75ನೇ ಸ್ವತಂತ್ರ ಅಮೃತ ಮಹೋತ್ಸವದ ಹರ್ ಘರ್ ತಿರಂಗ್ ಎಂದರೆ ಏನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ತಹಶೀಲ್ದಾರ್

date:- 8/08/2022

ಕೊರಟಗೆರೆ :- ಪಟ್ಟಣದ ಪ್ರತಿ ಶಾಲೆ ಕಾಲೇಜ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ತ್ರಿವರ್ಣ ಧ್ವಜದ ಅರಿವು ಮೂಡಿಸುವ ಕಾರ್ಯಕ್ರಮವನ್ನು ತಹಶೀಲ್ದಾರ್ ನಾಹಿದಾ ಜಮ್ ಜಮ್ ಏರ್ಪಡಿಸಿದ್ದರು ….

ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತ್ರಿವರ್ಣ ಧ್ವಜ ಎಂದರೆ ಏನು ಇದರ ಅರ್ಥವೇನು
ಎಂದು ಕೇಳಲು ವಿದ್ಯಾರ್ಥಿಗಳು ಮುಂದೆ ಬಂದರು..

ನಂತರ ಎಲ್ಲ ವಿದ್ಯಾರ್ಥಿಗಳನ್ನು ಕರೆದು ತಹಶೀಲ್ದಾರ್ ನಾಹಿದಾ ಜಮ್ ಜಮ್ ರಾಷ್ಟ್ರ ಧ್ವಜದ ಬಗ್ಗೆ ನಮಗೆಷ್ಟು ಈ ಗೌರವ ಇರಬೇಕು ಎಂಬುದು ತಿಳಿದುಕೊಳ್ಳಬೇಕು ಕಾಲೇಜ್ ವಿದ್ಯಾರ್ಥಿಗಳು ನೀವು ಎಲ್ಲವನ್ನು ತಿಳಿದುಕೊಂಡಿರಬೇಕು ರಾಷ್ಟ್ರಧ್ವಜ ನಾಡಧ್ವಜ ನಾಡು ನುಡಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು ನೀವು ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಬೇಕು ಎಂದು ತ್ರಿವರ್ಣ ಧ್ವಜದ ಬಗ್ಗೆ ಅರಿವಿನ ಮಾತುಗಳನ್ನ ತಿಳಿಸಿದರು …

ತಹಶೀಲ್ದಾರ್ ರವರು ಪ್ರಥಮ ದರ್ಜೆ ಕಾಲೇಜ್ ಗೆ ತೆರಳಿ ಪ್ರಾಂಶುಪಾಲರಿಗೆ ತ್ರಿವರ್ಣ ಧ್ವಜ ಎಂದರೆ ಏನು ಎಂಬುದರ ಮಾರ್ಗದರ್ಶನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೀಡುವಂತೆ ಮಾಹಿತಿ ನೀಡಿದರು …

ನಮ್ಮ ದೇಶದ ಮುಂದಿನ ಭವಿಷ್ಯವೇ ವಿದ್ಯಾರ್ಥಿಗಳ ಕೈಯ್ಯಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜದ ಬಗ್ಗೆ ಅರಿವು ಮೂಡಿಸಿ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಹರ್ ಘರ್ ತಿರಂಗ್ ಅಮೃತ ಮಹೋತ್ಸವದ ಮಾಹಿತಿ ತಿಳಿಸಿದರು …

ಈ ಅರಿವು ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿ ವರ್ಗದವರು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಧ್ಯಕ್ಷರು ಸದಸ್ಯರುಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು ..

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!