…
ಕೊರಟಗೆರೆ:- ಪಟ್ಟಣದಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ದೊಡ್ಡ ಗಲಾಟೆಯೇ ನಡೆದು ಹೋಗಿದೆ..
ನಾಳೆ ಜೆಡಿಎಸ್ ಮಾಜಿ ಶಾಸಕ ಸುಧಾಕರ್ ಲಾಲ್ ಹುಟ್ಟುಹಬ್ಬವಿದ್ದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರು ಹಾಲಿ ಶಾಸಕ ಡಾ. ಜಿ.ಪರಮೇಶ್ವರ್ ಬೆಂಬಲಿಗರು ಹಾಕಿದ್ದ ಫ್ಲೆಕ್ಸ್ ತೆರವುಗೊಳಿಸಿ ಸುಧಾಕರ್ ಲಾಲ್ ಗೆ ಶುಭಾಶಯ ಕೋರುವ ಫ್ಲೆಕ್ಸ್ ಕಟ್ಟಲು ಮುಂದಾಗಿದ್ರು..
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪರಮೇಶ್ವರ್ ಫ್ಲೆಕ್ಸ್ ತೆಗೆಯದಂತೆ ಪಟ್ಟು ಹಿಡಿದ್ರು..
ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಸಮರ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು..
ಕೂಡಲೇ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು.. ಬಳಿಕ ಜೆಡಿಎಸ್ ಕಾರ್ಯಕರ್ತರು ಸುಧಾಕರ್ ಲಾಲ್ ಫ್ಲೆಕ್ಸ್ ಕಟ್ಟಿ ತೆರಳಿದ್ರು.
ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ 2ಪಕ್ಷದ ಕಾರ್ಯಕರ್ತರು ಸ್ಟೇಷನ್ ಮೆಟ್ಟಿಲು
ಇರಬೇಕಾಯಿತು ..
2ಪಕ್ಷದ ಕಾರ್ಯಕರ್ತರಿಗೆ ಮರುದಿನ ಬೆಳಿಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಸಮ್ಮುಖದಲ್ಲಿ ಯಾರೂ ಕೂಡ ಒಬ್ಬರು ತಂಟೆಗೆ ಹೋಗದಂತೆ ತಿಳಿ ಹೇಳಿ ವಾಪಸ್ ಕಳಿಸಿದ್ದಾರೆ ..
ವರದಿ :-ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ