ಕುಣಿಗಲ್
ಚಿತ್ರನಟ ಮಾಜಿ ಮಂತ್ರಿ ದಿ. ಅಂಬರೀಶ್ ರವರು ಅಗಲಿದ್ದರೂ ಸಹ ರಾಜ್ಯಾದ್ಯಂತ ಅವರ ಅಭಿಮಾನಿಗಳು ಸದಾ ನಮ್ಮೊಂದಿಗೆ ಇದ್ದಾರೆ ಎಂದು ಮಂಡ್ಯ ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್ ತಿಳಿಸಿದರು.
ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ನಾಗಮಂಗಲದ ಖಾಸಗಿ ಕಾರ್ಯಕ್ರಮಕ್ಕೆ ಹೋಗುವ ಮಾರ್ಗ ಮಧ್ಯ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೋಟೆ ನಾಗಣ್ಣ ಅಭಿಮಾನಿಗಳು ಬಿ.ಜೆ.ಪಿ ಮುಖಂಡ ಡಿ.ಕೃಷ್ಣಕುಮಾರ್ ಸಾವಿರಾರು ಕಾರ್ಯಕರ್ತರೊಂದಿಗೆ ಸುಮಲತಾ ಅಂಬರೀಶ್ ರವರಿಗೆ ಕುಣಿಗಲ್ ಜನತೆಯ ಪರವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಮಾತನಾಡುತ್ತಾ ರಾಜ್ಯಾದ್ಯಂತ ಅಂಬರೀಶ್ ಅಭಿಮಾನಿಗಳ ಇದ್ದು ಅವರ ಅಗಲಿಕೆಯ ನಂತರ ನೂರಾರು ವರ್ಷಗಳ ಕಾಲ ಜನರ ಪ್ರೀತಿ ವಿಶ್ವಾಸ ಸದಾ ನಮ್ಮ ಕುಟುಂಬದ ಮೇಲಿದೆ ಅಂಬರೀಶ್ ಪುತ್ರರಾದ ಅಭಿಷೇಕ್ ಗೌಡ ಅವರ ಮೇಲೆಯೂ ನಿಮ್ಮ ಪ್ರೀತಿ ವಿಶ್ವಾಸ ಜೊತೆಯಲ್ಲಿರಲಿ ಎಂದರು ಅಂಬರೀಶ್ ಅವರಿಗೆ ಕುಣಿಗಲ್ ಅವಿನವ ಭಾವ ಸಂಬಂಧವಿದ್ದು ಕುಣಿಗಲ್ಲಿನ ಕೋಟೆ ನಾಗಣ್ಣ ನಮ್ಮ ಕುಟುಂಬದ ಸಂಬಂಧದಲ್ಲಿ ಒಬ್ಬರಾಗಿದ್ದಾರೆ ತಮ್ಮಗಳ ಪ್ರೀತಿ ನಿರಂತರವಾಗಿರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುರುವೇಕೆರೆ ಶಾಸಕ ಮಸಾಲೆ ಜೈರಾಮ್. ರಾಜ್ಯ ಪಿ.ಎಲ್. ಡಿ ಬ್ಯಾಂಕ್ ಅಧ್ಯಕ್ಷ ಡಿ. ಕೃಷ್ಣಕುಮಾರ್.ಜಿಲ್ಲಾ ಅಂಬರೀಶ ಸಂಘದ ಅಧ್ಯಕ್ಷ ಕೋಟೆ ನಾಗಣ್ಣ ವೆಂಕಟೇಶ್ ಬಾಬು.ಬಿಜೆಪಿ ಅಧ್ಯಕ್ಷ ಬಲರಾಮ್.ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಂತೋಷ್. ಪುರಸಭಾ ಸದಸ್ಯರಾದ ಕೃಷ್ಣ. ಆನಂದ್ ಕುಮಾರ್( ಕಾಂಬ್ಳೆ ) ಬಿಜೆಪಿ ಮುಖಂಡ ಲಕ್ಕಣ್ಣ ಅನೇಕರು ಭಾಗವಹಿಸಿ ಅವರ ಆಗಮನ ಆಗುತ್ತಿದ್ದಂತೆ ಹೂವಿನ ಮಳೆ ಸುರಿಸಿ.ಪಟಾಕಿ ಸಿಡಿಸಿ.ವಾದ್ಯ ತಮಟೆಯೊಂದಿಗೆ ಸಹಸ್ರಾರು ಅಭಿಮಾನಿಗಳು ಮಹಿಳೆಯರು ಸಂಭ್ರಮಿಸಿದರು.