ಕೆ.ಎನ್.ರಾಜಣ್ಣ ಅವರ ಏಕಮುಖ ನಿರ್ಧಾರ ಹೇಳಿಕೆ ಖಂಡನೀಯ : ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸಲೀಂಪಾಷಾ.

ಗುಬ್ಬಿ: ತಾಲ್ಲೂಕಿನ ಚೇಳೂರು ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಗುಬ್ಬಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವುದು ಖಚಿತ ಎಂದು ಏಕಮುಖ ನಿರ್ಧಾರ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ಕಗ್ಗೊಲೆ ಎನಿಸುತ್ತದೆ. ಈ ಬಗ್ಗೆ ಗುಬ್ಬಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಅಭಿಪ್ರಾಯ ಅತ್ಯಗತ್ಯ ಪಡೆಯಬೇಕಿದೆ ಎಂದು ಗುಬ್ಬಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸಲೀಂಪಾಷಾ ನೇರ ಪ್ರತ್ಯುತ್ತರ ನೀಡಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸೆಂಬರ್ ತಿಂಗಳಲ್ಲಿ ಸೇರ್ಪಡೆ ಆಗುವುದು ಖಚಿತ. ಗುಬ್ಬಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಬಗ್ಗೆ ಬಹಿರಂಗ ಸಭೆಯಲ್ಲಿ ಮಾತನಾಡುವ ಮುನ್ನ ಪಕ್ಷದ ಅಧಿಕೃತ ಮಾಹಿತಿ ಬೇಕಿದೆ. ಕೆಪಿಸಿಸಿ, ಡಿಸಿಸಿ ಹಾಗೂ ವರಿಷ್ಠರಾಗಲಿ ಈ ಬಗ್ಗೆ ಮಾತನಾಡಿಲ್ಲ. ಇವರು ಈ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.

ಕೆಲ ತಿಂಗಳ ಹಿಂದೆ ಗುಬ್ಬಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಖಾಸಗಿ ಕಾರ್ಯಕ್ರಮ ವೇದಿಕೆಯಲ್ಲಿ ಗುಬ್ಬಿ ಶಾಸಕರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ಬಿಟ್ಟರೆ ಇನ್ಯಾವುದೇ ಮುಖಂಡರು ಈ ಬಗ್ಗೆ ಮಾತನಾಡಿಲ್ಲ. ನಮ್ಮ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರ ಒಮ್ಮತದ ಅಭಿಪ್ರಾಯಕ್ಕೆ ಮನ್ನಣೆ ಸಿಗಲಿದೆ ಎಂದ ಅವರು ಗುಬ್ಬಿ ಕ್ಷೇತ್ರದಲ್ಲಿ ಅಭಿವೃದ್ದಿ ವಿಚಾರದಲ್ಲಿ ಹಿನ್ನಡೆ ಕಂಡ ಶಾಸಕರ ಆಗಮನ ಸಾವಿರಾರು ಕಾಂಗ್ರೆಸಿಗರಿಗೆ ಬೇಕಿಲ್ಲ. ಈಗಾಗಲೇ ಬಿಜೆಪಿ ಪಕ್ಷಕ್ಕೆ ಹೋಗುವ ಬಗ್ಗೆ ಕೂಡಾ ವದಂತಿ ಹಬ್ಬಿದೆ. ಹೀಗೆ ಎರೆಡೆರಡು ಕಡೆ ಬುಕ್ ಮಾಡಿಕೊಳ್ಳುವ ಈ ನಡೆಯ ನಾಯಕರು ನಮಗೆ ಬೇಕಿಲ್ಲ ಎಂದು ನೇರ ಟೀಕಿಸಿದರು.

ರಾಜ್ಯಸಭಾ ಚುನಾವಣೆಯಲ್ಲಿ ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಮತ ನೀಡಿದ ಬಗ್ಗೆ ಈಗಾಗಲೇ ಸಾರ್ವಜನಿಕ ಚರ್ಚೆ ಆಗಿದೆ. ಇದಕ್ಕೆ ಸಾಕ್ಷಿಯಾಗಿ ಸಿಎಂ ಬೊಮ್ಮಾಯಿ ಅವರಿಗೆ ನೂರು ಕೋಟಿ ರೂಗಳ ಅನುದಾನ ಕೋರಿ ಬರೆದ ಮನವಿ ಪತ್ರ ಇದೆ. ಎಂದೂ ಅನುದಾನ ಕೇಳದೆ ಈಗ ನೂರು ಕೋಟಿ ಕೇಳಿದ್ದು ಜನತೆಯಲ್ಲಿ ಮೂಡಿದ ಅನುಮಾನವಾಗಿದೆ. ಇಂತಹ ದ್ವಂದ್ವ ನಿಲುವಿನ ಶಾಸಕರ ಓಲೈಸಿ ಮಾತನಾಡಿದ ರಾಜಣ್ಣ ಅವರ ಹೇಳಿಕೆ ಗುಬ್ಬಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ತಂದಿದೆ ಎಂದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!