ಕೊರಟಗೆರೆ :- ಪರವಾನಗಿ ಇಲ್ಲದೆ ಅಕ್ರಮವಾಗಿ ನಾಡ ಬಂದೂಕುಗಳನ್ನು ಇಟ್ಟುಕೊಂಡಿದ್ದ ಇಬ್ಬರು ಆಸಾಮಿಗಳನ್ನು ಮಾರುವೇಷದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕೊರಟಗೆರೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ …
ತಾಲ್ಲೂಕಿನ ಬೆಂಡೋಣೆ ಗ್ರಾಮದ ನರಸಿಂಹಮೂರ್ತಿ ಮತ್ತು ಮಂಜೇಶ್ ಎಂಬುವವರೇ ಬಂಧಿತ ಆರೋಪಿಗಳು
ಇವರಿಬ್ಬರು ಕಾಡಿನ ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ಸರ್ಕಾರದಿಂದ ಪರವಾನಗಿ ಪಡೆಯದೇ ಅಕ್ರಮವಾಗಿ ನಾಡ ಬಂದೂಕುಗಳನ್ನು ಮನೆಯಲ್ಲಿಟ್ಟುಕೊಂಡಿದ್ದರು ..
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೊರಟಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ್ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ನಾಗರಾಜು ಸಿಬ್ಬಂದಿಗಳಾದ ಧರ್ಮಪಾಲ್ ನಾಯಕ್ ,ಮೋಹನ್, ಸೈಯದ್, ನಸ್ರುಲ್ಲಾಖಾನ್, ದಯಾನಂದ್, ಗಂಗಾಧರಪ್ಪ ,ನರಸಿಂಹಮೂರ್ತಿ, ಮತ್ತಿತರ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಬಂಧಿತ ಆರೋಪಿ ನರಸಿಂಹಮೂರ್ತಿ ಮನೆಯಲ್ಲಿದ್ದ ಒಂದು ನಾಡ ಬಂದೂಕು ಹಾಗೂ ಮಂಜೇಶ್ ಅಡಗಿಸಿಟ್ಟಿದ್ದ ಒಂದು ನಾಡ ಬಂದೂಕು ಹಾಗೂ ಹದಿನೈದು ಸಿಡಿಮದ್ದುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ..
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ …
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ …