ವಿದ್ಯುತ್ ವೈರ್ ಕಳಚಿ ಬಿದ್ದು ಯುವಕ ಸಾವು

ಪಾವಗಡ: ಆಕಸ್ಮಿಕವಾಗಿ ವಿದ್ಯುತ್ ವೈರ್ ಹರಿದು ಬಿದ್ದು ಯುವಕನೋರ್ವ ದುರಂತ ಸಾವಿಗೀಡಾದ ಹೃದಯ ವಿದ್ರಾವಹ ಘಟನೆ ಪಾವಗಡ ತಾಲ್ಲೂಕಿನ ಬೊಮ್ಮತನಹಳ್ಳಿಯ ಜಮೀನಿನಲ್ಲಿ ಭಾನುವಾರ ಬೆಳಿಗ್ಗೆ 9 ರ ಸುಮಾರಿಗೆ ನಡೆದಿದೆ.
25 ವರ್ಷದ ರಮೇಶ್ ಮೃತ ದುರ್ದೇವಿಯಾಗಿದ್ದಾನೆ.
ಕೃಷ್ಣಪ್ಪ ಮತ್ತು ಶಕುಂತಲಮ್ಮ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಆಪೈಕಿ ಮೃತ ರಮೇಶ್ ಹಿರಿಯವನು.ಕೂಲಿ ನಾಲಿಮಾಡಿ ಜೀವನ ಸಾಗಿಸುತ್ತಿದ್ದರು.ಜೊತೆಗೆ ಒಂದಷ್ಟು ಕುರಿ ಸಾಕಿಕೊಂಡು ಬದುಕು ದೂಡುತ್ತಿದ್ದರು. ಇಂದು ಬೆಳಿಗ್ಗೆ ಬೆಳೆ ಇಟ್ಟ ಜಮೀನಿಗೆ ಹೋಗಿ ವಾಪಸ್ ಬರುವಂತ ವೇಳೆ ಗಿಡಗಳ ನಡುವೆ ಮೇನ್ ಪವರ್ ಲೈನ್ ಕಳಚಿ ಬಿದ್ದಿದೆ.ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನವೇನೋ ಮಾಡಿರಬಹುದು..ದೃಶ್ಯದಲ್ಲಿ ನೋಡ್ತಿರುವಾಗೆ ಬಿಗಿಯಾಗಿ ವೈರ್ ಹಿಡಿದುಕೊಂಡಿರುವುದು ಕಾಣುತ್ತದೆ.ಆದರೂ ಭಗವಂತನ ಕರಿನೆರಳು ಪಾಪ ರಮೇಶನ ಮೇಲೆ ಬಿದ್ದು ತಾನಿರುವ ಕಡೆ ಕರೆದುಕೊಂಡು ಬಿಟ್ಟಿದ್ದಾನೆ. ಕುಟುಂಬಸ್ಥರ ‍ಅಕ್ರಂದನ ನಿಜಕ್ಕೂ ಕಣ್ಣಂಚಲ್ಲಿ ಕಣ್ಣೀರು ತರಿಸದೆ ಇರದು.
ವಯಸ್ಸಿಗೆ ಬಂದ ಮಗ ಕಣ್ಣ ಮುಂದೆ ದುರಂತ ಸಾವಿಗೀಡಾಗಿದ್ದು ತಂದೆ ತಾಯಿಗೆ ಕುಟುಂಬಸ್ಥರಿಗೆ ಭರಿಸಲಾಗದ ನೋವಾಗಿ ಪರಿಣಮಿಸಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಹಾಯ ಹಸ್ತ ಚಾಚಿ ಪರಿಹಾರ ಕಲ್ಪಿಸಿದರೆ ಒಂದಷ್ಟು ಬದುಕಿಗೆ ಅನುಕೂಲವಾಗಬಹುದು.
ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಕಾಂತರೆಡ್ಡಿ,ಹಾಗೂ ವಿದ್ಯುತ್ ಇಲಾಖಾಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶಾಸಕ ವೆಂಕಟರಮಣಪ್ಪ ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!