ಗುಬ್ಬಿ: ಮಳೆರಾಯನ ಆರ್ಭಟಕ್ಕೆ ಸಿಲುಕಿರುವ ಸಾರ್ವಜನಿಕರು ದೂರನ್ನು ನೀಡಲು ಸಹಕಾರಿಯಾಗಲೆಂದು 08131-222234 ಈ ಸಹಾಯವಾಣಿಯನ್ನು ತೆರೆದಿದ್ದು, ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸದುಪಯೋಗಪಡಿಸಿಕೊಳ್ಳುವಂತೆ ತಹಶಿಲ್ದಾರ್ ಬಿ. ಆರತಿ ಅವರು ತಿಳಿಸಿದ್ದಾರೆ
ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಹಾಗೂ ಯಾವುದೇ ಅವಘಡಗಳು ಸಂಭವಿಸಿದ ವೇಳೆ ತುರ್ತು ಸೇವೆ ಪಡೆಯಲು ತಾಲೂಕ್ ಕಚೇರಿಯಲ್ಲಿ ಸಹಾಯವಾಣಿಯನ್ನು ತಾಲೂಕು ಆಡಳಿತವು ತೆರೆದಿದ್ದು ದೂರವಾಣಿ ಸಂಖ್ಯೆ 08131 – 222234 ಈ ಸಹಾಯವಾಣಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ, ಮನವಿ ಮಾಡಿದರು ಈ ಸಹಾಯವಾಣಿಯು ದಿನದ 24 ಗಂಟೆಯೂ ತೆರೆದಿರುತ್ತದೆ ಹಾಗಾಗಿ ಯಾವುದೇ ತುರ್ತು ಸೇವೆ ಪಡೆಯಲು ಈ ಮೇಲ್ಕಂಡ ಸಹಾಯವಾಣಿಗೆ ದೂರ ಇಡುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು.
ತಾಲೂಕಿನಾತ್ಯಂತ ಹೆಚ್ಚಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆದಿದ್ದು, ಅದರ ಕಾರ್ಯನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಹಾಯವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ನಾಳೆಯಿಂದ ದಿನಕ್ಕೆ ಮೂರು ಮಂದಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.