ನೆರೆ ಸಂತ್ರಸ್ತರಿಗೆ ನೆರವಾದ ಜಪಾನಂದ ಶ್ರೀಗಳು

ಕೊರಟಗೆರೆ ತಹಶೀಲ್ದಾರ್ ರವರ ಜನಪರ ಕೆಲಸಗಳಿಗೆ ಜಪಾನಂದ ಶ್ರೀಗಳ ಆಶೀರ್ವಾದ …

ನೆರೆ ಸಂತ್ರಸ್ತರ ಮನೆ ಬಾಗಿಲಿಗೆ ಆಹಾರಧಾನ್ಯಗಳನ್ನು ವಿತರಿಸಿ ಯೋಗಕ್ಷೇಮ ವಿಚಾರಿಸಿದ ಜಪಾನಂದ ಶ್ರೀಗಳು

ಕೊರಟಗೆರೆ :- ತಾಲ್ಲೂಕಿನಾದ್ಯಂತ ಬಿಟ್ಟುಬಿಡದೆ ಸುರಿಯುತ್ತಿರುವ ರಣಚಂಡಿ ಮಳೆಗೆ ಅಕ್ಷರಶಃ ಜನರು ಕಂಗಾಲಾಗಿ ಹೋಗಿದ್ದಾರೆ …

ಎಲ್ಲಿ ನೋಡಿದರು ಬೊಬ್ಬಿರಿದು ಅಬ್ಬರಿಸುತ್ತಿರುವ ಮಳೆರಾಯನ ಅವಾಂತರಕ್ಕೆ ರೈತರ ಬೆಳೆ ಹಾನಿಯಾಗಿರುವುದು ಒಂದು ಕಡೆಯಾದರೆ ಅದೆಷ್ಟೋ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ ..
ಇನ್ನೊಂದಷ್ಟು ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ …

ಇದೆಲ್ಲವನ್ನು ಮನಗಂಡಂತಹ ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಜಪಾನಂದ ಶ್ರೀಗಳು ಇಂದು ತಾಲ್ಲೂಕಿಗೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ದಿನಸಿ ಕಿಟ್, ಆರೋಗ್ಯಕಿಟ್ , ಹೊದಿಕೆ, ಸೀರೆ ಪಂಚೆ ಗಳನ್ನು ನೀಡುವುದಲ್ಲದೆ ಮರಳಿ ತೋರುತ್ತಿರುವ ಕುಟುಂಬಸ್ಥರಿಗೆ ಟಾರ್ಪಲ್ ಗಳನ್ನು ನೀಡಿದರು …

ತಹಶೀಲ್ದಾರ್ ನಾಹಿದಾ ಜಮ್ ಜಮ್ ಅವರು ಮಾತನಾಡಿದರು :-

ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಜನರ ಮನೆ ಕುಸಿದಿದೆ ಜೊತೆಗೆ ಮನೆಗಳಿಗೆ ನೀರು ನುಗ್ಗಿದೆ ದವಸ ಧಾನ್ಯಗಳನ್ನು ಕಳೆದುಕೊಂಡಿದರೆ
ಅಂತಹ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಈಗಾಗಲೇ ಸರ್ಕಾರದಿಂದ ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ನಮ್ಮ ತಾಲ್ಲೂಕಿನ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಜಪಾನಂದ ಶ್ರೀಗಳು ಆಗಮಿಸಿದ್ದಾರೆ ಅವರ ಸೇವೆ ಇಡೀ ರಾಜ್ಯಕ್ಕೆ ಅಪಾರವಾಗಿದೆ ಅಂತಹ ಶ್ರೀಗಳು ನಮ್ಮ ತಾಲ್ಲೂಕಿಗೆ ನೆಡಿ ಪ್ರತಿ ಗ್ರಾಮದ ಮನೆಮನೆಗೂ ಭೇಟಿ ನೀಡಿ ಸಂತ್ರಸ್ತರಿಗೆ ಬೇಕಾಗುವ ದಿನಸಿ ಪದಾರ್ಥಗಳು ಉಡುಗೆ ತೊಡುಗೆಗಳನ್ನು ನೀಡಿ ಉಪಚರಿಸಿದ್ದಾರೆ ಅವರಿಗೆ ನಮ್ಮ ತಾಲ್ಲೂಕಿನ ಜನತೆ ಹಾಗೂ ನಮ್ಮ ಇಲಾಖೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದರು ….

ಶ್ರೀ ರಾಮಕೃಷ್ಣ ಆಶ್ರಮದ ಜಪಾನಂದ ಶ್ರೀಗಳು ಮಾತನಾಡಿ :- ಇಂತಹ ತಹಶೀಲ್ದಾರ್ ರನ್ನು ಪಡೆದ ಇಲ್ಲಿನ ಜನರೇ ಪುಣ್ಯವಂತರು ಯಾವುದೇ ಸಂಕಷ್ಟದಲ್ಲಿರುವ ಜನರ ಕಷ್ಟಗಳನ್ನು ಅರಿತು ಅವರ ಮನೆ ಬಾಗಿಲಿಗೆ ಸಹಾಯವನ್ನು ನೀಡುವ ಇಂತಹ ಅಧಿಕಾರಿಗಳು ಇರುವವರೆಗೂ ಯಾರಿಗೂ ಕಷ್ಟ ಬರುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ ಇಂತಹ ನಿಷ್ಠಾವಂತ ಅಧಿಕಾರಿಗಳು ಪ್ರತಿ ತಾಲ್ಲೂಕಿಗೂ ಮತ್ತಷ್ಟು ಜನ ಬರಲಿ ಎನ್ನುವುದೇ ನನ್ನ ಕೋರಿಕೆ ನಾನು 35 ವರ್ಷಗಳಿಂದ ಸಂಕಷ್ಟದಲ್ಲಿರುವ ಬಡವರ ಸೇವೆ ಮಾಡುತ್ತಾ ಬಂದಿದ್ದೇನೆ ನನಗೆ ಇನ್ಫೋಸಿಸ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಕಾರ ಬಹುದೊಡ್ಡದಾಗಿದೆ ಆ ಸಂಸ್ಥೆಗಳ ಸಹಕಾರದಿಂದ ಇಂದು ಸಹಸ್ರಾರು ಬಡವರಿಗೆ ಸಾವಿರಾರು ನೆರೆ ಸಂತ್ರಸ್ತರಿಗೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ಸೇವೆಗಳನ್ನು ಮಾಡಲು ನನಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಅವರೆಲ್ಲರಿಗೂ ಭಗವಂತನು ಎಲ್ಲ ರೀತಿಯ ಸಕಲ ಸೌಕರ್ಯಗಳನ್ನು ಕೊಟ್ಟು ಕಾಪಾಡಲಿ ಎನ್ನುವುದೇ ನನ್ನ ಆಶಯ ಎಂದು ತಿಳಿಸಿದರು …

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!