ಅಧಿಕಾರಿಯಾಗಿದ್ದಾಗಲೇ ಬಿಜೆಪಿ ಪರ ಕೆಲಸ ಮಾಡಿದ ಅನಿಲ್‌ಕುಮಾರ್ ಕೊರಟಗೆರೆ ಕ್ಷೇತ್ರಕ್ಕೆ ಎಎಪಿ ಎಂಟ್ರಿ


ಕೊರಟಗೆರೆ: ಕೊರಟಗೆರೆ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಹೊರಟಿರುವ ಅನಿಲ್‌ಕುಮಾರ್ ಸರ್ಕಾರದ ಲೋಕೊಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಎಎಪಿ ಜಿಲ್ಲಾಧ್ಯಕ್ಷ ಮತ್ತು ಮೂರು ಜಿಲ್ಲೆಗಳ ವಲಯ ಸಂಯೋಜಕ ಡಾ. ಬಿ.ಎಲ್. ವಿಶ್ವನಾಥ್ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷ ಸೇರ್ಪಡೆ ಕರ‍್ಯಕ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್ ಅನಿಲ್ ಕುಮಾರ್ ಸೇವೆಯಲ್ಲಿದ್ದಾಗಲೇ ಮುಂಬರುವ ವಿಧಾನಸಭಾ ಚುನಾವಣೆಗೆ ಕೊರಟಗೆರೆ ಮೀಸಲು ಕ್ಷೇತ್ರದಿಂದ ಸ್ಪರ್ದಿಸುತ್ತಾರೆ ಎಂದು ಬಹುತೇಕ ಮಾಧ್ಯಮಗಳು ವರದಿ ಮಾಡಿದ್ದವು, ಇದಕ್ಕೆ ಪೂರಕವೆಂಬAತೆ ಅನಿಲ್ ಕುಮಾರ್‌ರವರು ತಮ್ಮ ಅಧಿಕಾರ ಅವಧಿಯ ಕಡೆಯ ೬ ತಿಂಗಳಲ್ಲಿ ವಿವಿಧ ಕಾರಣಗಳನ್ನಿಟ್ಟುಕೊಂಡು ರಾಜಕೀಯ ಪಕ್ಷದ ನಾಯಕನಂತೆ ಕ್ಷೇತ್ರದಲ್ಲಿ ರಾಜಕೀಯ ವ್ಯಕ್ತಿಗಳ ಜೊತೆ ಸಂಚರಿಸಿ ಮತ್ತು ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದು ಇದು ಎಐಎಸ್‌ಆರ್ ೧೯೬೮ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿ ರಾಜಕೀಯ ಮಾಡಿದ್ದಾರೆ ಹಾಗೂ ತಮ್ಮ ಅಧಿಕಾರಾವಧಿಯಲ್ಲಿ ಬೆಂಬಲಿಗರಿಗೆ ಇಲಾಖೆಯಿಂದ ಕೋಟ್ಯಾಂತರ ರೂ.ಗಳನ್ನು ಗುತ್ತಿಗೆ ನೀಡಿದ್ದಾರೆ, ಬೆಳ್ಳಾವಿ ಮೂಲದ ಇವರು ಅವರ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ನೀಡುವುದನ್ನು ಬಿಟ್ಟು ಕೊರಟಗೆರೆಗೆ ಬರುತ್ತಾರೆ ಎಂದರೆ ಇದು ಭ್ರಷ್ಟಾಚಾರಕ್ಕೆ ಮತ್ತೊಂದು ಮುಖವಾಗಿದೆ. ಈ ಘಟನೆಯು ದೇಶದÀಲ್ಲಿ ಎಲ್ಲಿಯೂ ಆಗಬಾರದೆಂದು ಎಎಪಿ ಪಕ್ಷ ಇವರ ವಿರುದ್ಧ ಸಂಬAಧಿಸಿದ ಇಲಾಖೆಗೆ ಮತ್ತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದರು.
ಎಎಪಿ ಪಕ್ಷ ದೇಶದಲ್ಲಿ ಭ್ರಷ್ಟಾಚಾರದ ವಿರುದ್ದ ಹೋರಾಡುವ ಏಕೈಕ ಪಕ್ಷವಾಗಿದೆ, ನಾವುಗಳು ಅನಿಲ್ ಕುಮಾರ್ ಒಬ್ಬರನ್ನೇ ನಿರ್ದಿಷ್ಟ ವ್ಯಕ್ತಿಯನ್ನಾಗಿ ಮಾಡುತ್ತಿಲ್ಲ. ಈ ರೀತಿ ಯಾವುದೇ ಸರ್ಕಾರಿ ಅಧಿಕಾರಿಗಳು ಮಾಡಬಾರದು. ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳಲ್ಲಿ ನಿವೃತ್ತಿಗೊಂಡ ತಕ್ಷಣ ರಾಜಕೀಯಕ್ಕೆ ಬರುವ ಪರ್ವ ಶುರುವಾಗಿದೆ. ಅದಕ್ಕಾಗಿ ಅವರು ಬೇಕಾದಂತಹ ಸಿದ್ದತೆ ಮತ್ತು ಭ್ರಷ್ಟಾಚಾರದ ಹಣ ಗಳಿಕೆಯಲ್ಲಿ ತೊಡಗುತ್ತಾರೆ. ಈ ರೀತಿ ಆದರೆ ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದ್ದು ಯಾವುದೇ ಸರ್ಕಾರಿ ಅಧಿಕಾರಿ ನಿವೃತ್ತಿಯಾದ ಒಂದು ವರ್ಷದ ನಂತರವಷ್ಟೇ ರಾಜಕೀಯಕ್ಕೆ ಬರಬೇಕು ಎಂಬ ಕಾನೂನು ತರಬೇಕು ಎಂದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಪಕ್ಷವನ್ನು ಸದೃಡವಾಗಿ ಬೂತ್ ಮಟ್ಟದಲ್ಲಿ ಕಟ್ಟಲು ಕಾರ್ಯಕರ್ತರನ್ನು ಸನ್ನದ್ದ ಮಾಡುತ್ತಿದ್ದೇವೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯಪ್ರ‍್ರವೃತ್ತರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೊರಟಗೆರೆ ವಿಧಾನಸಭಾ ಆಕಾಂಕ್ಷಿ ಅಭ್ಯರ್ಥಿ ನರಸಿಂಹಮೂರ್ತಿ, ೪ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸಂಚಾಲಕ ಪ್ರೇಮಕುಮಾರ್ ಅಂಕಸAದ್ರ, ಜಿಲ್ಲಾ ಯುವ ಅಧ್ಯಕ್ಷ ವಿಮಲ್ ಪಾಂಡೆ, ತಾಲೂಕು ಎಎಪಿ ಕಾರ್ಯದರ್ಶಿ ಆನಂದ್ ಹಾಗೂ ಪಕ್ಷದ ಮುಖಂಡರುಗಳಾದ ಚಿಕ್ಕಸ್ವಾಮಿಗೌಡ, ತಿಮ್ಮೇಗೌಡ, ಸೇರಿದಂತೆ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!