ಪಾವಗಡ: ಶಾಲಾ ಕೊಠಡಿಗಳ ದುರಸ್ಥಿಗೆ ಚಾಲನೆ

ಪಾವಗಡ: ಪಟ್ಟಣದ 110 ವರ್ಷಗಳ ಹಿಂದಿನ ಸರ್ಕಾರಿ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ನಿರ್ಮಾಣದ ಕಾರ್ಯದ ಜೊತೆಗೆ ಅಡುಗೆ ಕೋಣೆಯ ದುರಸ್ಥಿ ಕಾರ್ಯ ಯೋಜನೆಗೆ ಶ್ರೀ ರಾಮಕೃಷ್ಣ ಸೇವಾಶ್ರಮದ ಜಪಾನಂದಾಜೀಯವರು ಚಾಲನೆಯನ್ನ ಬುಧವಾರ ನೀಡಿದರು.

ಈ ವೇಳೆ  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಕವಿತಾ ಕೃಷ್ಣ ಅವರು ಮಾತನಾಡಿ 75 ನೇ ಸ್ವಾತಂತ್ರ್ಯಆಮೃತ ಮಹೋತ್ಸವದ ಸಂದರ್ಭದಲ್ಲೂ ಶಿಕ್ಷಕರು ಛರ್ತಿ ಹಿಡಿದು ಪಾಠ ಮಾಡುವ ಪರಿಸ್ಥಿತಿ ಇದೆ. ಇಂತಹ ಸಮಾಜ ಮುಖಿ ಕಾರ್ಯ ಕೈಗೊಂಡಿರುವುದು ಅತ್ಯಂತ ಶ್ಲಾಘನೀಯವಾದದ್ದು.ಅನ್ಯರಿಗೆ  ಜಪಾನಂದಾಜೀಯವರು ಪ್ರೇರಣೆಯಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಶ್ರೀ ರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ಯವರು ಮಾತನಾಡಿ ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಸೇವಾ ಕಾರ್ಯಕ್ಕೆ ಕೈ ಹಾಕಿದ್ದೇವೆ.2020 ರಲ್ಲಿ ದೂರ ಶಿಕ್ಷಣ ಯೋಜನೆಯೊಂದಿಗೆ ತಾಂತ್ರಿಕ ಕಲಿಕಾ ಉಪಕರಣಗಳನ್ನು ನೀಡಿದ್ದೇವೆ..ಇಂದು ನಾಲ್ಕು ಕೊಠಡಿಗಳು ಹಾಗೂ ಅಡುಗೆ ಕೋಣೆಯ ದುರಸ್ತಿ ಕಾರ್ಯ ನಡೆಸುವ ಯೋಜನೆಯಿದೆ.ಎರಡು ತಿಂಗಳೊಳಗೆ ಮುಗಿಸುತ್ತೇವೆ.ಲೋಕೇಶ್ ದೇವರಾಜ್ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಶಾಲೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ,ಮುಖ್ಯೋಪಾಧ್ಯಾಯರು ಗಂಗಪ್ಪ, ಶಿಕ್ಷಕರಾದ ಬಸವರಾಜು, ಆನಂದಪ್ಪ ಇನ್ನು ಹಲವರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!