ನನಗೆ ಜನ ಬೆಂಬಲ ರೇಖೆಯಿದೆ : ಕೆ. ಎನ್ ರಾಜಣ್ಣ

ಮಧುಗಿರಿ : ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ದೇಶಭಕ್ತರನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದೇ 75 ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುಖ್ಯ ಉದ್ದೇಶ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಎನ್ ರಾಜಣ್ಣ ತಿಳಿಸಿದರು.

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ದೊಡ್ಡೇರಿ ಹೋಬಳಿಯಿಂದ ಮಧುಗಿರಿ ಪಟ್ಟಣದ ಮಾಲೀಮರಿಯಪ್ಪ ರಂಗ ಮಂದಿರದವರೆಗೆ ಸಂಭ್ರಮದ ಬಾವೈಕ್ಯತಾ ನಡಿಗೆ ಕಾರ್ಯಕ್ರಮದಲ್ಲಿ 15 ಕಿ.ಮೀ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.  ಇಂದು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದರೂ ಎಲ್ಲಾ ಜಾತಿಯಲ್ಲೂ ಬಡವರಿದ್ದು,  ಇಂದಿಗೂ ಬಡತನದಲ್ಲಿ ಜೀವನ ನಡೆಸುತ್ತಿದ್ದು,  ಇಂತಹ ಬಡ ಜನರ ಬದುಕು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣವಾದಾಗ ಮಾತ್ರ ನಿಜವಾದ ಸ್ವಾತಂತ್ರ ಲಭಿಸಿದಂತೆ ಎಂದರು.

ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರಲ್ಲ : ಈಗ ಅಧಿಕಾರ ಅನುಭವಿಸುತ್ತಿರುವ ಬಿಜೆಪಿ ಸರ್ಕಾರದದಲ್ಲಿರುವ ಇವರ ಪೂರ್ವಜರೆಲ್ಲ ನಾವೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಬ್ರಿಟಿಷರಿಗೆ ಪತ್ರ ಬರೆದು ಕೊಟ್ಟವರು, ಆದರೆ ಅವರೇ ಇಂದು ದೇಶಭಕ್ತಿಯ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು

ನಮ್ಮ ರಾಷ್ಟ್ರದ ಬಾವುಟ ದೇಶದ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಶಕ್ತಿ ಮತ್ತು ಭಾವೈಕ್ಯತೆಯ ಸಂಕೇತ.  ಈ ಬಾವುಟಕ್ಕೆ ತನ್ನದೇ ಆದ ಇತಿಹಾಸವಿದ್ದು 75 ನೇ ಅಮೃತ ಮಹೋತ್ಸವ ದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಗಳು ಮುಂದಾಲೋಚನೆ ಮಾಡದೆ ತರಾತುರಿಯಲ್ಲಿ  ಚೈನಾ ಸೇರಿದಂತೆ ಇನ್ನಿತರೆ ದೇಶಗಳಿಂದ  ಪ್ಲಾಸ್ಟಿಕ್ ಮತ್ತು ಪಾಲಿಸ್ಟರ್ ಬಾವುಟಗಳನ್ನು ತಂದು ಜನರಿಗೆ ವಿತರಿಸಿದ್ದು,  ರಾಷ್ಟ್ರಧ್ವಜಕ್ಕೆ ಲೋಪ ವೆಸಗಿದಂತಾಗಿದೆ. ಆರ್ ಎಸ್ ಎಸ್ ನವರು ಅವರ ಕಚೇರಿ ಮೇಲೆ ಈ 75 ವರ್ಷದಲ್ಲಿ ಎಂದಾದರೂ ರಾಷ್ಟ್ರಧ್ವಜವನ್ನು ಹಾರಿಸಿದನ್ನು ಕಂಡಿದ್ದೀರಾ ಎಂದು ಪ್ರಶ್ನಿಸಿದ ಅವರು ಇಂದಿಗೂ ಸಹ ಅವರ ಕಚೇರಿ ಮೇಲೆ ಭಾಗವತ ದ್ವಜ  ಹಾರಿಸಿ ಅದರ ಕೆಳಗೆ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ರಾಷ್ಟ್ರಧ್ವಜವನ್ನು ದೇಶದ ಭಾವೈಕ್ಯತೆಯ ಸಂಕೇತ ಎಂಬುದನ್ನು ಆರ್ ಎಸ್ ಎಸ್ ನವರು ಎಂದಿಗೂ ಒಪ್ಪುವುದಿಲ್ಲ ಎಂದು ಕುಟುಕಿದರು ಎಂದರು.

ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ರಾಜಣ್ಣ ಮಾತನಾಡಿ ಅಭಿವೃದ್ದಿ ಕೆಲಸ ಮಾಡುವುದು ಬಿಟ್ಟು ದೇಶದಲ್ಲಿ  ಕೋಮು ಗಲಭೆ ಉಂಟುಮಾಡುವುದೇ ಬಿಜೆಪಿ ಸರ್ಕಾರದ ಕೆಲಸವಾಗಿದ್ದು, ಮಹಿಳೆಯರಿಗೆ, ಯುವಕರಿಗೆ ಭದ್ರತೆಯಿಲ್ಲದಂತಾಗಿದೆ.  

ಹಾಲು,  ಮೊಸರಿಗೂ ಜಿಎಸ್ಟಿ ವಿಧಿಸಲಾಗಿದೆ.  ಸಂವಿದಾನ ಬದಲಾವಣೆ ಮಾಡುತ್ತೇವೆ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿಕೆ ನೀಡುತ್ತಿದ್ದು, ಇದರಿಂದ ಯುವಕರು ಮಹಿಳೆಯರು ಮತ್ತು ತಳ ಸಮುದಾಯಗಳಿಗೆ ಬಹಳಷ್ಟು ಅನ್ಯಾಯವಾಗಲಿದೆ ಎಂದರು. 

ಮಾಜಿ ಶಾಸಕ ಕೆ.ಎನ್. ರಾಜಣ್ಣನವರು ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಸ್ಮರಿಸಿ. ಮುಂದಿನ ದಿನಗಳಲ್ಲಿ ಮಧುಗಿರಿ ಜಿಲ್ಲಾಕೇಂದ್ರವಾಗಲು, ಏಕಶಿಲಾ ಬೆಟ್ಟಕ್ಕೆ ಕೇಬರ್ ಕಾರ್, ಯುವಕರಿಗೆ ಉದ್ಯೋಗ, ಎತ್ತಿನಹೊಳೆ  ಮುಂತಾದ ಅಭಿವೃದ್ದಿ ಕಾರ್ಯಗಳಿಗೆ ಇದೊಂದು ಬಾರಿ ಕೆ.ಎನ್. ರಾಜಣ್ಣನವರಿಗೆ ಅವಕಾಶ ಮಾಡಿಕೊಟ್ಟು, ಸಚಿವರಾಗದೇ ಇರುವ ಕೊರಗನ್ನು ನೀಗಿಸಿ ಎಂದು ಮನವಿ ಮಾಡಿದರು. 

ನನಗೆ ಜನ ಬೆಂಬಲ ರೇಖೆಯಿದೆ : ಕಾರ್ಯಕ್ರಮದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಕಂಡು ಸಂತಸ ವ್ಯಕ್ತಪಡಿಸಿದ ರಾಜಣ್ಣನವರು ದೇಶಕ್ಕೆ ಗೌರವ ತರುವ ಉದ್ದೇಶದಿಂದ ಹಮ್ಮಿಕೊಂಡಿರುವ ಸಂಭ್ರಮದ ಭಾವೈಕ್ಯತಾ ನಡಿಗೆಯಲ್ಲಿ ನಿರೀಕ್ಷೆಗೂ ಮೀರಿ ತಾಲೂಕಿನ ಜನತೆ ಭಾಗವಹಿಸಿರುವುದು ನನಗೆ ಸಂತಸ ಮತ್ತು ಹೆಮ್ಮೆ ತಂದಿದೆ ಒಬ್ಬೊಬ್ಬರಿಗೆ ಒಂದೊಂದು ಅದೃಷ್ಟದ ರೇಖೆ ಇರುತ್ತದೆ ಎಂಬ ಮಾತಿದ್ದು,  ನನಗೆ ಜನ ಬೆಂಬಲದ ಅದೃಷ್ಟದ ರೇಖೆ ಇದೆ. ನನ್ನ 50 ವರ್ಷಗಳ ರಾಜಕೀಯದಲ್ಲಿ  ನಾನು ಜಾತಿ, ಹಣ,  ನಂಬಿ ರಾಜಕಾರಣ ಮಾಡಿದವನಲ್ಲ ಜನ ನಂಬಿ ರಾಜಕಾರಣ ಮಾಡಿದ್ದೇನೆ ಎಂದರು. 

ಮೊಳಗಿದ ಚುನಾವಣೆ ರಣ ಕಹಳೆ :  ನಾನೇನು ರಾಜಕೀಯ ಸನ್ಯಾಸಿಯಲ್ಲ ಎಂದ ರಾಜಣ್ಣ :  ಕೆ.ಎನ್. ರಾಜಣ್ಣನವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವದ ಪಾದಯಾತ್ರೆಗೆ ನಿರೀಕ್ಷೆಗೂ ಮಿರಿ ಜನ ಬೆಂಬಲ ವ್ಯಕ್ತವಾಗಿದ್ದು, ಸುಮಾರು 3 ಕಿ.ಮೀ ವರೆಗೂ  ಪಾದಯಾತ್ರೆ ಹಬ್ಬಿತ್ತು. ಸುಮಾರು 7 ಗಂಟೆಯ ಸಮಯ ನಡೆದ ಪಾದಯಾತ್ರೆಯಲ್ಲಿ ಪ್ರತೀ ಹಳ್ಳಿಯಲ್ಲೂ ಜನತೆ ರಾಜಣ್ಣನವರನ್ನು ಕುಂಬ ಮೇಳಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು. ದಾರಿಯುದ್ದಕ್ಕೂ ಮಜ್ಜಿಗೆ, ಪಾಣಕ, ಹೆಸರುಬೇಳೆ,  ಹಣ್ಣು, ಶರಬತ್ತು ವಿತರಣೆ ನಡೆಯಿತು.  ಕಾರ್ಯಕ್ರಮದಲ್ಲಿ  ನಿರೀಕ್ಷೆಗೂ ಮೀರಿ ಜನತೆ ಆಗಮಿಸಿದ್ದು, ಇದು ಚುನಾವಣೆಯ ರಣ ಕಹಳೆಯಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾನೇನೂ ರಾಜಕೀಯ ಸನ್ಯಾಸಿಯಲ್ಲ ಎಂದರು. 

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿದರು.

ಜಿ.ಪಂ ಮಾಜಿ ಅಧ್ಯಕ್ಷ ಜಿ.ಜೆ. ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಎಂ.ಕೆ ನಂಜುಂಡಯ್ಯ,  ಎನ್ ಗಂಗಣ್ಣ,  ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಬಿ ನಾಗೇಶ್ ಬಾಬು , ಜಿ.ಎನ್ ಮೂರ್ತಿ,  ಪುರಸಭಾ ಸದಸ್ಯರುಗಳಾದ ಎಂ.ಎಸ್. ಚಂದ್ರಶೇಖರ್, ಎಂ.ಜಿ.   ಉಮೇಶ್, ಗೋವಿಂದರಾಜು,  ಲಾಲಾ ಪೇಟೆ ಮಂಜುನಾಥ್, ಮಂಜುನಾಥ್ ಆಚಾರ್,  ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಇಂದಿರಾ ದೇನನಾಯಕ್,  ಸುವರ್ಣಮ್ಮ,  ಬಾಬಾ ಫಕ್ರುದ್ದೀನ್, ಎಸ್.ಬಿ.ಟಿ ರಾಮು,  ಪಿ.ಟಿ ಗೋವಿಂದಯ್ಯ, ಗ್ರಾ.ಪಂ ಅಧ್ಯಕ್ಷರಾದ ನರಸಿಂಹರೆಡ್ಡಿ,  ಡಿ.ಹೆಚ್ ನಾಗರಾಜು, ಸಿದ್ದಾಪುರ ವೀರಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್ ಡಿ ಕೃಷ್ಣಪ್ಪ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಸ್ ಡಿ ಕೆ ವೆಂಕಟೇಶ್ ಕಾರ್ಯಾಧ್ಯಕ್ಷ ನಾಗಾರ್ಜುನ ಮತ್ತಿತರರು ಹಾಜರಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!