ಕೊರಟಗೆರೆಯ ಊಡುಗೆರೆ ಕ್ರಾಸ್ ಬಳಿಯಿರುವ ಶಾಮಿಲ್ ಹಿಂಭಾಗದಲ್ಲಿ ಜಮೀನೊಂದರಲ್ಲಿ ಗಾಂಜಾ ಸೊಪ್ಪಿನ ಗಿಡ ಬೃಹತ್ ಗಾತ್ರದಲ್ಲಿ ಪತ್ತೆ

:-


ಕೊರಟಗೆರೆ :- ತಾಲ್ಲೂಕಿನ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಬೆಳೆದಿದ್ದ ಗಾಂಜಾ ಸೊಪ್ಪಿನ ಗಿಡವನ್ನು ವಶಕ್ಕೆ ಪಡೆದಿದ್ದಾರೆ ..

ಇನ್ನೂ ಗಾಂಜಾ ಸೊಪ್ಪಿನ ಗಿಡ ಇದ್ದಂತಹ ಸ್ಥಳ ಖಾಸಗಿ ಜಮೀನಿನ ವ್ಯಕ್ತಿಗಳಾಗಿದ್ದು ಅವರಿಗೂ ಕೂಡ ಈಗ ಅಲ್ಲಿ ಬೆಳೆದಿರುವುದು ಗಮನಕ್ಕೆ ಬಂದಿರುವುದಿಲ್ಲ ಅವರು ವರ್ಷದಲ್ಲಿ 2ರಿಂದ 3ಬಾರಿ ಆ ಕಡೆ ಹೋಗುತ್ತಿದ್ದರು ಅಷ್ಟೆ

ಇನ್ನೂ ವಶಕ್ಕೆ ಪಡೆದಿರುವ ಗಾಂಜಾ ಸೊಪ್ಪು 2ಕೆಜಿ 200 ಗ್ರಾಂ ತೂಕವಿದ್ದೆ ಎಂದು ತಿಳಿದು ಬಂದಿದೆ

ಅಲ್ಲಿ ಬೆಳೆದಿರುವ ಗಾಂಜ ಸೊಪ್ಪಿನ ಗಿಡವು ಬೃಹದಾಕಾರವಾಗಿ ಬೆಳೆದಿರುವುದರಿಂದ ಅದು ಮಾಲೀಕರ ಕಣ್ಣಿಗೂ ಕೂಡ ಬಿದ್ದಿರುವುದಿಲ್ಲ ಇದು ಗಾಂಜಾ ಸೊಪ್ಪಿನ ಗಿಡ ಎಂದು ಅವರಿಗೂ ಕೂಡ ತಿಳಿದಿರುವುದಿಲ್ಲ ..

ಅಬಕಾರಿ ಇಲಾಖೆ ಅಧಿಕಾರಿಗಳು ಜಮೀನಿನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ ..

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಇತ್ತೀಚೆಗೆ ಗಾಂಜಾ ಬೆಳೆಯುವರ ಸಂಖ್ಯೆ ಹೆಚ್ಚಾಗಿದೆ ..

ಕೊರಟಗೆರೆ ಪೊಲೀಸ್ ಠಾಣೆ ಹಾಗೂ ಅಬಕಾರಿ ಇಲಾಖೆಯಲ್ಲಿ ಇತ್ತೀಚೆಗೆ ಗಾಂಜಾ ಹೆಚ್ಚು ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇಲ್ಲಿನ ಕೆಲವು ರೈತರ ಗಮನಕ್ಕೂ ಬಾರದೆ ಅದು ಗಾಂಜಾ ಸೊಪ್ಪಿನ ಗಿಡ ಎಂದು ಅವರಿಗೆ ಅರಿವು ಇರುವುದಿಲ್ಲ ಹೊಲದಲ್ಲಿ ಬೆಳೆಯುವ ಗಿಡ ಅದು ಕೂಡ ಎಂದು ಸುಮ್ಮನಿರುತ್ತಾರೆ
ಇನ್ನು ಕೆಲವರು ಗೊತ್ತಿದ್ದು ಈ ತರಹದ ತಪ್ಪುಗಳು ಮಾಡದಿದ್ದರೆ .

ಇವರು ಯಾರಿಗೂ ಕಾಣದಂತೆ ಗಾಂಜಾ ಬೆಳೆಯುತ್ತಿದ್ದಾರೆ ಆದರೆ ಇವರು ಎಲ್ಲಿಗೆ ಯಾರಿಗೆ ಸಾಗಿಸುತ್ತಿದ್ದಾರೆ ಎನ್ನುವುದು ಇಲ್ಲಿಯವರೆಗೂ ನಿಗೂಢವಾಗಿದೆ ..

ತಾಲ್ಲೂಕಿನಲ್ಲಿ ಒಂದಿಲ್ಲೊಂದು ಕಡೆ ಗಾಂಜಾ ಬೆಳೆಯುವುದು ಅಧಿಕಾರಿಗಳ ಕಣ್ಣಿಗೆ ಬೀಳುತ್ತಿದೆ ..

ಇಂತಹ ಕೃತ್ಯದಲ್ಲಿ ತೊಡಗಿರುವವರಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಎಡೆಮುರಿ ಕಟ್ಟಿದ್ದಾರೆ ..

ಆದರೂ ಅಲ್ಲೊಬ್ಬರು ಇಲ್ಲೊಬ್ಬರು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ
ಇವರಿಗೆ ಗಾಂಜಾ ಬೆಳೆಯುವ ಸೊಪ್ಪಿನ ಬೀಜಗಳು ಯಾರು ಕೊಡುತ್ತಾರೆ ಎಲ್ಲಿಂದ ಬರುತ್ತದೆ ಇವರು ಬೆಳೆದ ಸೊಪ್ಪನ್ನು ಯಾರಿಗೆ ಮಾರುತ್ತಾರೆ ಎನ್ನುವುದು ಇಲ್ಲಿಯ ತನಕ ನಿಗೂಡವಾಗಿದೆ ..

ಅದೇನೇ ಆಗಲಿ ಇಂತಹ ಮಾದಕ ವಸ್ತುಗಳನ್ನು ಬೆಳೆಯುವ ಇಂಥವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಇಲ್ಲದಿದ್ದರೆ ಮುಂದಿನ ನಮ್ಮ ಪೀಳಿಗೆ ಈ ಮಾದಕ ವಸ್ತುಗಳಿಗೆ ಬಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವುದು ಸ್ಥಳೀಯರ ಮಾತಾಗಿದೆ ..

ವರದಿ :- ಹರೀಶ್ ಬಾಬು ಬಿ.ಹೆಚ್ ಕೊರಟಗೆರೆ..

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!