ಮಳೆಯಿಂದ ಸಂತ್ರಸ್ತರಾದವರು ಗಂಜಿ ಕೇಂದ್ರಕ್ಕೆ ಬರುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟಿಲ್ ಮನವಿ

ಮಧುಗಿರಿ: ಜಮೀನುಗಳು, ಮನೆ.ಶಾಲೆಗಳು ಮುಳುಗಡೆಯಾಗದ ಸ್ಥಳಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಟ್ರ್ಯಾಕ್ಟರ್ ಮೂಲಕ ವೀಕ್ಷಣೆ ಮಾಡಿದರು.

ಜಯಮಂಗಲಿ ತೀರದ ಚೆನ್ನಸಾಗರ, ಸೂರನಾಗೇನಹಳ್ಳಿ, ಎಂ.ಹೊಸಹಳ್ಳಿ, ಕಾಳೇನಹಳ್ಳಿ, ಸಿ.ವೀರಾಪುರ, ಕೋಡ್ಲಾಪುರ, ಇಮ್ಮುಡಗಹಳ್ಳಿ ಗ್ರಾಮಗಳು ಜಲಾವೃತಗೊಂಡಿವೆ. ಗ್ರಾಮದ ರಸ್ತೆಯಲ್ಲಿ ಸಂಚರಿಸಲು ಅನುವಾಗುವಂತೆ ಈಗಾಗಲೇ ಜೆಸಿಬಿಯಿಂದ ಕಾರ್ಯಾಚರಣೆ ಕೈಗೊಂಡಿದ್ದು, ಮುಂಜಾನೆಗಿಂತ ನೀರಿನ ಹರಿವಿನ ಪ್ರಮಾಣ ಮಧ್ಯಾಹ್ನದ ವೇಳೆಗೆ ಕಡಿಮೆಯಾಗಿದೆ. ಮಳೆ ನೀರಿನಿಂದ ಬಾದಿತರಾದವರಿಗೆ ರಕ್ಷಣೆ ನೀಡುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮ ಕಾರ್ಯಪಡೆಗೆ ಈಗಾಗಲೇ ನಿರ್ದೇಶನ ನೀಡಿದ್ದು, ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಾಲೆಗೆ ರಜೆ ಘೋಷಣೆ : ನದಿ ತೀರದ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದ್ದಾರೆ.

ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು ತಗ್ಗುಪ್ರದೇಶದಲ್ಲಿರುವ ನಿವಾಸಿಗಳು ಸಮೀಪದ ಗಂಜಿ ಕೇಂದ್ರಕ್ಕೆ ರವಾನೆಯಾಗುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟಿಲ್ ಮನವಿ ಮಾಡಿದರು.

ಕಳೆದ ಕೆಲವು ವರ್ಷಗಳಿಂದ ಕೆರೆ-ಕಟ್ಟೆಗಳಲ್ಲಿ ನೀರು ಕಾಣಲಾಗುತ್ತಿದೆ. ಆದರೆ, ಈ ಬಾರಿಯ ಪೂರ್ವ ಮುಂಗಾರಲ್ಲೇ ಬಹುತೇಕ ಜಲಮೂಲಗಳು ಭರ್ತಿಯಾಗಿವೆ. ವೀರಾಪುರ, ವೀರನಾಗೇನಹಳ್ಳಿ, ರೆಡ್ಡಿ ಹಳ್ಳಿ, ಸೂರನಾಗೇನಹಳ್ಳಿ ಚನ್ನಸಾಗರ ಇಮ್ಮಡಗೊಂಡನಹಳ್ಳಿ ರೆಡ್ ಅರ್ಲಟ್ ಪ್ರದೇಶವೆಂದು ಗುರುತಿಸಲಾಗಿದೆ ಈ ಗ್ರಾಮಗಳು ಜಯಮಂಗಲಿ ನದಿಯ ಸಮೀಪ ವಿರುವುದರಿಂದ ಗ್ರಾಮವು ಸಂಪೂರ್ಣ ವಾಗಿ ಜಲಾವೃತ್ತವಾಗಿದೆ ಹಾಗೂ ಗ್ರಾಮದ 80ಹೆಚ್ಚು ಕುಟುಂಬಗಳನ್ನು ಸ್ಥಳಾಂತರಕ್ಕೆ ಇಗಾಗಲೇ ಸೂಚನೆ ನೀಡಲಾಗಿದ್ದು ಗ್ರಾಮದ ಸರ್ವೋದಯ ಶಾಲೆಯ ಬಳಿ ಗಂಜಿ ಕೇಂದ್ರ ತೆರಯಲು ಸಂಪುರ್ಣ ವಾದ ಸಿದ್ಧತೆಗಳು ಆರಂಭಸಿಲಾಗಿದ್ದು ಸುಮಾರು 15 ವಿದ್ಯುತ್ ಕಂಬಗಳು ನದಿಯ ರಭಸಕ್ಕೆ ಮುರಿದು ಬಿದ್ದಿವೆ ಎಂದರು.

ಸಾರ್ವಜನಿಕರ ಸೇವೆಯಲ್ಲಿ ನಮ್ಮ ಅಧಿಕಾರಿಗಳು 24/7 ಸಿದ್ದರಿದ್ದು ಸಮಸ್ಯೆ ತೊಂದರೆಯಾದಲ್ಲಿ ತಕ್ಷಣ ತಹಶಿಲ್ದಾರ್ ಅಥವ ಉಪವಿಭಾಗಧಿಕಾರಿಗಳಿಗೆ ಕರೆ ಮಾಡಿ ಎಂದರು. ಅವಶ್ಯಕತೆ ಬಿದ್ದಲ್ಲಿ ಜನರ ಸ್ಥಳಾಂತರಕ್ಕಾಗಿ ಬೆಂಗಳೂರಿನಿಂದ ಎರಡು ಬೋಟ್ ಗಳನ್ನು ತರುವ ವ್ಯವಸ್ಥೆ ಮಾಡಲಾಗಿದ್ದು ಎನ್ ಡಿ ಆರ್ ಎಫ್ ತಂಡದ ನೆರವು ಪಡೆಯಲಾಗುತ್ತದೆ ಎಂದರು
ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್, ಉಪ ವಿಭಾಗಧಿಕಾರಿ ಸೋಮಪ್ಪ ಕಡಕೋಳ, ತಹಶಿಲ್ದಾರ್ ಸುರೇಶ್ ಆಚಾರ್ ಹಾಗೂ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!