ಗುಬ್ಬಿ: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿರುವ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಕೆ. ಗೋವಿಂದು ನೇತೃತ್ವದ ಸಿಬ್ಬಂದಿ ತಂಡ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರಪ್ಪ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತರಲು ಬಲಿದಾನ ಮಾಡಿದ ಅನೇಕರ ಶಾಂತಿ ಮತ್ತು ಕ್ರಾಂತಿ ಹೋರಾಟಕ್ಕೆ ದೊರೆತ ಸ್ವಾತಂತ್ರ್ಯ ಈ ವರ್ಷಕ್ಕೆ 75 ವರ್ಷಗಳು ತುಂಬುತ್ತಿದೆ. ಇದರ ಸವಿ ನೆನಪಿಗೆ ಅಂದು ನಮ್ಮ ಚಳವಳಿಯಲ್ಲಿ ಭಾಗಹಿಸಿದ್ದ ನಮ್ಮ ಹಿರಿಯ ಚೇತನಗಳು ಈಗ ಇರುವುದು ಬೆರಳೆಣಿಕೆಯಾಗಿದೆ. ಈ ಪೈಕಿ ಗುಬ್ಬಿಯ ಪರಮೇಶ್ವರಯ್ಯ ಅವರು ಇಂದಿನ 93 ನೇ ವಯಸ್ಸಿನಲ್ಲಿ ಈ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಅವರಿಗೆ ತಾಲ್ಲೂಕಿನ ಎಲ್ಲರ ಪರವಾಗಿ ಗೌರವಿಸುವುದು ನಾಗರೀಕರ ಕರ್ತವ್ಯ. ಹಾಗಾಗಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು ಎಂದು ಪ್ರಾಚಾರ್ಯ ಡಾ.ಕೆ.ಗೋವಿಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ನರಸೀಯಪ್ಪ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಬಾಗೇವಾಡಿ, ಸಮಾಜಶಾಸ್ತ್ರ ಮುಖ್ಯಸ್ಥ ಪ್ರೊ.ಆರ್.ಅಶೋಕ್, ಇತಿಹಾಸ ವಿಭಾಗ ಮುಖ್ಯಸ್ಥ ಡಾ.ಕೆ.ಆರ್.ರಮ್ಯಾ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಮಲ್ಲಿಕಾರ್ಜುನ ಪ್ರಭು, ಉಪನ್ಯಾಸಕ ಪ್ರೊ. ಎ.ಜಿ.ಶ್ರೀನಿವಾಸ್ ಮತ್ತು ಗುಬ್ಬಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹೆಚ್.ಡಿ.ಯಲ್ಲಪ್ಪ ಇತರರು ಇದ್ದರು.