ಕೊರಟಗೆರೆ :- ತಾಲ್ಲೂಕಿನ ಕಲ್ಲುಗುಟ್ಟರಹಳ್ಳಿ ಗ್ರಾಮದ ಭೀಮೇಗೌಡನ ಮಗ ರಾಮಕೃಷ್ಣಪ್ಪ 65 ವರ್ಷದ ವ್ಯಕ್ತಿ ಪಟ್ಟಣಕ್ಕೆ ಹೋಗಲು ಜಂಪೇನಹಳ್ಳಿ ಕ್ರಾಸ್ ಬಳಿ ಬಸ್ ಗಾಗಿ ಕಾಯುತ್ತಿದ್ದಾಗ ತೋವಿನಕೆರೆ ಮಾರ್ಗವಾಗಿ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರನೋರ್ವ ತನ್ನ ದ್ವಿಚಕ್ರ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗದೆ ಏಕಾಏಕಿ ವಿಶ್ರಾಂತಿ ಗೃಹದ ಬಳಿ ನಿಂತಿದ್ದ ರಾಮಕೃಷ್ಣಪ್ಪನಿಗೆ ಗುದ್ದಿದ್ದಾನೆ …
ದ್ವಿಚಕ್ರ ವಾಹನ ಸವಾರ ಗುದ್ದಿದ ರಭಸಕ್ಕೆ ರಾಮಕೃಷ್ಣಪ್ಪನ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ತಕ್ಷಣ ಆತನನ್ನು
ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ರಾಮಕೃಷ್ಣಪ್ಪ ಮೃತಪಟ್ಟಿದ್ದಾನೆ ….
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೃತ ರಾಮಕೃಷ್ಣಪ್ಪನ ಜೊತೆಯಲ್ಲಿದ್ದ ಸಂಬಂಧಿ ವಿಜಯ್ ಕುಮಾರ್ ದೂರು ನೀಡಿದ್ದು ..
ಕೊರಟಗೆರೆ ಪೋಲಿಸ್ ಠಾಣಾ ನೂತನ ಅಧಿಕಾರಿ ಸಿಪಿಐ ಸುರೇಶ್ ಹಾಗೂ ಪಿಎಸ್ ಐ ನಾಗರಾಜು ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ ..
ಇನ್ನೂ ಈ ಅನಾಹುತಕ್ಕೆ ಕಾರಣವಾದ ದ್ವಿಚಕ್ರವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದು ಆತನ ವಿರುದ್ಧ ಹಿಟ್&ರನ್ ಕೇಸ್ ದಾಖಲಿಸಲಾಗಿದ್ದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ ….
ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ