ರಕ್ಷೆ-ರಕ್ಷಣೆ, ಬಂಧನ-ಸಂಬಂಧ ಎಂಬ ಎರಡು ಪದಗಳಿಂದ ಕೂಡಿದೆ

ಗುಬ್ಬಿ: ಪ್ರತಿ ವರ್ಷದಂತೆ ಈಬಾರಿಯು ರಕ್ಷಾ ಬಂಧನ ಹಬ್ಬವನ್ನು ಅಶ್ವತ್ಥ್ ಕಟ್ಟೆ ಸಮಿತಿ ವತಿಯಿಂದ ಅಶ್ವತ್ಥ್ ಕಟ್ಟೆ ದೇವಾಲಯದ ಆವರಣದಲ್ಲಿ ರಕ್ಷೆಯನ್ನು ಪರಸ್ಪರ ಕಟ್ಟಿಕೊಳ್ಳುವ ಮೂಲಕ ಆಚರಿಸಲಾಯಿತು.
ರಕ್ಷಾ ಬಂಧನ ಹಬ್ಬವು ಪ್ರಾಚೀನ ಕಾಲದಿಂದಲೂ ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದು, ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬಗಳಲ್ಲಿ ಒಂದು. ಈದಿನದಂದು ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಕ್ಷೆಯನ್ನು ಕಟ್ಟಿ ಆರತಿ ಮಾಡಿ ಸೋದರನ ಆಶಿರ್ವಾದ ಪಡೆಯುವುದು ನಡೆದು ಬಂದಿದೆ.
ಶಿರಸ್ತೇದಾರ್ ಖಾನ್ ಮಾತನಾಡಿ ಅಣ್ಣ-ತಂಗಿಯ ಜೀವನದ ಒಂದು ಉತ್ತಮ ಕಾರ್ಯ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದುವ ಹಬ್ಬವೇ ಈ ರಕ್ಷಾ ಬಂಧನ ಎಂದ ಅವರು ಈದಿನ ಸಹೋದರ ಸಹೋದರಿಯರಿಬ್ಬರ ನಡುವಿನ ಶುದ್ದ ಪವಿತ್ರ ಹಾಗೂ ನಿರಂತರ ಪ್ರೀತಿಯ ಗುರುತು ಜೊತಗೆ ಶಾಶ್ವತ ರಕ್ಷಣೆಗಾಗಿ ಮಂತ್ರದೊಂದಿಗೆ ಬೆರದಿರುವ ಹಬ್ಬವು ಇದಾಗಿದೆ ಎಂದು ತಿಳಿಸಿದರು.
ರಕ್ಷೆ-ರಕ್ಷಣೆ, ಬಂಧನ-ಸಂಬಂಧ ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ ಹಬ್ಬವು ಸಹೋದರ- ಸಹೋದರಿಯರ ನಡುವಿನ ಪ್ರೀತಿ ಮತ್ತು ಸಂಬಂಧ ಸಮಾನಾರ್ಧಕ ವಾಗಿದ್ದು, ಈ ಇಬ್ಬರ ನಡುವಿನ ಪ್ರೀತಿಯನ್ನು ಬಲಪಡಿಸುವ ಹಾಗೂ ಪುನರುಚ್ಚಿಸುವ ಉತ್ಸವ ಎಂದರೂ ತಪ್ಪೇನಿಲ್ಲ ಎಂದ ಅವರು ಒಂದು ಕಡೆ ಸಹೋದರ ಸಹೋದರಿಯನ್ನು ನೋಡುಕೊಳ್ಳುವುದಾಗಿ ಮತ್ತು ತನ್ನ ಜೀವನ ಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆಯು ಈ ರಕ್ಷಾ ಬಂಧನ ಹಬ್ಬವಾಗಿದೆ. ಎಂದು ತಿಳಿಸಿದರು.
ಈ ಮೊದಲು ಭಾರತ ಮಾತೆಗೆ ಪುಷ್ಪಾರ್ಜನೆಯನ್ನು ನೆರವೇರಿಸಿದ ನಂತರ ರಕ್ಷೆಯನ್ನು ಪರಸ್ಪರ ಕಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ.ಪಂ. ಅಧ್ಯಕ್ಷ ಅಣ್ಣಪ್ಪಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ನಧಾಫ್, ಸಮಿತಿಯ ಕೆ.ಸಂಜಯ್, ಬಿ. ಲೋಕೇಶ್, ವೀರಭದ್ರಪ್ಪ, ಭರತ್ ಗೌಡ, ಮುಖಂಡರುಗಳಾದ ರಮ್ಯಾ, ಮಮತಾ, ಗಂಗಣ್ಣ, ಲಾವಣ್ಯ, ರಮೇಶ್, ವಿಶ್ವ, ವಿನಯ್, ವಾಸು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!