ಸರ್ಕಾರಿ ಶಾಲೆಯಲ್ಲಿ ನಡೆದ ಅದ್ದೂರಿ ಸ್ವಾತಂತ್ರ್ಯ ಅಮೃತ ಮಹೋತ್ಸವ

ಕೊರಟಗೆರೆ :- ತಾಲ್ಲೂಕಿನ ಬೋಡಬಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 75ನೇ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು …

ಶಾಲೆಯ ಮಕ್ಕಳು ವಿಭಿನ್ನ ವೇಷಭೂಷಣಗಳನ್ನು ತೊಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೋಗುವ ಮುಖಾಂತರ 75ನೇ ಅಮೃತ ಮಹೋತ್ಸವವನ್ನು ತಮ್ಮ ಪೋಷಕರು ಕಣ್ತುಂಬಿಕೊಳ್ಳುವಂತೆ ನಡೆದರು …

ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹರೀಶ್ ಬಾಬು ಬಿ.ಹೆಚ್ ಧ್ವಜಾರೋಹಣವನ್ನು ನೆರವೇರಿಸಿ ನಂತರ ಶಾಲಾ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಶಾಲೆಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ..

ಕೊರೊನಾ ಎಂಬ ಮಹಾಮಾರಿಯಿಂದ ಎಲ್ಲಾ ದಿನಾಚರಣೆಗಳು ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು ಇದೀಗ ಎಲ್ಲಾ ಕಡೆ ಸಂಭ್ರಮದ ಮನೆ ಮಾಡಿದೆ
ಎದುರಿಸಿ ಇನ್ನು ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಹೆಚ್ಚು ವಿಜೃಂಭಣೆಯ ಕಾರ್ಯಕ್ರಮಗಳು ನೆರವೇರಲಿ ಎನ್ನುವುದೇ ನಮ್ಮೆಲ್ಲರ ಆಶಯ ..

ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಂಗನಾಥ್, ಸದಸ್ಯರಾದ ರಾಜಶೇಖರ್ ,ಹಾಗೂ ಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರು ,ಶಾಲೆಯ ಹಳೆ ವಿದ್ಯಾರ್ಥಿಗಳು , ಗ್ರಾಮಸ್ಥರು ಹಾಜರಿದ್ದರು …

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!