ಅಜ್ಜಿಯನ್ನು ಯಾಮಾರಿಸಿ ಚಿನ್ನ ದೋಚಿ ಪರಾರಿ

ಪಾವಗಡ: ವೃದ್ಧಾಪ್ಯ ವೇತನದ ಕೊಡಿಸುವುದಾಗಿ ನಂಬಿಸಿ ವೃದ್ದೆಯೋರ್ವರನ್ನ ವಂಚಿಸಿದ ಘಟನೆ ಪಾವಗಡ ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಪಾವಗಡ ಪಟ್ಟಣದ ಗಾಂಧಿನಗರದ ಸುಮಾರು 68 ವರ್ಷದ ರಾಮಲಕ್ಷ್ಮಮ್ಮ ಕಳ್ಳನ ಮೋಸಕ್ಕೆ ತುತ್ತಾದ ವೃದ್ದೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಅಪರಿಚಿತ ವ್ಯಕ್ತಿಯೋರ್ವ ವೃದ್ದೆಯನ್ನ ಹಿಂಬಾಲಿಸಿ ನಾನು ಬ್ರಾಹ್ಮಣ ಬೀದಿಯ ಮಹೇಂದ್ರ ಎಂದು ನಂಬಿಸಿ ನಿಮಗೆ ವೃದ್ದಾಪ್ಯ ವೇತನ ಮಂಜೂರಾಗಿದೆ. ಆದೇಶ ಪತ್ರ ಕೊಡಿಸುತ್ತೇನೆ ಬಾ ಎಂದು ತೋಟಗಾರಿಕೆ ಇಲಾಖೆಗೆ ಕರೆದೊಯ್ದಿದ್ದಾನೆ. ಅಲ್ಲಿ ಹೇಗಾದರೂ ಮಾಡಿ ಚಿನ್ನ ಖದಿಯುವ ಪ್ರಯತ್ನದ ಪ್ಲಾನ್ ಮಾಡಿದ್ದಾನೆ ಅಷ್ಟು ವರ್ಕೌಟ್ ಆಗದ ಕಾರಣ ವೃದ್ದೆ ರಾಮಲಕ್ಷ್ಮಮ್ಮರನ್ನ ಮೇಡಮ್ ಅವರನ್ನ ಕಾಣ್ಬೇಕು ಎಂದೇಳಿ ತಾಲ್ಲೂಕು ಆಡಳಿತ ಕಚೇರಿಗೆ ಕರೆದೊಯ್ದಿದ್ದಾನೆ.ಅಲ್ಲಿ ಮೇಡಮ್ ಊಟ ಮಾಡ್ತಿದ್ದಾರೆ, ಇಲ್ಲೆ ಕೂತ್ಕೊ ಎಂದು ಕುಳ್ಳಿರಿಸಿ ನಮ್ಮ ತಾಯಿನೂ ಬರ್ತಿದ್ದಾರೆ ಅವರಿಗೂ ವೃದ್ದಾಪ್ಯ ವೇತನ ಮಾಡಿಸಬೇಕು ಎಂದು ಪೋನ್ ಮಾಡಿದಂತೆ ನಾಟಕವಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಖತರ್ನಾಕ್ ಕಳ್ಳ ಒಡವೆ ಇದ್ದರೆ ವೇತನ ಕಲ್ಪಿಸುವುದಿಲ್ಲ ಎಂದು ಬಿಚ್ಚಿಸಿ ನೋಡಿಕೊಡುತ್ತೇನೆ ನಾನು ಈಗಷ್ಟೆ 30 ಗ್ರಾಂ ಚಿನ್ನ ತೆಗೆದುಕೊಂಡೆ ಎಂದು ಯಾಮಾರಿಸಿದ ಭೂಪ ಬರ್ತಿನಿ ಎಂದು ಹೇಳಿ ತಾಲ್ಲೂಕು ಆಡಳಿತ ಕಚೇರಿಯ ಕೆಳಭಾಗಕ್ಕೆ ಇಳಿದಿದ್ದಾನೆ.ಹಿಂದೆಯೇ ವೃದ್ದೆಯೂ ಬಂದಿದ್ದಾಳೆ ಆದರೆ ಅಷ್ಟೊತ್ತಿಗೆ ಚಿನ್ನ ಕದ್ದ ಐನಾತಿ ಚೋರ ಎಸ್ಕೇಪ್ ಆಗಿದ್ದಾನೆ…ಕೂಡಲೆ ಪಾವಗಡ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.ತಾಲ್ಲೂಕು ಆಡಳಿತ ಕಚೇರಿಯ ಸಿ.ಸಿ.ಟಿವಿ ಪೂಟೇಜ್ ಗಮನಸಿದ ಪೊಲೀಸರಿಗೆ ಅಸ್ಪಷ್ಟ ವಾಗಿ ವೃದ್ದೆಯನ್ನ ಕರೆದೊಯ್ಯುತ್ತಿದ್ದ ವ್ಯಕ್ತಿಯ ಚಹರೆ ಕಂಡು ಬರುತ್ತಿದೆ ಎಂಬ ಮಾಹಿತಿಯಿದೆ.
ಇಂತಹ ಘಟನೆಗಳು ದಿನಬೆಳಗಾದರೆ ನಡೆಯುತ್ತಲೆ ಇರುತ್ತವೆ…ಮತ್ತೊಂದು ಕಡೆ ಪೊಲೀಸರು ಅಪರಿಚಿತ ವ್ಯಕ್ತಿಗಳು ಬಂದು ಚಿನ್ನ ಬೆಲೆ ಬಾಳುವ ವಸ್ತುಗಳನ್ನು ಕೇಳಿದರೆ ಕೊಡ್ಬೇಡಿ ಎಂದು ಎಷ್ಟೆ ಪ್ರಕಟಣೆ ಮಾಡಿದರೂ ಇಂತಹ ಅಮಾಯಕ ಮುಗ್ದ ಜನರು ಯಾಮಾರುತ್ತಲೆ ಇರುತ್ತಾರೆ. ಹಾಗಾಗಿ ಪೊಲೀಸ್ ಇಲಾಖೆ ಎಚ್ಚೆತ್ತು ಖತರ್ನಾಕ್ ಕಳ್ಳನನ್ನು ಹಿಡಿದು ಅಜ್ಜಿಗೆ ನ್ಯಾಯ ಕೊಡಿಸುವುದರ ಜೊತೆಗೆ ಇನ್ನಷ್ಟು ಜಾಗೃತಿ ಮೂಡಿಸುತ್ತ ಗಮನಹರಿಸಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಿದೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!