ಮಧುಗಿರಿ:- ಆಗಸ್ಟ್- 13ರಂದು ದೇಶದ ವೈಭವ ಹಾಗೂ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮಧುಗಿರಿಯಲ್ಲಿ ತ್ರಿವರ್ಣ ಧ್ವಜ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಹಾಗೂ ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ತಿಳಿಸಿದರು.
ಬುಧುವಾರ ರಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸದ ಪ್ರಯುಕ್ತ ಮಧುಗಿರಿಯಲ್ಲಿ ತ್ರಿವರ್ಣ ಧ್ವಜ ಯಾತ್ರೆಯನ್ನು ಮಧುಗಿರಿಯ ಐತಿಹಾಸಿಕ ಶಿರಾ ಗೇಟ್ ಬಳಿಯಿರುವ ದಂಡೋರ ಬಾಗಿಲಿನಿಂದ ಪ್ರಾರಂಭಗೊಂಡು ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರ ವರೆಗೂ ಯಾತ್ರೆ ನಡೆಯಲಿದೆ ಅಂದು ಮಧ್ಯಾಹ್ನ 2ಗಂಟೆಗೆ ಆರಂಭವಾದ ಯಾತ್ರೆ 5ಗಂಟೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು
ತಾಲ್ಲೂಕಿನಾದ್ಯಂತ ಹತ್ತು ಸಾವಿರ ಮನೆಗಳ ಮೇಲೆ ಬಾವುಟ ಹಾರಿಸುವ ಅಂಗವಾಗಿ ಈಗಾಗಲೇ ರಾಷ್ಟ್ರಧ್ವಜಗಳನ್ನು ಹಂಚಲಾಗಿದೆ ಎಂದು ತಿಳಿಸಿದರು.
ಈ ಯಾತ್ರೆ ಯಲ್ಲಿ 4 ಸಾವಿರಕ್ಕೂ ಹೆಚ್ಚು ದೇಶ ಭಕ್ತರು ಪಾಲ್ಗೊಳ್ಳಲಿದ್ದು ,ಯಾತ್ರೆಯ ವೇಳೆ ಸ್ವಾತಂತ್ರ್ಯ ಹೋರಾಟಗಾರ ವೇಷಭೂಷಣ ತೊಟ್ಟು ಬರುವವರಿಗೆ ಬಹುಮಾನ ವಿತರಣೆ ಇರುತ್ತದೆ ಎಂದು ತಿಳಿಸಿದರು.
ಈ ಯಾತ್ರೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳೊಂದಿಗೆ ತ್ರಿವರ್ಣ ಧ್ವಜ ಯಾತ್ರೆಯನ್ನು ಆಯೋಜಿಸುವ ಮೂಲಕ ಗೌರವ ಸಲ್ಲಿಸಲಾಗುವುದು
ಈ ಧ್ವಜ ಯಾತ್ರೆ ಕಾರ್ಯಕ್ರಮಕ್ಕೆ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ .ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ಜಗ್ಗೇಶ್ ,ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ,ವಿಧಾನ ಪರಿಷತ್ ಸದಸ್ಯರುಗಳಾದ ಎಂ. ಚಿದಾನಂದ ಗೌಡ ,ಕೆ. ಎನ್ .ನವೀನ್ ,ಭಾಜಪ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಮಧುಗಿರಿ ಜಿಲ್ಲಾ ಪ್ರಭಾರಿ ವಿಕಾಸ್ ಪುತ್ತೂರ್ ,ಭಾಜಪ ಮಧುಗಿರಿ ಜಿಲ್ಲಾಧ್ಯಕ್ಷ ಬಿ. ಕೆ.ಮಂಜುನಾಥ್, ಭಾಜಪ ಮಂಡಲ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಸಾವಿರಾರು ದೇಶ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಾಜಪ ಯುವ ಮೋರ್ಚಾ ಅಧ್ಯಕ್ಷ ಕಾರ್ತಿಕ ಅರಾಧ್ಯ, ನಾವು ಭಾರತೀಯರು ಪ್ರತಿಷ್ಠಾನದ ಮುಜಮಲ್ ಪಾಷಾ, ಜಿಲ್ಲಾ ಕಾರ್ಯಕಾರಿಣಿಯ ಗಣೇಶ್ ಹಾಗೂ ಇತರರು ಹಾಜರಿದ್ದರು.