ಪಾವಗಡ. ಪಾವಗಡ ಪಟ್ಟಣದ ನಾಗೇಂದ್ರ ಕುಮಾರ್ ಅವರ ಜನಸೇವಾ ಕಚೇರಿಯಲ್ಲಿ ಪಾವಗಡ ತಾಲೂಕಿನ ಬಡ ಹಾಗೂ ನಿರುದ್ಯೋಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಜನ ಸೇನಾ ಕಚೇರಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಪಾವಗಡ ತಾಲೂಕಿನ ವಿದ್ಯಾರ್ಥಿ ಸಮೂಹ ಈ ತರಬೇತಿಯ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ಜನನಾಯಕ ಸಮಾಜ ಸೇವಕ ನೆರಳಕುಂಟೆ ನಾಗೇಂದ್ರ ಅವರು ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತಿಳಿಸಿದರು
ಜನಸೇವಾ ಕಚೇರಿಯಲ್ಲಿ ಇಂದು ತರಬೇತಿ ಯನ್ನು ಪ್ರಾರಂಭ ಮಾಡಲಾಯಿತು
ಈ ಸಂದರ್ಭದಲ್ಲಿವಕೀಲರಾದ ಬ್ಯಾಡ ನೂರು ತಿಪ್ಪೇಸ್ವಾಮಿ. ನನಗಾನಳ್ಳಿ ಮಂಜುನಾಥ್ ಎಸ್ ಹನುಮಂತರಾಯಪ್ಪ. ಮುಂತಾದವರು ಭಾಗವಹಿಸಿದ್ದರು