ಸ್ವಾತಂತ್ರ್ಯ ಹೋರಾಟಗಾರ ದೊಡ್ಡ ನರಸಪ್ಪರವರಿಗೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ರಿಂದ ಸನ್ಮಾನ

.

ಕೊರಟಗೆರೆ :- ತಾಲ್ಲೂಕಿನ ದುರ್ಗ ಹೋಬಳಿಯ ಕುರಂಕೋಟೆ ಗ್ರಾಮದ ದೊಡ್ಡ ನರಸಪ್ಪನವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಇಂತಹ ಮಹಾನ್ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ 75ನೇಭಾರತ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ಈ ದಿನ ಅಂತಹ ಮಹಾನ್ ವ್ಯಕ್ತಿಗೆ ಸನ್ಮಾನಿಸಿ ಸತ್ಕರಿಸಿದ ತಹಶೀಲ್ದಾರ್ ನಾಹಿದಾ ಜಮ್ ಜಮ್ ರವರ ದಕ್ಷ ಪ್ರಾಮಾಣಿಕತೆಯ ಕೆಲಸವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದ ಗ್ರಾಮಸ್ಥರು …

ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ತೆರಳಿ ಹರ್ ಘರ್ ತಿರಂಗಾ ಅಮೃತ ಮಹೋತ್ಸವ ಎಂದರೆ ಏನು ಎನ್ನುವುದರ ಮಹತ್ವವನ್ನು ಗ್ರಾಮೀಣ ಭಾಗದ ಪ್ರತಿ ಗ್ರಾಮದ ಮನೆ ಮನೆಗೂ ತಿಳಿಸುವ ಕೆಲಸ ಮಾಡುತ್ತಿರುವ ತಹಶೀಲ್ದಾರ್ ಅವರ ಕಾರ್ಯ ಪ್ರವೃತ್ತಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ ..

ಅದೇ ರೀತಿಯಾಗಿ ಕುರಂಕೋಟೆ ಗ್ರಾಮದ ದೊಡ್ಡನರಸಪ್ಪರವರು ಸ್ವಾತಂತ್ರದ ಸಮಯದಲ್ಲಿ ಮಹಾನ್ ವ್ಯಕ್ತಿಗಳ ಜತೆ ಸ್ವಾತಂತ್ರ್ಯ ಹೋರಾಟದಲ್ಲಿ ಇಂತಹ ಮಹಾನ್ ವ್ಯಕ್ತಿಗಳನ್ನು ನಾವು ಕಾಣುತ್ತಿರುವುದೇ ನಮ್ಮ ಭಾಗ್ಯ ಎಂದು ದೊಡ್ಡನರಸಪ್ಪನವರಿಗೆ ಸನ್ಮಾನಿಸಿ ಸತ್ಕರಿಸಿದರು …

ಇದೇ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಕುರಂಕೋಟೆ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು ..

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!