ್ಧಗೊಂಡಿರುವ ಇಡೀ ತುಮಕೂರು ಜಿಲ್ಲೆಗೆ ಪ್ರಥಮ ಕೆರೆ ಎಂದೇ ಪ್ರಖ್ಯಾತಿಗೊಂಡಿರುವ ಕೊರಟಗೆರೆ ತಾಲ್ಲೂಕಿನ ಅತಿ ದೊಡ್ಡ ಕೆರೆ ಎಂದೇ ಪ್ರಸಿದ್ಧಗೊಂಡಿರುವ ಮಾವತ್ತೂರು ಕೆರೆ ತುಂಬಲು ಕೇವಲ ೬ ಅಡಿಯಷ್ಟು ಬಾಕಿಯಿದ್ದು ಈ ಕೆರೆ ತುಂಬಿದರೆ ಮುಂದಿನ ೫ ರಿಂದ ೬ ವರ್ಷಗಳ ಕಾಲ ರೈತರ ಜಮೀನಿನಲ್ಲಿರುವ ಬೋರ್‌ವೆಲ್ ಹಾಗೂ ಬಾವಿಗಳಿಗೆ ನೀರಿನ ಸಮಸ್ಯೆ ಬರುವುದಿಲ್ಲ ಎನ್ನುವುದು ಅಲ್ಲಿನ ರೈತರು ಹಾಗೂ ಸ್ಥಳೀಯರ ಮಾತಾಗಿದೆ.
ಎಲ್ಲ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೆ ಕೆರೆಗಳ ಏರಿಗಳ ಮೇಲೆ ಬೆಳೆದಿರುವ ಗಿಡ ಮರಗಳನ್ನು ತೆಗೆದು ಕೆರೆಗಳ ರಕ್ಷಣೆಗೆ ಮುಂದಾಗಬೇಕಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆಗಳ ಪುನಶ್ಚೇತನಕ್ಕೆ ಮುಂದಾಗಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದರು.
ಇನ್ನೂ ಬೇಸಿಗೆ ಸಮಯದಲ್ಲಿ ತಾಲ್ಲೂಕಿನ ಬಹುತೇಕ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದವು. ಈಗ ಬೋರ್‌ವೆಲ್‌ಗಳಲ್ಲಿ ತನ್ನಷ್ಟಕ್ಕೆ ತಾನೇ ನೀರು ತುಂಬಿ ಮೇಲೆ ಬರುತ್ತಿರುವುದನ್ನು ಬರುವುದನ್ನು ಕಂಡು ರೈತ ಸಂತಸ ವ್ಯಕ್ತಪಡಿಸಿದ್ದಾನೆ. ಇದಕ್ಕೆ ನಿದರ್ಶನವೆಂಬAತೆ ಕೊರಟಗೆರೆ ತಾಲ್ಲೂಕಿನ ಮಾಧವರ ಗ್ರಾಮದ ನರಸಪ್ಪನವರ ಜಮೀನಿನಲ್ಲಿರುವ ಬೋರ್‌ವೆಲ್‌ನಲ್ಲಿ ತನ್ನಷ್ಟಕ್ಕೆ ತಾನೇ ನೀರು ಮೇಲೆ ಬರುತ್ತಿರುವುದು ಕಾಣಬಹುದು.
ವರದಿ – ಹರೀಶ್‌ಬಾಬು. ಬಿ.ಹೆಚ್.